Posts

ವಾಟ್ಸಾಪ್ ರಾಯರೆ??

"ಅಷ್ಟು ಸಲ ಕಾಲ್ ಮಾಡ್ತಿದೀನಿ ತೆಗಿಯಕ್ಕೇನು ದಾಡಿ ನಿಂಗೆ.  ಅಪ್ಪ ಎಲ್ಲಿ??? ಲ್ಯಾಂಡ್ ಲೈನ್ಗೆ ಕಾಲ್ ಮಾಡಿದ್ರು ತೆಗೀತಿಲ್ಲ ... ಅಪ್ಪ ಎಲ್ಲಿ? ಎಲ್ಲೋದ್ರು.... ಆ ಮೊಬೈಲ್ ಹಿಡ್ಕೊಂಡು ಎಲ್ಲಾದ್ರೂ ಕೂತಿರ್ತಾರೆ ನೋಡು, ಅದೊಂದು ಕಯ್ಯಲ್ಲಿದ್ರೆ ಜವಾಬ್ದಾರಿಗಳೆಲ್ಲ ಮಾರ್ತೊಗಿರ್ತಾರೆ. ನಂಗೆ ನಂಗೆ ಬರ್ತಿರೋ ಸಿಟ್ಟಿಗೆ  ನೀನು ... ನೀನು ... ಛೇ !!! ಸುಮ್ನೆ ಫೋನ್  ಇಡು, ಮನೆಗೆ ಬಂದು ಮಾಡ್ತೀನಿ" , ಅಂತ ಆಫೀಸಿನ ಫೋನಲ್ಲಿ ತನ್ನ ಹೆಂಡತಿಗೆ ಗದರಿ ಫೋನ್ ಇಟ್ಟ ಸುಕೇಶ್. 
"ಯಾರಮ್ಮ ಫೋನಲ್ಲಿ... ನಿನ್ ಗಂಡನೇ? ನಾನ್ ಬರೋಷ್ಟ್ರಲ್ಲಿ ಆ  ಲ್ಯಾಂಡ್ ಲೈನ್  ಬಡ್ಕೊಂಡ್  - ಬಡ್ಕೊಂಡು ಕಟ್ ಆಯ್ತು. ಹೋಗ್ಲಿ ಬಿಡು. ಏನಂತೆ? ನನ್ನೇ ಬೈತಿರ್ತಾನೆ ನಂಗೊತ್ತು. ಮೊಬೈಲಲ್ಲಿ ನನ್ ಫ್ರೆಂಡು ಅಮೇರಿಕಾದಿಂದ ವಿಡಿಯೋ ಕಳ್ಸಿದಾನೆ, ಅಬ್ಬಬ್ಭಾ ಏನ್ ಚೆಂದ ಇದೆ ಅಂತೀಯಾ. ತುಂಬಾ ಖುಷಿಯಾಗಿದ್ದಾನೆ. ಅವ್ನ ಮಕ್ಕಳು ಮೊಮ್ಮಕ್ಕಳ ಜೊತೆ ತೆಗ್ಸಿರೋ ಡಿಸ್ನಿ ವರ್ಲ್ಡ್ ಫೋಟೋಗಳೂ ಇವೆ. ನಿಂಗೂ ವಾಟ್ಸಾಪ್ ಮಾಡ್ಲಾ?? ನೋಡ್ತೀಯ!" ಅಂದ್ರು ಶ್ರೀಪತಿ ರಾಯರು ಸೊಸೆಯ ಕಡೆಗೆ. 
"ಮಾವ, ನಿಮ್ಮ ಮಗ ಸಂಜೆ ಬಂದು ರಾದ್ಧಾಂತ ಮಾಡ್ತಾರೆ ಅನ್ಸುತ್ತೆ. ಅವ್ರ ಮುಂದೆ ಮೊಬೈಲ್ ಇಟ್ಕೊಂಡು ಕೂರ್ಬೇಡಿ. ಎಷ್ಟು ಸಲ ಹೇಳೋದು  ನಿಮ್ಗೆ. ನೀವು ಬೈಸ್ಕೊಳ್ತೀರ, ನಂಗೂ ಬೈಸ್ತೀರ. ನಂಗ್ಯಾವ್ದು ಫೋಟೋ ಗೀಟೊ ಕಳಿಸ್ಬೇಡಿ." ಅಂತ ಗೊಣಗಾಡಿಕೊಂಡೇ ತನ್ನ ರ…

