Sunday, September 2, 2012

ಅ(ವನ) - ಕ(ವನ)

ಅ(ವನ) - ಕ(ವನ)

ಬಿರಿದೆ ಹೂ ನಗೆ

ಅವರಿವರ ಕಡೆಗೆ

ಬರೆದೆ ಮೌನಗಳ

...ನಿನ್ಹೆಸರ ಪಡೆಗೆ

********

ನೀನಿರುವ ಮೋಹದಲಿ

ನಡೆಯುತಿದೆ ಸುಲಿಗೆ

ನಾನೇ ಇರದ ಕವಿತೆಗಳು

ಅವರಿವರ ಪಾಲಿಗೆ....

********
ಕನಸೆಲ್ಲ ಹಗಲಲ್ಲೇ

ನಿಶೆ ಈಗ ಕನಸೇ

ಪುಸಲಾವಣೆ ಬೇಕೇ

ಅರೆನಗೆಯ ಶಶಿಗೆ

********
ಅಳಿದುಳಿದ ನಾಳೆಗಳ

-ಕಡೆಗೆ ಕನವರಿಕೆ

ಅರಿಯದಿರೆ ಬೇಡಬಿಡು

ಕಡೆಗೆ ಮನವರಿಕೆ

********

8 comments:

  1. . ಕನಸು ನನಸು, ದಿನ ಘಳಿಗೆ, ಇರುವ ಇದ್ದಿರದ ಕನವರಿಕೆಗಳ ಚಂದದ ಮೆರವಣಿಗೆ...ಚಂದದ ಸಾಲುಗಳು..

    ReplyDelete
  2. ಚೆನ್ನಾಗಿದೆ ರೂಪಾ ಮೇಡಂ..

    ಅಳಿದುಳಿದ ನಾಳೆಗಳ
    -ಕಡೆಗೆ ಕನವರಿಕೆ
    ಅರಿಯದಿರೆ ಬೇಡಬಿಡು
    ಕಡೆಗೆ ಮನವರಿಕೆ

    ತುಂಬಾ ಇಷ್ಟವಾದ ಸಾಲುಗಳು....

    ReplyDelete
  3. ಚಂದದ ಸಾಲುಗಳು ಮೇಡಮ್... ಬೇರೆ ಬೇರೆಯಾಗಿ ಓದಿದರೂ ಚೆನ್ನ....ಒಂದಕ್ಕೊಂದು ಸೇರಿಸಿ ಓದಿದರೂ ಚೆಂದ...

    ReplyDelete
    Replies
    1. Thanks Dinakar.... Nanage blog bareyoke or maintain maadoke barodilla... ashtistu en bariteeno adu illi haakteeni ashte :)

      Delete
  4. ತುಂಬಾ ಸುಂದರ ಸಾಲುಗಳು ರೂಪಕ್ಕ....

    ReplyDelete

ಟೂರಿಸ್ಟ್ ಫ್ಯಾಮಿಲಿ ...Tourist Family, an ode to humanity & compassion :)

ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...