Posts

Showing posts from 2013

ಮದುವೆ ಸ೦ಭ್ರಮಗಳ ನಡುವೆ…….

Image
ಕಳೆದವರ್ಷ “ನನ್ನ ಸ್ನೇಹಿತ ಗೋಪಿಯ ಮದುವೆ, ನಿಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ…. ಬರ್ತೀರಿತಾನೆ?.”, ಅ೦ತ ಕೇಳಿ, ಮಕ್ಕಳ ಪ್ರತಿಕ್ರಿಯೆಗೆ ಕಾಯ್ತಿದ್ದೆ. ಒಬ್ಬರಿಗಿ೦ತ ಒಬ್ಬರು, ಕುಣಿದು ಕುಪ್ಪಳಿಸಿದ್ದರು. ಹತ್ತು ಹಲವು ಪ್ರಶ್ನೆಗಳು, ಎಲ್ಲರಿಗು ಉತ್ತರಿಸುವ ಹೊತ್ತಿಗೆ ನನ್ನದೇ ಮದುವೆ ಎ೦ಬ೦ತೆ ಆಗಿಹೋಗಿತ್ತು. NGO ಮಕ್ಕಳನ್ನ ತನ್ನ ಮದುವೆಗೆ ಕರೆತರಲೇ ಬೇಕು ಅ೦ತ ವಿನ೦ತಿಸಿಕೊ೦ಡಿದ್ದ ಗೋಪಿ. ಬಸವೇಶ್ವರನಗರದ ಪ್ರತಿಷ್ಟಿತ ಕಲ್ಯಾಣಮ೦ಟಪಕ್ಕೆ ಸುಮಾರು 80 ಮಕ್ಕಳನ್ನ ಕರ್ಕೊ೦ಡು ಹೋಗಿದ್ದೆ.  ವಧು-ವರರಿಬ್ಬರು ಸ್ಟೇಜ್ ಹತ್ತಿದ ಕೂಡಲೆ, ಮಕ್ಕಳನ್ನೇ ಮೊದಲು ಕರೆಸಿಕೊ೦ಡು, ಅವರಿಗಾಗೆ ಕಾದಿರಿಸಿದ್ದ – ಮೊದಲ ಪ೦ಕ್ತಿಯಲ್ಲಿ ಭರ್ಜರಿ ಊಟ – ಉಪಚಾರ.  ಮಕ್ಕಳಿಗಾಗಿ ವಾಹನದ ವ್ಯವಸ್ತೆಯನ್ನು ಸಹ ಮಾಡಿಸಿದ್ದರು ಗೋಪಿ, ಮಕ್ಕಳೆಲ್ಲರು ಸ೦ತಸದಿ೦ದ ಇದ್ದಿದ್ದು ನೋಡಿ ಎಲ್ಲರನ್ನು ತಬ್ಬಿಕೊಳ್ಳುವ  ಮನಸ್ಸಾಗಿತ್ತು. ನಮ್ಮ ಪುಟಾಣಿಗಳಿಗೆ ಇ೦ತದ್ದೊ೦ದು ಅನುಭವ ಅವಕಾಶ ನೀಡಿದ ಗೋಪಿಗೆ ಪ್ರೀತಿಯ ವ೦ದನೆಗಳನ್ನ ಅರ್ಪಿಸಿದ್ದೆ. ಮಕ್ಕಳೆಲ್ಲ,‘ಇನ್ನೊ೦ದ್ಸರಿ ಮದುವೆಗೆ ಕರ್ಕೊ೦ಡೋಗಿ ರೂಪಕ್ಕ ಪ್ಲೀಸ್’, ಅ೦ತ ಗೋಗರೆದಿದ್ದರು.

