Posts

Showing posts from 2014

ಈ ಭಾನುವಾರವೂ - ಕನ್ನಡಕ್ಕಾಗಿ / ಕಂಕಣಕ್ಕಾಗಿ

Image
ಕಂಕಣ : ನಾಡು - ನುಡಿಗಾಗಿ  ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ,"ಕಂಕಣ" ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ್ರಲ್ ಮಾಲ್ ಎದುರು!   ಉದ್ದೇಶ ಇಷ್ಟೆ : "ಕನ್ನಡದವರೇ,  ಕನ್ನಡ ಮಾತಾಡಿ" ಅ೦ತ ವಿನಮ್ರವಾಗಿ ಫಲಕಗಳನ್ನ ಪ್ರದರ್ಶಿಸುವ ಮೂಲಕ ಕೇಳಿಕೊಳ್ಳೋದು. ಎಂದೂ ಯಾವ ಪ್ರತಿಭಟನೆಗಳಿಗೂ ರೋಡಿಗಿಳಿದವಳಲ್ಲ - ಮುಜುಗರ ಸರಿ - ಆದರೆ ಇದು ಪ್ರತಿಭಟನೆಯೇ ಅಲ್ಲ - ಮನವಿ ಮಾತ್ರ - ಒಂದೇ ಒಂದು ಘೋಷಣೆಯನ್ನೂಸಹ ಕೂಗದೆ - ಹೆಮ್ಮೆಯಿಂದ ನಾನು ಕನ್ನಡತಿ ಅಂತ ಸಾರುವ ಒಂದು ಸುವರ್ಣವಕಾಶ, ಬಿಡೋದುಂಟೆ? ಕನ್ನಡಿಗರನ್ನ ಎಬ್ಬಿಸಿ "ಕನ್ನಡ ಮಾತಾಡ್ರಪ್ಪ, ದೇವ್ರುಗಳ"!! ಅಂತ ಕೇಳಿಕೊಳ್ಳುವ ಅಭಿಯಾನ. 
ಈ ಅಭಿಯಾನಕ್ಕೆ ಬೇಕಿದ್ದ ಪೂರ್ವ ತಯಾರಿ ಅಷ್ಟಿಷ್ಟಲ್ಲ. ನಂಗೊತ್ತು ಕಂಕಣ ಬಳಗದ ಕೆಲವು ಸಧಸ್ಯರು ಅತ್ಯಂತ ಹೆಚ್ಚು ಶ್ರಮವಹಿಸಿ ತಯಾರಿ ನಡೆಸಿದ್ರು. ಚಿದಾನಂದ್, ಶ್ರೀಧರ್, ಪ್ರಕಾಶ್, ಭ್ರಮೇಶ್, ರವೀಂದ್ರ .... ಅನೇಕರು. ಕವಿರಾಜ್ ಅವರು ಸಹ ಖುದ್ದು ತಾವೇ ಪ್ರತಿಯೊಂದು ವಿಭಾಗದಲ್ಲೂ ಎಚ್ಚರ ವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 

ಮಾಲ್ ಬಳಿ ಸೇರಿದೆವು, ಗುಂಪುಗಳ ವಿಂಗಡಿಸಿದರು - "ಎಲ್ರೂ ನಿಮ್ಮ height ಪ್ರಕಾರ ನಿಲ್ಲಿ ಅಂದ್ರು", ಹ.ಹ.!  ನನ್ನ ಸ್ಕೂಲ್ PT ಮೇಡಂ ನೆನಪಾದ್ರು! ಎತ್ತರ ಇದ್ದೀನಿ ಅಂತ ಅಲ್ಲೆಲ್ಲೋ ಹಿಂದೆ ಹೋಗಿ ನಿಂತಾಗೆಲ್ಲ, "ಹೇ ನೀನು, ಹೂ…

ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ : ಪಂಜುವಿನಲ್ಲಿ

http://www.panjumagazine.com/?p=6596#comments

ಸ್ಪ್ರಿ೦ಗ್ ಟ್ರೀ ಅಪಾರ್ಟ್ಮೆ೦ಟ್ ರೆಸಿಡೆ೦ಟ್ಸ್ ಅಸೋಸಿಯೇಷನ್ನಿನ ನಿಯಮದ೦ತೆ / ಸರದಿಯ೦ತೆ ಈ ಬಾರಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ೪೦೪ ನೇ ಫ್ಲಾಟಿನ ಶಾ೦ತ ಇನಾಮ್ದಾರ್. ಸರದಿಯ ಪ್ರಕಾರ ಆಯ್ಕೆಯಾಗಿದ್ದರು ಒಲ್ಲದ ಮನಸಿನಿ೦ದಲೇ ಈ ಜವಾಬ್ದಾರಿಯನ್ನು ಒಪ್ಪಿಕೊ೦ಡಿದ್ದಳು. ಆಯ್ಕೆಯಾದ ವಿಷಯ ಮನೆಯಲ್ಲಿ ತಿಳಿಸಿದಾಗ ಯಾರೊಬ್ಬರೂ ಇದನ್ನು ಸ್ವಾಗತಿಸಿರಲಿಲ್ಲ. ಬದಲಿಗೆ ಗೇಲಿ ಮಾಡಿ ತಮಾಷೆ ಮಾಡಿದ್ದರು.