ಕಲ್ಬೆಂಚು

Image
ಹಗುರಾಗಿ  ಬಂದು  ಸೋಕಿ ಹೋಗುವ  ಗುಲ್ಮೊಹರಿನ  ಪಕಳೆ ...
ಅಂಗೈನ  ರೇಖೆಗೊತ್ತುವ  ತರಗೆಲೆಗಳ  ಮೊನಚು ತುದಿ ...

ಉಸಿರಿಗೆ  ತಾಕಿ  ನಡೆದುಬಿಡುವ  ತಂಗಾಳಿಯ ನಿಶಬ್ಧ ಮೌನ...
ಬೆರಳುಗಳ  ನಡುವೆ  ಸರಕ್ಕನೆ ಜಾರುವ  ಗುಂಡಿಗೆಯಂತ  ಒರಟುಗಲ್ಲು ...

ಕಲ್ಬೆಂಚಿನ ಮೇಲೆ  ನೆನಪುಗಳ  ಗೀಚುತ್ತ ....   "ಮುನಿದರೂ ಸೈ   ... ನನ್ನನ್ನಗಲಿ  ಹೋಗಬೇಡ" 

(RS)

ಅವನೊಲವ ಸಾಲುಗಳು ......

Image
http://www.kannadaprabha.com/valentines-day/love-stories/you-attract-with-your-smile/246663.html


ಸಾವಿರ ಸುಳ್ಳು ಹೇಳಿ ಪ್ರೀತ್ಸೋರು ಇರ್ತಾರೆ, ಮದುವೆ ಮಾಡೋರು ಇರ್ತಾರೆ! ನೂರ ಒಂದು ಗ್ರೀಟಿಂಗ್ ಕಾರ್ಡ್ ಒಟ್ಟಿಗೇ ಕೊಟ್ಟು - ಒಂದೊಂದ್ರಲ್ಲೂ ವಿಭಿನ್ನವಾಗಿ ನಿನ್ನ ಪ್ರೀತಿ ನಿವೇದಿಸಿ ಮೋಡಿ ಮಾಡಿದೋನು ನೀನೆ ಅನ್ಸುತ್ತೆ. ನೀ ಕೊಟ್ಟ ಅಷ್ಟೂ ಕಾರ್ಡ್ಗಳಲ್ಲಿ ನನ್ನ ತುಂಬಾ ಇಂಪ್ರೆಸ್ಸ್ ಮಾಡಿದ್ದು, ಇಗೋ ನಿನ್ನ ಈ ಸಾಲುಗಳು : 

