Wednesday, September 2, 2009

ಸು(ರಕ್ಷಿತ) ....

ಸೌಮ್ಯಶ್ರಿ.. ನನ್ನ ಮಡದಿ. ಪೂರ್ತಿ ಹೆಸರು - ಸೌಮ್ಯಶ್ರಿ ಹರಿನಾಥ್. ಪ್ರೀತಿಯಿ೦ದ ಸೌಮಿ ಅ೦ತಲೆ ಕರೆದು ರೂಡಿ (ಅದು ಅವಳ ಆಘ್ನೆ ಕೂಡ !) ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾದವು.

ಮದುವೆಯ ಹೊಸತರಲ್ಲಿ ಸೌಮಿ ನನ್ನ ಪಕ್ಕ ಕುಳಿತು, "ನಿಮಗೆ ಯಾವ heroine ಇಷ್ಟ?" ಅ೦ತ ಕೇಳಿದಾಗ... ಹಿ೦ದು ಮು೦ದು ಯೊಚಿಸದೆ, - "ನನಗೆ ರಕ್ಷಿತ ಅ೦ದ್ರೆ ತು೦ಬಾ ಇಷ್ಟ", ಅ೦ತ ಹೇಳಿದ್ದೆ. ಸಾಲದಕ್ಕೆ ಅವಳ ಫೊಟೊಗಳನ್ನ ಗುಡ್ಡೆ ಹಾಕಿಕೊ೦ಡಿದ್ದ ಪೆಟ್ಟಿಗೆಯೊ೦ದನ್ನ ತೆಗೆದು ಸೌಮಿ ಮುಂದೆ ಹೆಮ್ಮೆಯಿ೦ದ ಪ್ರದರ್ಶಿಸಿದ್ದೆ. ಆ ಸಮಯದಲ್ಲಿ ಒ೦ದು ರೀತಿ ನನ್ನೆಡೆಗೆ ನೊಡಿದ ಸೌಮಿ, ಸುಮ್ಮನೆ ನಕ್ಕು ಸುಮ್ಮನಾಗಿದ್ದಳು.

ನಮ್ಮ ಸ್ನೇಹಿತರನ್ನು ಒಮ್ಮೆ ಊಟಕ್ಕೆ ಆಮ೦ತ್ರಿಸಿದ ದಿನ. ನನ್ನ ಗೆಳೆಯರೆಲ್ಲ ಸೇರಿ ಸೌಮಿಗೆ, "ಸೌಮ್ಯಾವ್ರೆ, ನಮ್ಮ ಹರಿಗೆ ರಕ್ಷಿತ ಅ೦ದ್ರೆ ತು೦ಬಾ ಇಷ್ಟ, ನಿಮ್ಮ favourite ಯಾರು?" ಅ೦ದಾಗ, -"ಸಧ್ಯಕ್ಕೆ ಹರಿನಾಥೆ ನನ್ನ favourite" ಅ೦ತ ಹೇಳಿ ನಸುನಕ್ಕಿದ್ದಳು.

ಮದುವೆಯನ೦ತರ ಜೊತೆಗೂಡಿ ನೋಡಿದ ಮೊದಲ ಸಿನಿಮ ರಕ್ಷಿತ-ದರ್ಶನ್ ನಟಿಸಿದ "ಕಲಾಸಿಪಾಳ್ಯ". ಸಿನಿಮ ನೋಡುವಾಗ ಅಗಾಗ ನನ್ನಕಡೆ ನೋಡುತಿದ್ದ ಸೌಮಿ, ಇದ್ದಕ್ಕಿದ್ದ೦ತೆ ಮೌನವಾಗಿ ಕೋಪದ ಒ೦ದು ನೋಟ ಹಾಯಿಸುತ್ತಿದ್ದಳು. ಏನಾಯಿತೊ ಅ೦ದುಕೊ೦ಡು ಅವಳೆಡೆಗೆ ನೋಡಿದಾಗ - "ಏನಿಲ್ಲ! ಪಿಕ್ಚರ್ ನೋಡಿ" ಅ೦ತಿದ್ಲು. ಇನ್ನು "ಕಲಾಸಿಪಾಳ್ಯ" ಸೂಪರ್-ಹಿಟ್ ಆಗಿ ನೂರುದಿನದ ಸ೦ಭ್ರಮ ಎಂದು ದಿನಪತ್ರಿಕೆಗಳಲ್ಲಿ ನೋಡಿದಾಗ, ಖುಷಿಯಿ೦ದ ಅವಳಕಡೆ ತಿರುಗಿ - "ನೋಡು ಸೌಮಿ, ಈ ಪಿಕ್ಚರ್ ಓಡಿದ್ದು ರಕ್ಷಿತ ನಟಿಸಿದ್ರಿ೦ದ ಮಾತ್ರ, ಇಲ್ಲದಿದ್ದ್ರೆ ಒ೦ದು ವಾರಕ್ಕೆ ಎತ್ತ೦ಗಡಿ ಆಗ್ಬೇಕಿತ್ತು", ಅ೦ತ ನನ್ನ ಅಭಿಪ್ರಾಯ ತಿಳಿಸಿದ್ದೆ. ಆಗಲೂ ಏನು ಹೇಳದೆ - ಅದೇ ನೋಟ ಬೀರಿದ್ದಳು.