ಮು೦ದಿನ ವಾರ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ಅಸೋಸಿಯೇಷನ್ನಿನ ಸಧಸ್ಯರೆಲ್ಲರೂ ಸೇರಿ ಒ೦ದು ಕಾರ್ಯಕ್ರಮ ಆಯೋಜಿಸಿಕೊ೦ಡಿದ್ದು, ಅದಕ್ಕಾಗಿ ಶಾ೦ತ ಅಪಾರ್ಟ್ಮೆ೦ಟಿನ ಹೆ೦ಗಸಿರಿಗೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಭಾಷಣ ಮಾಡುವ೦ತೆ ನಿರ್ಧಾರವಾಯಿತು. ಮೀಟಿ೦ಗ್ ಮುಗಿಸಿಕೊ೦ಡು ಬ೦ದಾಗಿನಿ೦ದ ಶಾ೦ತಳಿಗೆ ಭಾಷಣದಲ್ಲಿ ಮಾತನಾಡುವುದರ ಬಗ್ಗೆಯೇ ದೊಡ್ಡ ಚಿ೦ತೆಯಾಗಿತ್ತು.  

ಇನ್ನು ತನ್ನ ಭಾಷಣವನ್ನು ಬರೆದಿಟ್ಟುಕೊಳ್ಳುವುದೇ ಲೇಸು ಎ೦ದು ನಿರ್ಧರಿಸಿದ್ದಳು. ಅ೦ತೆಯೇ ಮರು ದಿನ ಬೇಗನೆದ್ದು ಮನೆಯ ಕೆಲಸಗಳನ್ನೆಲ್ಲಾ ಮುಗಿಸಿ, ಬೆಳಗಿನ ತಿ೦ಡಿ, ಮಧ್ಯಾಹ್ನದ ಅಡುಗೆ ಎಲ್ಲವೂ ಚಕಚಕನೆ ಮುಗಿಸಿಟ್ಟಳು. ಕಾಫಿ ಬೆರೆಸಿ ಮಾವನವರಿಗೆ ಕೊಡುವಷ್ಟರಲ್ಲಿ ಎ೦ದಿಗಿ೦ತ  ಹತ್ತು ನಿಮಿಷ ತಡವಾಗಿತ್ತು. ಅದಕ್ಕಾಗಿ ಅವರ ತೀಕ್ಷ್ಣ ನೋಟ ಎದುರಿಸಲಾಗದೆ, ಮೆಲು ದನಿಯಲ್ಲಿ ‘ಕಾಫಿ ಇಲ್ಲಿಡ್ಲಾ ಮಾವ’, ಅ೦ತ ಕೇಳಿಕೊ೦ಡು ಟ…

Hi Ghalib......

ಈ ಹೊತ್ತಿನಲ್ಲಿ
ನಿನ್ನ ಭೇಟಿ
ಬೇಡವಾಗಿತ್ತು
ಗಾಲಿಬ್....
ಪ್ರೀತಿ, 
ಪ್ರೀತಿಯಲ್ಲ,
ಪ್ರೀತಿಯ ಕವನ ಅದಲ್ಲವೇ ಅಲ್ಲ!!
ಹ ಹ! ಕವನ ಮಾತ್ರ ಪ್ರೀತಿಯ ಕುರಿತು ಎಂದೆ ....
ನಿನ್ನ ಗಜಲ್ನ
ಅಲೌಕಿಕತೆಯ
ಸದ್ದಿಗೊಮ್ಮೆ
ಒಲವುಂಡ ಪದಗಳೆಲ್ಲ
ತಲೆಕೆಳಗಾದವು....
ವಿನಾಕಾರಣ
ಕಾಲಡಿಯಲ್ಲಿದ್ದ ಭೂಮಿ 
ನೆತ್ತಿಯ ಮೇಲೆ
ತಂದಿರಿಸಿದ್ದು ನೀನೇ
ಅಬ್ಭಾ! ಹೃದಯ ಭಾರ ....
ನೀನೂ -
ನಿನ್ನ ಗಜಲ್ಗಳ
ಸಹವಾಸವೇ ಬೇಡ
ವಿದಾಯ ನಿನಗೆ
ಮುಂದೆಂದಾದರು
ಸಿಗುವ.....
......... ಇಲ್ಲ,ಆವರಿಸಿಯೇಬಿಟ್ಟೆ!
ಅಮಲು, ಮತ್ತೆ ನಾಳೆ
ಇದೇ ಸಮಯಕ್ಕೆ
ಹೊಸ ಪುಟ
ಹೊಸ ಭೇಟಿ....

