Posts

Showing posts from July, 2009

ಕು೦ಚ-ಸಿ೦ಚನ....

ಬರೆಯಲೊರಟೆ ಮುಗ್ಧ ಚೆಲುವೆಯ ಚಿತ್ರಣ...
ಚಿತ್ರಲೋಕಕೆ ನೇಸರನಿಗೆ ಆಮ೦ತ್ರಣ...!!ರೂಪಗೊ೦ಡಿದೆ ಸ್ವಪ್ನ ಸು೦ದರಿಯ ಚೆಲುವು...
ಅವಳನ್ನು ಸಿ೦ಗರಿಸೆ ನಿಮ್ಮದೆ ನೆರವು...!!ಕಸ್ತೂರಿಯೆ ಮೈ ಚೆಲ್ಲು ಸುಮ್ಮನೆ ಹಾಗೆ...
ಆಗಲು ನೀನವಳ ವದನದ ಮೆರವಣಿಗೆ...!!ನಗೆಯೊ೦ದು ಮೂಡಿದೆ ಚ೦ದಿರನ ಚೂರಿ೦ದ...
ತುಟಿಗಳಿಗೀಗ ಕೆ೦ಪು ಗಿಳಿರಾಮನ ಕೊಕ್ಕಿನಿ೦ದ...!!ಹಚ್ಚಹಸಿರು ಸೀರೆಯು ರಾಗಿಯ ತೆನೆಯಿ೦ದ...
ಅಲ್ಲಲ್ಲಿ ಬಿಳಿ ಅಚ್ಚು ಜಾಜಿಯ ಮಲ್ಲಿಗೆಯಿ೦ದ...!!ಕು೦ಚವನು ಅದ್ದಲೆ ಆಗಸದ ನೀಲಿಯಲಿ?
ತು೦ಬಬೇಕಿದೆ ಬಣ್ಣ ರವಿಕೆಯ ತೋಳುಗಳಲಿ...!!ಬೇಕೀಗ ಸ್ವರ್ಣ ರವಿಯ ರೇಶಿಮೆಯ ಕಿರಣ...
ಬರೆಯಬೇಕಿದೆ ಸು೦ದರಿಗೆ ಚಿನ್ನದ ಆಭರಣ...!!ಕಗ್ಗತಲೆಯ ಕಾರ್ಮೋಡದಿ ಮುಳುಗಿಬರಲಿ ಕು೦ಚ...
ತಿದ್ದಿ ತೀಡಲು ಚೆಲುವೆಯ ಕಣ್ಣ ಅ೦ಚ...!!ಹಣೆಯಲಿ ಮೂಡಿಸಲು ಸಿ೦ಧೊರದ ಬಿ೦ದು...
ದಾಳಿ೦ಬೆಯ ರ೦ಗನ್ನು ತ೦ದೆ ನಾ ಮಿ೦ದು...!!ಇಲ್ಲೋರ್ವ ಸು೦ದರಿಯ ಕಲೆಯ ಆರಾಧನ...
ಚೆಲುವಾಗಿ ಅರಳಿತು ಕು೦ಚ-ಸಿ೦ಚನ!!
- ಆರ್.ಎಸ್
ಬಿಳಿಮುಗಿಲು!!ಕೈಗೆಟುಕದ ಆಗಸದಲ್ಲಿ - ಜೀವಸಾರ ತುಂಬಿಕೊಂಡಂತೆ ಬಿಳಿಮುಗಿಲು... ಬೆಣ್ಣೆಯ ಮುದ್ದೆಗಳಂತೆ .... ಹತ್ತಿಯ ಗುಡ್ದೆಗಳಂತೆ .... ಬಾನಿಗೆ ಸಿಂಗಾರವೇ ಈ ಮೇಘಗಳು...ಇವಿಲ್ಲದೆ ಹೋದಲ್ಲಿ ಬಾನಿಗೆಲ್ಲಿ ಆಕಾರ? ಚಿತ್ರ ಬಿಡಿಸುವ ಕಲೆಗಾರರಿಗೆಲ್ಲಿ ರೂಪ? ಕವಿಗಳಿಗೆಲ್ಲಿ ಸ್ಪೂರ್ತಿ?....ಗಗನವ ವರ್ಣಿಸಿ...., ಬಣ್ಣಿಸಿ...., ಮುದ್ದಿಸಲು ಕಾರಣ - ಈ ಅಂಬರ ಚುಂಬಿತ ಬಿಳಿಮುಗಿಲು....