Posts

Showing posts from April, 2017

ವಾಟ್ಸಾಪ್ ರಾಯರೆ??

"ಅಷ್ಟು ಸಲ ಕಾಲ್ ಮಾಡ್ತಿದೀನಿ ತೆಗಿಯಕ್ಕೇನು ದಾಡಿ ನಿಂಗೆ.  ಅಪ್ಪ ಎಲ್ಲಿ??? ಲ್ಯಾಂಡ್ ಲೈನ್ಗೆ ಕಾಲ್ ಮಾಡಿದ್ರು ತೆಗೀತಿಲ್ಲ ... ಅಪ್ಪ ಎಲ್ಲಿ? ಎಲ್ಲೋದ್ರು.... ಆ ಮೊಬೈಲ್ ಹಿಡ್ಕೊಂಡು ಎಲ್ಲಾದ್ರೂ ಕೂತಿರ್ತಾರೆ ನೋಡು, ಅದೊಂದು ಕಯ್ಯಲ್ಲಿದ್ರೆ ಜವಾಬ್ದಾರಿಗಳೆಲ್ಲ ಮಾರ್ತೊಗಿರ್ತಾರೆ. ನಂಗೆ ನಂಗೆ ಬರ್ತಿರೋ ಸಿಟ್ಟಿಗೆ  ನೀನು ... ನೀನು ... ಛೇ !!! ಸುಮ್ನೆ ಫೋನ್  ಇಡು, ಮನೆಗೆ ಬಂದು ಮಾಡ್ತೀನಿ" , ಅಂತ ಆಫೀಸಿನ ಫೋನಲ್ಲಿ ತನ್ನ ಹೆಂಡತಿಗೆ ಗದರಿ ಫೋನ್ ಇಟ್ಟ ಸುಕೇಶ್. 
"ಯಾರಮ್ಮ ಫೋನಲ್ಲಿ... ನಿನ್ ಗಂಡನೇ? ನಾನ್ ಬರೋಷ್ಟ್ರಲ್ಲಿ ಆ  ಲ್ಯಾಂಡ್ ಲೈನ್  ಬಡ್ಕೊಂಡ್  - ಬಡ್ಕೊಂಡು ಕಟ್ ಆಯ್ತು. ಹೋಗ್ಲಿ ಬಿಡು. ಏನಂತೆ? ನನ್ನೇ ಬೈತಿರ್ತಾನೆ ನಂಗೊತ್ತು. ಮೊಬೈಲಲ್ಲಿ ನನ್ ಫ್ರೆಂಡು ಅಮೇರಿಕಾದಿಂದ ವಿಡಿಯೋ ಕಳ್ಸಿದಾನೆ, ಅಬ್ಬಬ್ಭಾ ಏನ್ ಚೆಂದ ಇದೆ ಅಂತೀಯಾ. ತುಂಬಾ ಖುಷಿಯಾಗಿದ್ದಾನೆ. ಅವ್ನ ಮಕ್ಕಳು ಮೊಮ್ಮಕ್ಕಳ ಜೊತೆ ತೆಗ್ಸಿರೋ ಡಿಸ್ನಿ ವರ್ಲ್ಡ್ ಫೋಟೋಗಳೂ ಇವೆ. ನಿಂಗೂ ವಾಟ್ಸಾಪ್ ಮಾಡ್ಲಾ?? ನೋಡ್ತೀಯ!" ಅಂದ್ರು ಶ್ರೀಪತಿ ರಾಯರು ಸೊಸೆಯ ಕಡೆಗೆ. 
"ಮಾವ, ನಿಮ್ಮ ಮಗ ಸಂಜೆ ಬಂದು ರಾದ್ಧಾಂತ ಮಾಡ್ತಾರೆ ಅನ್ಸುತ್ತೆ. ಅವ್ರ ಮುಂದೆ ಮೊಬೈಲ್ ಇಟ್ಕೊಂಡು ಕೂರ್ಬೇಡಿ. ಎಷ್ಟು ಸಲ ಹೇಳೋದು  ನಿಮ್ಗೆ. ನೀವು ಬೈಸ್ಕೊಳ್ತೀರ, ನಂಗೂ ಬೈಸ್ತೀರ. ನಂಗ್ಯಾವ್ದು ಫೋಟೋ ಗೀಟೊ ಕಳಿಸ್ಬೇಡಿ." ಅಂತ ಗೊಣಗಾಡಿಕೊಂಡೇ ತನ್ನ ರ…