"ಕನ್ನಡ ಓದೋಕೆ -  ಬರೆಯೋಕೆ ಬರುತ್ತಾ? ""ನೀ ಬಲೆ ಬೀಸದೇನೆ ನಿನ್ನ ತೆಕ್ಕೆಯಲ್ಲಿ ಬಿದ್ದಿರುವೆನೆಂದರೆ, ಅದು ನನ್ನ ತಪ್ಪಲ್ಲ, ನಮ್ಮನ್ನು ಸೇರಿಸಬೇಕೆಂದು ಹೂಡಿರುವ ಭಗವಂತನ ಸಂಚು, ನಾ ಹೇಳೋದು ಅರ್ಥವಾಗುತ್ತ?"..."ಪ್ರೀತ್ಸೋಕೆ ಯಾರ ಅಪ್ಪಣೆ ಬೇಕು ಹೇಳು? ಅದು ನನ್ನ ಸ್ವಂತ.  ಆದ್ರೆ ನಿನ್ನ ಹೊಗಳೋಕೆ ಬೇಕು, ಪ್ಲೀಸ್ ನಂಗೆ ಅನುಮತಿ ಕೊಡು" "ಈ ಹಿಂದೆ ನಾ ಯಾರನ್ನು ಪ್ರೀತ್ಸೇ ಇಲ್ಲ ಅಂತಲ್ಲ, ಸುಳ್ ಸುಳ್ಳೆಲ್ಲ ನಂಗೆ ಹೇಳೋಕೆ ಬರೋಲ್ಲ. ಬದುಕು ಅಂತಿದ್ರೆ ಅದು ಇಂಥವಳ ಜೊತೆ ಮಾತ್ರ ಅಂತ ಅನಿಸಿದ್ದು ನಿನ್ನ ನೋಡಿದ ಮೇಲೆ"...  "ಆದ್ರು ತಪ್ಪೇ ಮಾಡದೆ - ನಿನ್ನ ಮುಂದೆ ತಪ್ಪಿತಸ್ತನ ಹಾಗೆ ನಿಲ್ಲ ಬಲ್ಲೆ" "ನಾನು ಸಾಯೋ ತನಕ ಮಾತ್ರ ಅಲ್ಲ - ಸತ್ತಮೇಲೂ ನನ್ನಷ್ಟು ನಿನ್ನನ್ನ ಪ್ರೀತ್ಸೋರು ಈ ಭೂಮಿ ಮೇಲೆ ಇರೋಕೆ ಸಾಧ್ಯನೇ ಇಲ್ಲ&quo…

ಈ ಭಾನುವಾರವೂ - ಕನ್ನಡಕ್ಕಾಗಿ / ಕಂಕಣಕ್ಕಾಗಿ

Image
ಕಂಕಣ : ನಾಡು - ನುಡಿಗಾಗಿ  ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ,"ಕಂಕಣ" ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ್ರಲ್ ಮಾಲ್ ಎದುರು!   ಉದ್ದೇಶ ಇಷ್ಟೆ : "ಕನ್ನಡದವರೇ,  ಕನ್ನಡ ಮಾತಾಡಿ" ಅ೦ತ ವಿನಮ್ರವಾಗಿ ಫಲಕಗಳನ್ನ ಪ್ರದರ್ಶಿಸುವ ಮೂಲಕ ಕೇಳಿಕೊಳ್ಳೋದು. ಎಂದೂ ಯಾವ ಪ್ರತಿಭಟನೆಗಳಿಗೂ ರೋಡಿಗಿಳಿದವಳಲ್ಲ - ಮುಜುಗರ ಸರಿ - ಆದರೆ ಇದು ಪ್ರತಿಭಟನೆಯೇ ಅಲ್ಲ - ಮನವಿ ಮಾತ್ರ - ಒಂದೇ ಒಂದು ಘೋಷಣೆಯನ್ನೂಸಹ ಕೂಗದೆ - ಹೆಮ್ಮೆಯಿಂದ ನಾನು ಕನ್ನಡತಿ ಅಂತ ಸಾರುವ ಒಂದು ಸುವರ್ಣವಕಾಶ, ಬಿಡೋದುಂಟೆ? ಕನ್ನಡಿಗರನ್ನ ಎಬ್ಬಿಸಿ "ಕನ್ನಡ ಮಾತಾಡ್ರಪ್ಪ, ದೇವ್ರುಗಳ"!! ಅಂತ ಕೇಳಿಕೊಳ್ಳುವ ಅಭಿಯಾನ. 
ಈ ಅಭಿಯಾನಕ್ಕೆ ಬೇಕಿದ್ದ ಪೂರ್ವ ತಯಾರಿ ಅಷ್ಟಿಷ್ಟಲ್ಲ. ನಂಗೊತ್ತು ಕಂಕಣ ಬಳಗದ ಕೆಲವು ಸಧಸ್ಯರು ಅತ್ಯಂತ ಹೆಚ್ಚು ಶ್ರಮವಹಿಸಿ ತಯಾರಿ ನಡೆಸಿದ್ರು. ಚಿದಾನಂದ್, ಶ್ರೀಧರ್, ಪ್ರಕಾಶ್, ಭ್ರಮೇಶ್, ರವೀಂದ್ರ .... ಅನೇಕರು. ಕವಿರಾಜ್ ಅವರು ಸಹ ಖುದ್ದು ತಾವೇ ಪ್ರತಿಯೊಂದು ವಿಭಾಗದಲ್ಲೂ ಎಚ್ಚರ ವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 