ಮತ್ತೊ೦ದು ಮದುವೆ  ಮೈಸೂರಿನಲ್ಲಿ, ನನ್ನ ಗೆಳತಿ ಸಿ೦ಧುಳದ್ದು.  ಅದ್ದೂರಿ ಆಡ೦ಬರಗಳು ಒ೦ದೆಡೆಯಾದರೆ  - ಮತ್ತೊ೦ದೆಡೆ ಮಾನವೀಯ ಮೌಲ್ಯಗಳು ಮೆರೆದಿದ್ದವು.  ಮಗಳ ಮದುವೆಗೆ೦ದು ಅವರ ತ೦ದೆ ವಿಷೇಶವಾದ ಅಥಿತಿಗಳನ್ನು ಆಮ೦ತ್ರಿಸಿದ್ದರು. ಸುಮಾರು…

ಚಿತ್ತ ಬ್ರಾಂತಿ 

Image
ಅವನಿಗೆ ಅವಳ ಸಿ೦ಗಾರದ ಅರಿವಿಲ್ಲ ಒಲಿದವಳುನುಲಿದರೂಸ್ವರ್ಗವೇ ಸಿಕ್ಕ೦ತೆ(ತಾರ್ಕಿಕ) ಅವಳಿಗೆ ಅವನ ಉತ್ಕಟತೆಯ ಪರಿವಿಲ್ಲ ಕಾಯಿಸಿ ಬೇಡಿಸಿ ಕೊಡುವ ಮುತ್ತೇ ಮುತ್ತ೦ತೆ (ಮಾದಕ)
ಕಮರಿವೆ

ಅವನದೇ ಲೀಲೆ - ಅವನದ್ದೇ ಬದುಕು......

Image
ಈ ಬಾರಿ ತಿರುಪತಿ ತಿಮ್ಮಪ್ಪನನ್ನ ನೋಡೋಕೆ ದೊಡ್ಡ ದ೦ಡೇ ತಯ್ಯಾರಾಗಿತ್ತು. ಎ೦ದಿನ೦ತಲ್ಲ! ಅಮ್ಮ, ಮಗಳು, ತ೦ಗಿಯರು, ಭಾವ೦ದಿರು, ಪುಟಾಣಿ – ಬಟಾಣಿಗಳ ಸಮೇತ ಇಪ್ಪತ್ತೆರಡು ಮ೦ದಿ. ಮನಸಿಗೆ ತೋಚಿದಾಗಲೆಲ್ಲಾ ವೆ೦ಕಟೇಶನ ಮೊರೆ ಹೋಗುವ ಕಾಯಕ ರೂಡಿಸಿಕೊ೦ಡಿದ್ದರೂ – ಅವನ ಅಪ್ಪಣೆ ಇಲ್ಲದೆ ಅವನನ್ನ ನೋಡೋಕೆ ಸಾಧ್ಯವಾದರು ಇದೆಯೆ?

ಭಗವ೦ತನ ಕುರಿತು ಯಾರೇನೇ ಅ೦ದರು ನನ್ನದೇ ರೀತಿಯ ಅನ್ವೇಷಣೆ ನಡೆದೇ ಇದೆ! ಮನುಜ ಕುಲ ಸ್ಥಾಪಿಸಿಕೊ೦ಡಿರುವ ಜೀವನ್ಮೌಲ್ಯಗಳಲ್ಲಿ, ಕಾಯಕಗಳಲ್ಲಿ, ವ್ಯಕ್ತಿತ್ವಗಳಲ್ಲಿ, ಸ೦ಬ೦ಧ ಸ್ವರೂಪಗಳಲ್ಲಿ ಅವನನ್ನ ಹುಡುಕುವ ಕಾರ್ಯ ಮು೦ದುವರೆದಿದೆ! ಪೂಜೆಯೆನ್ನುವುದು ಅನುಷ್ಟಾನಕ್ಕೆ ಮಾತ್ರ ಮೀಸಲಾಗದೆ, ಕಲ್ಲು - ವಿಗ್ರಹಗಳಲ್ಲಿ ಐಕ್ಯನಾದ ದೇವರೊಡನೆ ಮಾತು-ಕತೆಗಿಳಿದು, ಅವನನ್ನ ಪ್ರಶ್ನಿಸಿ ಕಾಡುವುದು, ಕಾಡುತ್ತ ನನ್ನೇ ನಾ ಅವಲೋಕಿಸಿಕೊಳ್ಳುವುದೂ ಸಹ ಇದೆ. ಬೆರಗು ಮೂಡಿಸುವ೦ತೆ ಅವನು ಉತ್ತರಿಸುತ್ತಾನೆ, ಉತ್ತರಿಸಿದ್ದಾನೆ, ಅವನದೇ ಶೈಲಿಯಲ್ಲಿ! ನಮ್ಮ ನಮ್ಮ ದೇವರುಗಳ ಮೇಲಿಟ್ಟಿರುವ ಅಗಾಧ ನ೦ಬಿಕೆಯಲ್ಲಿದೆ ಅಪರಿಮಿತ ದಿವ್ಯ ಶಕ್ತಿ! ಆ ನ೦ಬಿಕೆಗೆ - ಆ ಶಕ್ತಿಗೆ ಶರಣು.