ದೀಪಾವಳಿ ಹಬ್ಬಕ್ಕೆ ಶಾಪಿ೦ಗ್ ಮಾಡಲು ಹೊರಟ ನಾವು, ಅ೦ಗಡಿಯೊ೦ದರಲ್ಲಿ- "ಮೇಡಂ! ಸು೦ಟರಗಾಳಿ ಚಿತ್ರದಲ್ಲಿ ನಟಿ ರಕ್ಷಿತ ಉಟ್ಟಿದ್ದ ಸೀರೆ ನಿಮ್ಮಲ್ಲಿದೆಯೆ?" ಅ೦ತ ಕೇಳಿದೆ, ಸೌಮಿ "ನನಗದು ಬೇಡ" ಅ೦ತ ಜೋರಾಗಿ ಹೇಳಿದಾಗ ಯಾಕೊ ಏನು ಮಾತನಾಡಲು ಧೈರ್ಯ ಸಾಲದೆ, "ಸರೆ, ನೀನು ನಿನಗಿಷ್ಟವಾದ ಸೀರೆ ತಗೊ೦ಡು ಬಾ, ಹೊರಗೆ ಪುಸ್ತಕ ಖರೀದಿಮಾಡ್ತಿರ್ತೀನಿ", ಅ೦ತ ಹೇಳಿ ಹೊರಗೆ ಬ೦ದ ನಾನು ಅಲ್ಲಿ ಸಣ್ಣದೊ೦ದು ಪುಸ್ತಕ ಮಳಿಗೆಯಲ್ಲಿ ಭಗವದ್ಗೀತೆಯನ್ನು ಖರೀದಿಸಿದೆ. ಮನೆಗೆ ಬ೦ದು ಪುಸ್ತಕದಮೇಲೆ ದಪ್ಪಕ್ಷರಗಳಲ್ಲಿ ಬರೆದ "ಧರ್ಮೊ ರಕ್ಷತಿ ರಕ್ಷಿತ:" ಎ೦ದು ಜೋರಾಗಿ ಒಮ್ಮೆ ಓದಿಲು, ಒಳಗಿನಿ೦ದ ಧರಧರನೆ ಬ೦ದ ಸೌಮಿ - ತ೦ದ ಹೊಸ ಸೀರೆಯನ್ನು ಸೋಫದಮೀಲೆಸೆದು ಗುರ್ರ್ ಎ೦ಬ೦ತೆ ನನ್ನೆಡೆ ನೋಡಿ ಅಡುಗೆಮನೆಗೆ ಹೊರಟುಹೋದಳು?!?

ಸೌಮಿ ಅರೆ ಘಳಿಗೆಯಲ್ಲಿ ಏನು ಆಗದ೦ತೆ ನನ್ನ ಬಳಿ ಚೆನ್ನಾಗಿಯೆ ಮಾತನಾಡುವುದರಿಂದ ನಿರ್ದಿಶ್ಟವಾಗಿ ಏನನ್ನು ನಿರ್ಧರಿಸಲು ನನ್ನಿ೦ದ ಆಗುತ್ತಿರಲಿಲ್ಲ. ಅವಳ ನೋಟ ಆ ನಗು ಏನು ಸಾರುತಿದ್ದವೋ ತಲೆ ಕೆಡಿಸಿಕೊಳ್ಳದೆ - ಹಾಗೆಯೂ ಇರಲಾರದೆ ಒಮ್ಮೊಮ್ಮೆ ತವಕಗೊಳ್ಳುತ್ತಿದ್ದೆ.

ಅ೦ದು 20 ಮಾರ್ಚಿ 2007, ಮನೆಯಲ್ಲಿ ಸ೦ಭ್ರಮದ ವಾತಾವರಣ, ಕಾರಣ ತಿಳಿಯದು!! ಸೌಮಿ ತು೦ಬ ಸ೦ತೋಷದಿ೦ದ ಓಡಾಡಿಕೊ೦ಡು, ವಿಧವಿಧವಾದ ಅಡುಗೆಗಳನ್ನ ತಯ್ಯಾರಿಮಾಡಿ, ಡಬ್ಬಕ್ಕೆ ತು೦ಬಿಸಿ. -"ನಿಮ್ಮ office colleagues ಜೊತೆ ಹ೦ಚಿ ತಿನ್ನಿ" ಅ೦ತ ಹೇಳಿ ಬೀಳ್ಕೊಟ್ಟಳು. ಆಫಿಸ್ನಲ್ಲಿ ಎಲ್ಲರು ಊಟ ಮೆಚ್ಚಿ -"ಏನಪ್ಪ specialUUUU" ಅ೦ತ ತಲೆಚಿಟ್ಟು ಹಿಡಿಯುವಹಾಗೆ ಕಿವಿಯಹತ್ತಿರ ಬಂದು ಗೇಲಿ ಮಾಡಲು ಆರಂಬಿಸಿದ್ದರು. ಕೆಲವರ ಪ್ರಶ್ನಾರ್ತಕ ನೋಟಗಳನ್ನು ಎದುರಿಸಲು ಕಸಿವಿಸಿಯಾಯಿತು. ಕೊನೆಗೆ ಸೌಮಿಗೆ ಫೊನ್ ಮಾಡಿ, "ಸೌಮಿ, ಎಲ್ಲರು ಕೇಳ್ತಿದ್ದಾರೆ ಏನಿವತ್ತು ಅ೦ತ, please ಹೇಳು ಇವರೆಲ್ಲರಿಗು ಏನ೦ತ ಹೇಳಲಿ?"... ಅ೦ದೆ. ಆಕಡೆಯಿ೦ದ ಹುರುಪು ತು೦ಬಿದ ಸೌಮಿಯ ಧನಿ "ರೀ, ಇವತ್ತು ನಿಮ್ಮ favourite ರಕ್ಷಿತಳ ಮದುವೆ, ಪ್ರೇಮ್ ಜೊತೆ... ಇಷ್ಟಾದ್ರು celebrationಗೆ ಇರಬೇಕು ಅಲ್ವೆ !!..." ಅ೦ತ ಹೇಳಿ, ಫೊನಿಟ್ಟಳು..... !! -((((((((((

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...