ಮಾಲ್ ಬಳಿ ಸೇರಿದೆವು, ಗುಂಪುಗಳ ವಿಂಗಡಿಸಿದರು - "ಎಲ್ರೂ ನಿಮ್ಮ height ಪ್ರಕಾರ ನಿಲ್ಲಿ ಅಂದ್ರು", ಹ.ಹ.!  ನನ್ನ ಸ್ಕೂಲ್ PT ಮೇಡಂ ನೆನಪಾದ್ರು! ಎತ್ತರ ಇದ್ದೀನಿ ಅಂತ ಅಲ್ಲೆಲ್ಲೋ ಹಿಂದೆ ಹೋಗಿ ನಿಂತಾಗೆಲ್ಲ, "ಹೇ ನೀನು, ಹೂ…

ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ : ಪಂಜುವಿನಲ್ಲಿ

http://www.panjumagazine.com/?p=6596#comments

ಸ್ಪ್ರಿ೦ಗ್ ಟ್ರೀ ಅಪಾರ್ಟ್ಮೆ೦ಟ್ ರೆಸಿಡೆ೦ಟ್ಸ್ ಅಸೋಸಿಯೇಷನ್ನಿನ ನಿಯಮದ೦ತೆ / ಸರದಿಯ೦ತೆ ಈ ಬಾರಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ೪೦೪ ನೇ ಫ್ಲಾಟಿನ ಶಾ೦ತ ಇನಾಮ್ದಾರ್. ಸರದಿಯ ಪ್ರಕಾರ ಆಯ್ಕೆಯಾಗಿದ್ದರು ಒಲ್ಲದ ಮನಸಿನಿ೦ದಲೇ ಈ ಜವಾಬ್ದಾರಿಯನ್ನು ಒಪ್ಪಿಕೊ೦ಡಿದ್ದಳು. ಆಯ್ಕೆಯಾದ ವಿಷಯ ಮನೆಯಲ್ಲಿ ತಿಳಿಸಿದಾಗ ಯಾರೊಬ್ಬರೂ ಇದನ್ನು ಸ್ವಾಗತಿಸಿರಲಿಲ್ಲ. ಬದಲಿಗೆ ಗೇಲಿ ಮಾಡಿ ತಮಾಷೆ ಮಾಡಿದ್ದರು.

ಮು೦ದಿನ ವಾರ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ಅಸೋಸಿಯೇಷನ್ನಿನ ಸಧಸ್ಯರೆಲ್ಲರೂ ಸೇರಿ ಒ೦ದು ಕಾರ್ಯಕ್ರಮ ಆಯೋಜಿಸಿಕೊ೦ಡಿದ್ದು, ಅದಕ್ಕಾಗಿ ಶಾ೦ತ ಅಪಾರ್ಟ್ಮೆ೦ಟಿನ ಹೆ೦ಗಸಿರಿಗೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಭಾಷಣ ಮಾಡುವ೦ತೆ ನಿರ್ಧಾರವಾಯಿತು. ಮೀಟಿ೦ಗ್ ಮುಗಿಸಿಕೊ೦ಡು ಬ೦ದಾಗಿನಿ೦ದ ಶಾ೦ತಳಿಗೆ ಭಾಷಣದಲ್ಲಿ ಮಾತನಾಡುವುದರ ಬಗ್ಗೆಯೇ ದೊಡ್ಡ ಚಿ೦ತೆಯಾಗಿತ್ತು.  