ತಿಮ್ಮಪ್ಪನ ಬಳಿ ಹೋದಾಗಲೆಲ್ಲ ಅವನ ದರುಶನವಾದೊಡನೆ ಕಣ್ತು೦ಬಿ ಬ೦ದು, ಹೇಳಬೇಕಾದ್ದು – ಕೇಳಬೇಕಾದ್ದು ಎಲ್ಲವೂ ಮರೆತೇ ಹೋಗಿರುತ್ತದೆ. ಈ ಬಾರಿ ಅವನಲ್ಲಿ ಎದುರು-ಬದುರು ನಿ೦ತು ಕೇಳಬೇಕಾದ ಪ್ರಶ್ನೆಗಳು ಒ೦ದೆರಡಿವೆ, ಪ್ರಸ್ತಾವನೆಗಳಿವೆ, ಈ ಸರತಿಯಾದರು ಯಾವುದನ್ನೂ…

ನನ್ನೂರಿನ ಚ೦ದಿರ

Image
ನನ್ನೂರಿನ ಚ೦ದಿರ
ಭುವಿ ಕಾಯವ ಲಾ೦ದ್ರ ಕರ್ಮಯೋಗಿಯ೦ತೆ ಹಿ೦ದಿರುಗಿ ನೋಡದೆ ಸರ-ಸರನೆ ಸರಿದ೦ತೆ ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....
ಕದ್ದು ಕಾಡುವ ಇಣುಕಿ ಕೆಣಕುವ ಬಿದಿಗೆಯ ಚ೦ದಿರನ ಮ೦ದ ನಗುವಿಲ್ಲ ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....
ಹುಣ್ಣಿಮೆಯ ಬೆಳದಿ೦ಗಳೇಕೆ ಹುಸಿ - ಮುನಿಸಿನ ಕ೦ಗಳಿಲ್ಲ ಕದ್ದಿ೦ಗಳೂ ಇಲ್ಲ ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....
ನಾ ನಿ೦ತೆಡೆ - ನಾ ಹೋದೆಡೆ ಹಿ೦ದಿ೦ದೆ ಬರುವುದಿಲ್ಲ  ನುಸುಳಿ ಕಚಗುಳಿಯಿಡುವ ತು೦ಟತನವೂ ಇಲ್ಲ ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....
ಸುಳಿವಿಲ್ಲ..... ಸುಳಿವಿಲ್ಲ.....
RS * * * ಬಾಳೊ೦ದು ಭಾವಗೀತೆ * * *

ಸೂಚನೆ : ಸಸ್ಯಹಾರಿಗಳಿಗೆ ಸೂಕ್ತವಲ್ಲ :)

Image
ಹಿ ಹಿ ಹೀಗೊಂದು ಭಾನುವಾರ!

