ಸಾವಿರ ಸುಳ್ಳು ಹೇಳಿ ಪ್ರೀತ್ಸೋರು ಇರ್ತಾರೆ, ಮದುವೆ ಮಾಡೋರು ಇರ್ತಾರೆ! ನೂರ ಒಂದು ಗ್ರೀಟಿಂಗ್ ಕಾರ್ಡ್ ಒಟ್ಟಿಗೇ ಕೊಟ್ಟು - ಒಂದೊಂದ್ರಲ್ಲೂ ವಿಭಿನ್ನವಾಗಿ ನಿನ್ನ ಪ್ರೀತಿ ನಿವೇದಿಸಿ ಮೋಡಿ ಮಾಡಿದೋನು ನೀನೆ ಅನ್ಸುತ್ತೆ. ನೀ ಕೊಟ್ಟ ಅಷ್ಟೂ ಕಾರ್ಡ್ಗಳಲ್ಲಿ ನನ್ನ ತುಂಬಾ ಇಂಪ್ರೆಸ್ಸ್ ಮಾಡಿದ್ದು, ಇಗೋ ನಿನ್ನ ಈ ಸಾಲುಗಳು :
- "ಕನ್ನಡ ಓದೋಕೆ - ಬರೆಯೋಕೆ ಬರುತ್ತಾ? "
- "ನೀ ಬಲೆ ಬೀಸದೇನೆ ನಿನ್ನ ತೆಕ್ಕೆಯಲ್ಲಿ ಬಿದ್ದಿರುವೆನೆಂದರೆ, ಅದು ನನ್ನ ತಪ್ಪಲ್ಲ, ನಮ್ಮನ್ನು ಸೇರಿಸಬೇಕೆಂದು ಹೂಡಿರುವ ಭಗವಂತನ ಸಂಚು, ನಾ ಹೇಳೋದು ಅರ್ಥವಾಗುತ್ತ?"...
- "ಪ್ರೀತ್ಸೋಕೆ ಯಾರ ಅಪ್ಪಣೆ ಬೇಕು ಹೇಳು? ಅದು ನನ್ನ ಸ್ವಂತ. ಆದ್ರೆ ನಿನ್ನ ಹೊಗಳೋಕೆ ಬೇಕು, ಪ್ಲೀಸ್ ನಂಗೆ ಅನುಮತಿ ಕೊಡು"
- "ಈ ಹಿಂದೆ ನಾ ಯಾರನ್ನು ಪ್ರೀತ್ಸೇ ಇಲ್ಲ ಅಂತಲ್ಲ, ಸುಳ್ ಸುಳ್ಳೆಲ್ಲ ನಂಗೆ ಹೇಳೋಕೆ ಬರೋಲ್ಲ. ಬದುಕು ಅಂತಿದ್ರೆ ಅದು ಇಂಥವಳ ಜೊತೆ ಮಾತ್ರ ಅಂತ ಅನಿಸಿದ್ದು ನಿನ್ನ ನೋಡಿದ ಮೇಲೆ"...
- "ಆದ್ರು ತಪ್ಪೇ ಮಾಡದೆ - ನಿನ್ನ ಮುಂದೆ ತಪ್ಪಿತಸ್ತನ ಹಾಗೆ ನಿಲ್ಲ ಬಲ್ಲೆ"
- "ನಾನು ಸಾಯೋ ತನಕ ಮಾತ್ರ ಅಲ್ಲ - ಸತ್ತಮೇಲೂ ನನ್ನಷ್ಟು ನಿನ್ನನ್ನ ಪ್ರೀತ್ಸೋರು ಈ ಭೂಮಿ ಮೇಲೆ ಇರೋಕೆ ಸಾಧ್ಯನೇ ಇಲ್ಲ"......