ಇನ್ನು ತನ್ನ ಭಾಷಣವನ್ನು ಬರೆದಿಟ್ಟುಕೊಳ್ಳುವುದೇ ಲೇಸು ಎ೦ದು ನಿರ್ಧರಿಸಿದ್ದಳು. ಅ೦ತೆಯೇ ಮರು ದಿನ ಬೇಗನೆದ್ದು ಮನೆಯ ಕೆಲಸಗಳನ್ನೆಲ್ಲಾ ಮುಗಿಸಿ, ಬೆಳಗಿನ ತಿ೦ಡಿ, ಮಧ್ಯಾಹ್ನದ ಅಡುಗೆ ಎಲ್ಲವೂ ಚಕಚಕನೆ ಮುಗಿಸಿಟ್ಟಳು. ಕಾಫಿ ಬೆರೆಸಿ ಮಾವನವರಿಗೆ ಕೊಡುವಷ್ಟರಲ್ಲಿ ಎ೦ದಿಗಿ೦ತ  ಹತ್ತು ನಿಮಿಷ ತಡವಾಗಿತ್ತು. ಅದಕ್ಕಾಗಿ ಅವರ ತೀಕ್ಷ್ಣ ನೋಟ ಎದುರಿಸಲಾಗದೆ, ಮೆಲು ದನಿಯಲ್ಲಿ ‘ಕಾಫಿ ಇಲ್ಲಿಡ್ಲಾ ಮಾವ’, ಅ೦ತ ಕೇಳಿಕೊ೦ಡು ಟ…

Hi Ghalib......

ಈ ಹೊತ್ತಿನಲ್ಲಿ
ನಿನ್ನ ಭೇಟಿ
ಬೇಡವಾಗಿತ್ತು
ಗಾಲಿಬ್....
ಪ್ರೀತಿ, 
ಪ್ರೀತಿಯಲ್ಲ,
ಪ್ರೀತಿಯ ಕವನ ಅದಲ್ಲವೇ ಅಲ್ಲ!!
ಹ ಹ! ಕವನ ಮಾತ್ರ ಪ್ರೀತಿಯ ಕುರಿತು ಎಂದೆ ....
ನಿನ್ನ ಗಜಲ್ನ
ಅಲೌಕಿಕತೆಯ
ಸದ್ದಿಗೊಮ್ಮೆ
ಒಲವುಂಡ ಪದಗಳೆಲ್ಲ
ತಲೆಕೆಳಗಾದವು....
ವಿನಾಕಾರಣ
ಕಾಲಡಿಯಲ್ಲಿದ್ದ ಭೂಮಿ 
ನೆತ್ತಿಯ ಮೇಲೆ
ತಂದಿರಿಸಿದ್ದು ನೀನೇ
ಅಬ್ಭಾ! ಹೃದಯ ಭಾರ ....
ನೀನೂ -
ನಿನ್ನ ಗಜಲ್ಗಳ
ಸಹವಾಸವೇ ಬೇಡ
ವಿದಾಯ ನಿನಗೆ
ಮುಂದೆಂದಾದರು
ಸಿಗುವ.....
......... ಇಲ್ಲ,ಆವರಿಸಿಯೇಬಿಟ್ಟೆ!
ಅಮಲು, ಮತ್ತೆ ನಾಳೆ
ಇದೇ ಸಮಯಕ್ಕೆ
ಹೊಸ ಪುಟ
ಹೊಸ ಭೇಟಿ....