ಪ್ರತಿ ದಿನ ಬೆಳಗ್ಗೆ 6.30 ಕ್ಕೆ ಆಫಿಸ್ ಹೊರಡುವ ಸಮಯ, ಹಾಗಾಗಿ 5 ಗಂಟೆಗೆ ಏಳುವ ಅಭ್ಯಾಸ! ಅಮ್ಮ ನಮ್ಮೊಟ್ಟಿಗೆ ಉಳಿಯುವ೦ದಿನಿಂದ ಅರ್ಧ ಗಂಟೆ ಬೋನಸ್ ನಿದ್ದೆ, ಈ ನಡುವೆ ಏಳುವುದು 5.30ಕ್ಕೆ. ಭಾನುವಾರವೆಂದರೆ - ಬೇಕಾದಷ್ಟು ನಿದ್ದೆ ಮಾಡುವ ದಿನ, ಯಾರನ್ನೂ ಯಾರು ನಿದ್ದೆಯಿಂದೆಬ್ಬಿಸದೆ - ಯಾರು ಮೊದಲು ಏಳ್ತಾರೊ ಅವರೇ ಎಲ್ಲರಿಗು ಕಾಫಿ ಮಾಡಬೇಕು, ಇದು ನಾವು ರೂಡಿಸಿಕೊಂಡಿರುವ ಪದ್ಧತಿ. "ಕಾಫಿ" ಅಂತ ಅಮ್ಮ ಕೂಗುವವರೆಗೂ ಹಾಸಿಗೆ ಬಿಟ್ಟು ಏಳುವ ಪ್ರಾಣಿ ನಾನಂತೂ ಅಲ್ಲ. ಇವತ್ತು ಭಾನುವಾರ, ಆರಾಮ್ ನಿದ್ದೆ, ಅಮ್ಮನ ಕೂಗು ಕೇಳಿ ಬಂದು ನಾನು ಕಣ್ ಬಿಟ್ಟಾಗ ಒಂಬತ್ತಕ್ಕೆ ಇನ್ನು ಹತ್ತು ನಿಮಿಷ ಬಾಕಿ.

ತಿಂಡಿಯಾದ ಮೇಲೆ ಅಮ್ಮನಿಗೆ ಏನನ್ನಿಸಿತೋ, ಒಂಟಿ ಕೊಪ್ಪಲ್ ಪಂಚಾಗ ಹಿಡಿದು, "ಇವತ್ತು ತಿನ್ನಬಹುದು" ಎಂದರು! "ಅಜ್ಜಿ ತಿನ್ನೋದಕ್ಕೂ ವಾರ - ನಕ್ಷತ್ರ ನೋಡ್ತಾರ?", ಅಂತ ಮಗಳ ನಗು / ಕೀಟಲೆ. "ಇವತ್ತು ಅರ್ಧ - ಮುಕ್ಕಾಲು KG ಮಟನ್ ತಂದು ಬಿಡು, ಸಾರು ಮಾಡಿ ಮುದ್ದೆ ಮಾಡ್ಬಿಡ್ತೀನಿ" ಅಂತ ಅಮ್ಮ ಹೆಳ್ತಿದ್ದಂಗೆ, ಮನೆಯಲ್ಲಿ ಸ್ಪೆಷಲ್ ಅಡುಗೆ ಅಂತ ಮಗಳಿಗೆ ಖುಷಿ. ಸರಿ ಮನೆಯ ಬಳಿ ಇರುವ "ಚಾಯ್ಸ್ ಚಿಕೆನ್" ಅಂಗಡಿಯಿಂದ ಕೋಳಿ ಅಥವಾ ಅದರ ಮೊಟ್ಟೆ ತಂದು ಅಭ್ಯಾಸ, ಹಿಂದೆಂದು ಹೋದದ್ದಿಲ್ಲ ಈಗ ಮಟನ್ ಅಂಗಡಿ ಹುಡುಕಿಕೊಂಡು ಎಲ್ಲಿ ಹೋಗಲಿ? ಮನೆಯಲ್ಲಿ ಮಟನ್ ಅಪರ…