ಹೀಗೆಲ್ಲ ಬರೆದು, ನನ್ನ ಬೆನ್ನಟ್ಟಿದ ಬೇತಾಳ ನೀನೆ. ಅಲ್ಲಿಯವರೆಗೂ ಶಾರುಖ್ ಖಾನ್ ಬಿಟ್ಟು ನ೦ಗ್ಯಾರು ಹಿಡ್ಸಿರ್ಲಿಲ್ಲ. ನೀನಂತು ಯಾವ ಕಡೆಯಿಂದಲೂ SRK ಹಂಗಿರ್ಲಿಲ್ಲ, ಮತ್ತೆ ನೀ ಇಷ್ಟವಾಗಿದ್ದಾದರು ಹೇಗೆ? ಪ್ರೀತಿಗೆ ಕಣ್ಣಿಲ್ಲ ಅನ್ನೋದು ಇದಕ್ಕೇನಾ :) ನಿನ್ನ ಲವ್ ಲೆಟರ್ ಪೂರ ಹಂಸಲೇಖರ ಸಾಲುಗಳನ್ನ ಬರೆದು ಬರೆದು ಪ್ರೀತಿ ಗಿಟ್ಟಿಸಿಕೊಂಡ ಏಕೈಕ ಪ್ರೇಮಿ ನೀನೆ. ಅದಕ್ಕೆ ನೋಡು ಪ್ರತಿ V-Day ದಿನ ಹಂಸಲೇಖರ ಹಾಡಿನ CD ತಪ್ಪದೆ ಖರೀದಿಸ್ತೀನಿ.
ನಿಜ ಹೇಳಲಾ? ನೀನಿಲ್ಲ ಅಂತ ನಂಗೆ ಅನಿಸೋದೇ ಇಲ್ಲ. ಉಸಿರಾಡೊವಾಗೆಲ್ಲ ನೆನಪಾಗ್ತೀಯ ಅಂದ್ರೆ, ನಿನ್ನನ್ನ ಎಷ್ಟು ಬಾರಿ ನೆನಪಿಸಿಕೊಳ್ತೀನಿ ಅಂತ ನೀನೆ ಲೆಕ್ಕ ಹಾಕು. ಮತ್ತೊಂದು ನಿಜ! "ನಿನ್ನಷ್ಟು ನನ್ನ ಪ್ರೀತ್ಸೋರು - ನನ್ನಸ್ಟು ನಿನ್ನ ಪ್ರೀತ್ಸೋರು ಈ ಭೂಮಿ ಮೇಲೆ ಇರೋಕೆ ಸಾಧ್ಯವೇ ಇಲ್ಲ".
ನಿಜ ಹೇಳಲಾ? ನೀನಿಲ್ಲ ಅಂತ ನಂಗೆ ಅನಿಸೋದೇ ಇಲ್ಲ. ಉಸಿರಾಡೊವಾಗೆಲ್ಲ ನೆನಪಾಗ್ತೀಯ ಅಂದ್ರೆ, ನಿನ್ನನ್ನ ಎಷ್ಟು ಬಾರಿ ನೆನಪಿಸಿಕೊಳ್ತೀನಿ ಅಂತ ನೀನೆ ಲೆಕ್ಕ ಹಾಕು. ಮತ್ತೊಂದು ನಿಜ! "ನಿನ್ನಷ್ಟು ನನ್ನ ಪ್ರೀತ್ಸೋರು - ನನ್ನಸ್ಟು ನಿನ್ನ ಪ್ರೀತ್ಸೋರು ಈ ಭೂಮಿ ಮೇಲೆ ಇರೋಕೆ ಸಾಧ್ಯವೇ ಇಲ್ಲ".
ಅಬ್ಭ ಕಂಗಳು ಮಂಜಾಗ್ತಿವೆ, ಗಂಟಲಿಗೂ ಕಷ್ಟವಾಗ್ತಿದೆ, ಬೇಗ ಹೇಳ್ಬಿಡ್ತೀನಿ, ಇವತ್ತು ವಿಶೇಷ,
Happy Valentine's Day ಮತ್ತೆ, ಮತ್ತೆ, I L ..............
<3 <3 <3
Happy Valentine's Day ಮತ್ತೆ, ಮತ್ತೆ, I L ..............
<3 <3 <3
ವರ್ಷದ ಉದ್ದಕ್ಕೂ ಪಕ್ಕನೇ ಹೃದಯವನ್ನು ಸೆರೆ ಹಿಡಿಯಬಲ್ಲ ಮನ ಮೋಹಕ ಸಾಲುಗಳು ಒಲವಿನ ಓಲೆಗೆ ಎಲ್ಲರಿಗೂ ದಕ್ಕುತಿರಲಿ.
ReplyDeleteಸಾವು ಗೆರೆಯಾಗದ ಪ್ರೇಮ ಲೋಕ ಎಲ್ಲರ ನೆಲೆಯಾಗಲಿ.
ಪುಟ್ಟದಾದ ಆಪ್ತ ಬರಹ.
ಕನ್ನಡ ಪ್ರಭಕ್ಕೆ ಧನ್ಯವಾದಗಳು.
Happy Valentine's Day for you both!
ReplyDelete