ಪಂಜುವಿನಲ್ಲಿ ............

Image
http://www.panjumagazine.com/?p=8071


ಸೌಮ್ಯ : ಅಪ್ಪನ ಕುಡಿತಕ್ಕೆ, ಸಾಲಗಳಿಗೆ ಬಲಿಯಾಗಿ ನಗರದಲ್ಲಿ ಮನೆಕೆಲಸಕ್ಕಿರುವ ೮ ವರುಷದ ಬಾಲಕಿ. 
ರಾಜು : ಹೆತ್ತವರ ಆರನೇ ಕುಡಿ, ವಯಸ್ಸು ೧೧! ತನ್ನೂರ ಬಿಟ್ಟು ನಗರಕ್ಕೆ ಬಂದು ಯಾವುದೋ ಟೀ ಅಂಗಡಿಯಲ್ಲಿ ಕೆಲಸಕ್ಕಿದ್ದಾನೆ.  ದೀಪ : ತಾನು ಕಲಿಯುತಿದ್ದ ಶಾಲೆಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜ್ಯನಕ್ಕೊಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿರುವ ಮುಗುದೆ.  ರವಿ : ಪರೀಕ್ಷೆಯಲ್ಲಿ ಕಡಿಮೆ ಅಂಕಗಳ ಪಡೆದ ಕಾರಣ ಅಮ್ಮ ಬೈದಳೆ೦ದು, ಸಮಾಜದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ೧೪ ವರುಷದ ಬಾಲಕ.  ಚೈತ್ರ : ಹದಿಮೂರು ವರುಷದ ಬಾಲಕಿ, ಆಗಲೇ ಗರ್ಭಿಣಿ.  ಚಿರಂತ್ : ತನ್ನ ಹೆತ್ತವರಿಬ್ಬರೂ ಎಂಟಂಕಿ ಸಂಬಳ ತರುವ ಮೇಧಾವಿಗಳು. ಮಗನಿಗಾಗಿ ಅವರ ಬಳಿ ಸಮಯವಿಲ್ಲ. ತನ್ನ ೧೨ನೇ ವಯಸ್ಸಿನಲ್ಲಿ ಸಿಗರೇಟು, ಗಾಂಜಾ ಸೇವನೆ! ಈಗ ಮಾನಸಿಕ ಅಸ್ವಸ್ಥ.  ಮೈನ : ಮನೆಗೆ ಬರುತಿದ್ದ ಅಪ್ಪನ ಸ್ನೇಹಿತನಿಂದಲೇ ದೌರ್ಜ್ಯನಕ್ಕೊಳಗಾಗಿ ಖಿನ್ನತೆಯಿಂದ ಬಳಲುತ್ತಿರುವ ಹೆಣ್ಣುಕೂಸು.  ಸುಂದರ್ : ಅವನ ಊರು ಕೇರಿ ತಿಳಿಯದು! ಹಸಿವಿನಿಂದ ಬಳಲಿ, ಕಂಗಾಲಾಗಿ ಕಡೆಗೆ ಅಂಗಡಿಯವನನ್ನೇ ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ.  ಲಿಲ್ಲಿ / ಸಮೀರ : ಮೈನೆರೆಯುವ ಮುನ್ನವೇ ಹೊರ ದೇಶಕ್ಕೆ ಮಾರಾಟವಾದ ಹೆಣ್ಣು ಮಕ್ಕಳು.  ಆಶ್ರಮ : ಆರರಿಂದ ಹದಿನಾರು ವಯಸ್ಸಿನ ಮಕ್ಕಳನ್ನು ಸಾಕುತಿದ್ದ ಅನಾಥಾಶ್ರಮದ ಮುಖ್ಯಸ್ಥನಿಂದಲೇ ಮಕ್ಕಳಿಗೆ ಕಿರುಕುಳ, ಹ…