ಶೋಕವಿಲ್ಲಿ ಸಂಭ್ರಮಿಸಬೇಕಿದೆ

ಈ ದಿನ ಎಂದಿನಂತಲ್ಲ, ವಿಶೇಷ! ಈ ದಿನಕ್ಕಾಗಿ ಎಷ್ಟು ತಿಂಗಳುಗಳಿಂದ ತಯ್ಯಾರಿ! ಕಳೆದ ಒಂದು ವಾರದಿಂದ ನಿದ್ದೆ ಮಾಡಿದ್ದು ಅಷ್ಟಕ್ಕಷ್ಟೇ. ನನಗೆ ಮಾತ್ರವಲ್ಲ - ಈ ದಿನಕ್ಕಾಗಿ ಕಾದು ಸಿದ್ದತೆ ನಡೆಸಿದ ಎಲ್ಲರಿಗೂ ಹೀಗೆ ಇರಬಹುದ? ನಿನ್ನೆ ಸಂಜೆ ಎಲ್ಲರಿಗೂ ಒಮ್ಮೆ ಫೋನಾಯಿಸಿ - ಎಲ್ಲವೂ ಸರಿಯಾಗಿದೆಯೆಂದು ತಿಳಿದಿದ್ದೆ. ಆದರೆ, ಕಾಡುತಿದ್ದ ವಿಷಯವೇ ಬೇರೆ.

ಜೀವನದ ದಿಕ್ಕುಗಳೆಲ್ಲ ಬದಲಾಗಿ ಇಂದಿಗೆ ಸರಿಯಾಗಿ ಐದು ತಿಂಗಳು. ರಾಯರ ಗುಡಿಯ ಪುರೋಹಿತರನ್ನ ನೋಡಿ, ಕೊಡಬೇಕಾದದ್ದು ಕೊಟ್ಟು ಮನೆಗೆ ಬಂದೆ. ವಡೆ ಪಾಯಸ ಇತ್ಯಾದಿ ಎಲ್ಲವು ದೀಪ ಹಚ್ಚಿದ ಫೋಟೋ ಮುಂದೆ - ನಂತರ ಮಹಡಿಯ ಮೇಲೆ. ಯಾರನ್ನು ಕಾಯಿಸದ ಜೀವಾತ್ಮವದು - ಇಷ್ಟವಾದ ತಿನಿಸು ಕಚ್ಚಿಕೊಂಡು ಹಾರಿದೆ. ಹಾ ಹೌದಲ್ವೆ ತಮಗೂ ತಿಳಿದಿರುವನ್ತದೆ ಈ ದಿನದ ವಿಶೇಷ. ನನಗಿನ್ನು ಸಮಯವೆಲ್ಲಿದೆ, ತಯ್ಯಾರಾಗಬೇಕಿದೆ! ಮನೆಯವರೆಲ್ಲ ಮತ್ತೆ - ಮತ್ತೆ ಹೇಳ್ತಿದ್ದು ಅದನ್ನೇ, "ಅತ್ಕೊಂಡು ಮುಖ ಊದಿಸ್ಕೊಂಡು ಫೋಟೋ - ಕ್ಯಾಮೆರ ಕಣ್ಣಿಗೆ ಬೂದುಗುಂಬಳ ಆಗ್ಬೆಕೇನು?". ಅದು ಕೂಡ ಸರಿಯೇ.

ಶೋಕವಿಲ್ಲಿ ಸಂಭ್ರಮಿಸಬೇಕಿದೆ! ... ಹತ್ತು ಜನರಿಗೆ ಸಮಜಾಯಿಸಬಹುದು, ಇಲ್ಲಿ ನೂರು ಮಂದಿ. ಇವರ ಹಣ ಖಾತೆಗೆ ಜಮೆಯಾಗಿ ತಿಂಗಳುಗಳೇ ಕಳೆದಿವೆ, ಇನ್ನು ತಡ ಮಾಡುವ ಹಾಗಿಲ್ಲ. ಈಗಾಗಲೇ ನನ್ನಿಂದಾಗಿ ಬಹಳಷ್ಟು ತಡವಾಗಿದೆ, ಇದು ನನ್ನ ತಂಡದ ಪ್ರತಿಷ್ಠೆ - ನನ್ನ ಬಾದ್ಯತೆ ಕೂಡ, ಹಿಂದಿರುಗುವ ಮಾತಿಲ್ಲ.

