ಅ(ವನ) - ಕ(ವನ)
ಬಿರಿದೆ ಹೂ ನಗೆ
ಅವರಿವರ ಕಡೆಗೆ
ಬರೆದೆ ಮೌನಗಳ
...ನಿನ್ಹೆಸರ ಪಡೆಗೆ
********
ನೀನಿರುವ ಮೋಹದಲಿ
ನಡೆಯುತಿದೆ ಸುಲಿಗೆ
ನಾನೇ ಇರದ ಕವಿತೆಗಳು
ಅವರಿವರ ಪಾಲಿಗೆ....
********
ಕನಸೆಲ್ಲ ಹಗಲಲ್ಲೇ
ನಿಶೆ ಈಗ ಕನಸೇ
ಪುಸಲಾವಣೆ ಬೇಕೇ
ಅರೆನಗೆಯ ಶಶಿಗೆ
********
ಅಳಿದುಳಿದ ನಾಳೆಗಳ
-ಕಡೆಗೆ ಕನವರಿಕೆ
ಅರಿಯದಿರೆ ಬೇಡಬಿಡು
ಕಡೆಗೆ ಮನವರಿಕೆ
********
. ಕನಸು ನನಸು, ದಿನ ಘಳಿಗೆ, ಇರುವ ಇದ್ದಿರದ ಕನವರಿಕೆಗಳ ಚಂದದ ಮೆರವಣಿಗೆ...ಚಂದದ ಸಾಲುಗಳು..
ReplyDeleteDhanyavaada Srikanth :)
Deleteಚೆನ್ನಾಗಿದೆ ರೂಪಾ ಮೇಡಂ..
ReplyDeleteಅಳಿದುಳಿದ ನಾಳೆಗಳ
-ಕಡೆಗೆ ಕನವರಿಕೆ
ಅರಿಯದಿರೆ ಬೇಡಬಿಡು
ಕಡೆಗೆ ಮನವರಿಕೆ
ತುಂಬಾ ಇಷ್ಟವಾದ ಸಾಲುಗಳು....
Thank you Dileep :)
Deleteಚಂದದ ಸಾಲುಗಳು ಮೇಡಮ್... ಬೇರೆ ಬೇರೆಯಾಗಿ ಓದಿದರೂ ಚೆನ್ನ....ಒಂದಕ್ಕೊಂದು ಸೇರಿಸಿ ಓದಿದರೂ ಚೆಂದ...
ReplyDeleteThanks Dinakar.... Nanage blog bareyoke or maintain maadoke barodilla... ashtistu en bariteeno adu illi haakteeni ashte :)
Deleteತುಂಬಾ ಸುಂದರ ಸಾಲುಗಳು ರೂಪಕ್ಕ....
ReplyDeleteDhanyavaada Ashok..... :)
Delete