Posts

Showing posts from March, 2012

ಇದೆಂಥ ಹೃದಯ

Image
ಹಿಂದಿಂದೆ ಸುತ್ತುವ ಕಾಯಕ
ಮತ್ತದೇ ಬಡಾಯಿ ನಾಯಕ
ಹೊಸಕಿ ಹೋದ ಹೃದಯ
ಆಹಾ! ಮೊಣಚಾದ ಗಾಯ...

ಕಣ್ಣೊರೆಸಿ ಪುಸಲಾಯಿಸಿ
ಹೇಳಿತೀರಲು ಸಮಜಾಯಿಷಿ
ಗೆಲುವೊಂದು ಬಂದಂತೆ
ಹೃದಯವಿದು ನಟ-ನಟಿಸಿ

ಮತ್ತವನೆ ಬಂದನೇ
ಕಣ್ಣೆದುರು ಮನದೆದುರು
ಶುರುವಿಟ್ಟು ಸಂಭ್ರಮ
ಬದಿಗಿಟ್ಟು ಗಾಬರಿ

ಅದೇ ಅದು ಹೃದಯ
ನಡೆಸುತಿದೆ ತಯ್ಯಾರಿ
ಹಿ೦ದಿ೦ದೆ ಸುತ್ತಲು
ಮಗದೊಮ್ಮೆ ಸಾಯಲು

ಒಲ್ಲದವನು ಬಲ್ಲನವನು
ಸೋಲುವಾಸೆ ಯಾಕಿನ್ನು?
ಹಾಳು ಜಾಡಿನಲ್ಲಿ ಹೃದಯ
ಸಿಲುಕಿ ಕೊರಗಿ ಮತ್ತೆ ಗಾಯ!!
Image
ಮಗಳಿಗೆ ಜಡೆ ಹೆಣೆಯಬೇಕಿದೆ
ಈ ಕಂಪನಿಯ ಇಂಟರ್ವ್ಯೂಗೆ ಬಂದಾಗ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಕೇಳಿದ್ದ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಹೀಗಿತ್ತು- "ಐದು ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಿದ್ದು ಈಗ ಬದಲಾಯಿಸಬೇಕೆಂದು ನಿಮಗನಿಸಿದ್ದು ಏಕೆ?". ಆಲೋಚಿಸಿ ಸೂಕ್ತ ಕೆಲವು ಉತ್ತರ ಕೊಟ್ಟಿದ್ದೆ. ಜೊತೆಗೆ ನನಗರಿವಿಲ್ಲದಂತೆ, "ಸರ್, ಐದು ವರ್ಷಗಳಲ್ಲ, ನನ್ನ ಹಳೆಯ ಎರಡು ಕಂಪನಿಗಳೂ ಸೇರಿ ಸುಮಾರು ಹತ್ತು ವರ್ಷಗಳ ಕಾಲ ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುತ್ತಿದ್ದೇನೆ. ಬೆಳಗ್ಗೆ ಆರು ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಮನೆ ಸೇರುವುದು ಸಂಜೆ ಆರೂವರೆಗೆ. ನನ್ನ ಅವಸವಸರದ ಬದುಕಿನ ನಡುವೆ ನನ್ನ ಏಳು ವರ್ಷದ ಮಗಳಿಗೆ ಗಿಡ್ದವಾಗಿ ಕೂದಲನ್ನ ಕತ್ತರಿಸಿ ಬಾಬ್ ಕಟ್ ಮಾಡಿಸಿದ್ದೇನೆ. ಅವಳಿಗೆ ಎಲ್ಲರಂತೆ ಜಡೆ ಹಾಕಿಕೊಂಡು ಶಾಲೆಗೆ ಹೋಗುವ ಆಸೆ. ನಿಮ್ಮ ಕಂಪನಿ ಕೆಲಸದ ವೇಳೆ ೯.೩೦ಕ್ಕೆ. ಮಗಳಿಗೆ ಜಡೆ ಹಾಕಿ ಶಾಲೆಗೆ ಕಳಿಸಿ ನಂತರ ಆಫೀಸಿಗೆ ಬರಬಹುದೆಂಬ ಒಂದು ಸಣ್ಣ ಆಸೆ ನನಗೂ ಇದೆ" ಎಂದಿದ್ದೆ.

ನನ್ನೂರು - ನನ್ನಮ್ಮನ ಒಡಲಲ್ಲೇ ಇರುವಂತೆ!
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದರೂ, ಕೆಲಸಕ್ಕೆ ಹತ್ತಿರವಾಗುವಂತೆ ಮನೆಯನ್ನು ಬದಲಾಯಿಸಲು ಸ್ನೇಹಿತರೆಲ್ಲ ಸೂಚಿಸಿದ್ದರೂ ಅದರ ಬಗ್ಗೆ ಕಿಂಚಿತ್ತು ಯೋಚಿಸಲಿಲ್ಲ. ಯಾಕೆಂದರೆ - ವಿಜಯನಗರ ಅಚ್ಚು ಮೆಚ್ಚು. ಬೆಂಗಳೂರಿನ ನೇಟಿವಿಟಿ ಅಲ್ಪ ಸ್ವಲ…