ಕಳೆದೈದು ತಿಂಗಳ…

ಸಾಧ್ಯವಾದರೆ ಕೈ ಜೋಡಿಸಿ, ಇಲ್ಲವಾದರೆ......

Image
"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾಗ ವಿಚಾರಿಸುತಿದ್ದಾರೆ. ಆಗಲಿ, ನೋಡೋಣ ಅಂತ ಹೇಳಿ ಸುಮ್ಮನಾಗ್ತಿದೀನಿ.
ಯಾಕೋ ಈ ನಡುವೆ ಯಾರನ್ನೂ ಅಲ್ಲಿಗೆ ಕರೆದೊಯ್ಯುವ ಮುನ್ನ ಯೋಚಿಸುವನ್ತಾಗಿದೆ! NGO ಗೆ ಹೋದವರಲ್ಲಿ ಕೆಲವರಿಗೆ ಆ ಮಕ್ಕಳನ್ನ ಹೇಗೆ ಮಾತಾಡಿಸಬೇಕು, ಏನೇನು ಕೇಳಬೇಕು, ಏನೇನು ಕೇಳಬಾರದು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇರೋದಿಲ್ಲ. ಎಲ್ಲರೂ ಹೀಗಿರ್ತಾರೆ ಅಂತಲ್ಲ. ಆದ್ರೆ - ಹೀಗೂ ಇರ್ತಾರೆ ಅನ್ನೋದೇ ವಿಪರ್ಯಾಸ. ಅಲ್ಲಿಗೆ ಹೋಗುವ ಮುನ್ನ ನನ್ನದೊಂದು ನಿವೇದನೆ ಸದಾ ಇರುತ್ತದೆ. ಮಕ್ಕಳೊಡನೆ ಆಡಿ, ಅವರನ್ನ ನಗಿಸಿ, ಮುದ್ದಿಸಿ, ಮಾತನಾಡಿಸಿ ತಮ್ಮ ದಿನವನ್ನ ಅರ್ಥಪೂರ್ಣವಾಗಿಸಿ ಅಂತ. ಆದರು ಮಕ್ಕಳನ್ನು ಬೇಟಿಯಾದವರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ!
"ಒಹ್, ನಿಂಗೆ ಅಮ್ಮ ಇಲ್ವಾ ಹಾಗಿದ್ರೆ?, ನಿಂಗೇ, ಒಹ್ ಇಬ್ರೂ ಇಲ್ವಾ? ಛೆ ಛೆ! ಪಾಪ, ಯಾವಾಗ್ ಬಂದ್ರಿ ಇಲ್ಗೆ? ಯಾರ್ ಕರ್ಕೊಂಡ್ ಬಂದಿದ್ದು? ನಿಂದು ಯಾವೂರನ್ತಾನೆ ಗೊತ್ತಿಲ್ವ? ನಿಮ್ಮಪ್ಪ ಅಮ್ಮ ನೆನಪಾಗ್ತಾರ? ನೆನಪಾದಾಗ ಏನ್ ಮಾಡ್ತೀರ? ಛೆ, ಅಯ್ಯೋ ಪಾಪ! ನಿಮಗೂ ಒಂದು ಮನೆ ಅಂತ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅನ್ನಿಸಿರುತ್ತೆ ಅಲ್ವ?"


ಇಂಥ ಪ್ರಶ್ನೆಗಳಿಂದ ಮಕ್ಕಳ ಮನಸಿನ ಮೇಲೆ ಯಾವ ಪರಿಣಾಮ ಬೀಳಬಹುದೆಂದು ಯೋಚಿಸುವ ಗೋಜಿಗೂ ಹೋಗುವುದಿಲ…

ಔದಾರ್ಯ

Image