ಪಂಜುವಿನಲ್ಲಿ ............

Image
http://www.panjumagazine.com/?p=8071


ಸೌಮ್ಯ : ಅಪ್ಪನ ಕುಡಿತಕ್ಕೆ, ಸಾಲಗಳಿಗೆ ಬಲಿಯಾಗಿ ನಗರದಲ್ಲಿ ಮನೆಕೆಲಸಕ್ಕಿರುವ ೮ ವರುಷದ ಬಾಲಕಿ. 
ರಾಜು : ಹೆತ್ತವರ ಆರನೇ ಕುಡಿ, ವಯಸ್ಸು ೧೧! ತನ್ನೂರ ಬಿಟ್ಟು ನಗರಕ್ಕೆ ಬಂದು ಯಾವುದೋ ಟೀ ಅಂಗಡಿಯಲ್ಲಿ ಕೆಲಸಕ್ಕಿದ್ದಾನೆ.  ದೀಪ : ತಾನು ಕಲಿಯುತಿದ್ದ ಶಾಲೆಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜ್ಯನಕ್ಕೊಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿರುವ ಮುಗುದೆ.  ರವಿ : ಪರೀಕ್ಷೆಯಲ್ಲಿ ಕಡಿಮೆ ಅಂಕಗಳ ಪಡೆದ ಕಾರಣ ಅಮ್ಮ ಬೈದಳೆ೦ದು, ಸಮಾಜದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ೧೪ ವರುಷದ ಬಾಲಕ.  ಚೈತ್ರ : ಹದಿಮೂರು ವರುಷದ ಬಾಲಕಿ, ಆಗಲೇ ಗರ್ಭಿಣಿ.  ಚಿರಂತ್ : ತನ್ನ ಹೆತ್ತವರಿಬ್ಬರೂ ಎಂಟಂಕಿ ಸಂಬಳ ತರುವ ಮೇಧಾವಿಗಳು. ಮಗನಿಗಾಗಿ ಅವರ ಬಳಿ ಸಮಯವಿಲ್ಲ. ತನ್ನ ೧೨ನೇ ವಯಸ್ಸಿನಲ್ಲಿ ಸಿಗರೇಟು, ಗಾಂಜಾ ಸೇವನೆ! ಈಗ ಮಾನಸಿಕ ಅಸ್ವಸ್ಥ.  ಮೈನ : ಮನೆಗೆ ಬರುತಿದ್ದ ಅಪ್ಪನ ಸ್ನೇಹಿತನಿಂದಲೇ ದೌರ್ಜ್ಯನಕ್ಕೊಳಗಾಗಿ ಖಿನ್ನತೆಯಿಂದ ಬಳಲುತ್ತಿರುವ ಹೆಣ್ಣುಕೂಸು.  ಸುಂದರ್ : ಅವನ ಊರು ಕೇರಿ ತಿಳಿಯದು! ಹಸಿವಿನಿಂದ ಬಳಲಿ, ಕಂಗಾಲಾಗಿ ಕಡೆಗೆ ಅಂಗಡಿಯವನನ್ನೇ ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ.  ಲಿಲ್ಲಿ / ಸಮೀರ : ಮೈನೆರೆಯುವ ಮುನ್ನವೇ ಹೊರ ದೇಶಕ್ಕೆ ಮಾರಾಟವಾದ ಹೆಣ್ಣು ಮಕ್ಕಳು.  ಆಶ್ರಮ : ಆರರಿಂದ ಹದಿನಾರು ವಯಸ್ಸಿನ ಮಕ್ಕಳನ್ನು ಸಾಕುತಿದ್ದ ಅನಾಥಾಶ್ರಮದ ಮುಖ್ಯಸ್ಥನಿಂದಲೇ ಮಕ್ಕಳಿಗೆ ಕಿರುಕುಳ, ಹ…

ಮಿತಿ

Image
ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html ಭಾಗ (೨) :  ದಿನಕರ್ ಮೋಗೆರರವರ "ದಣಪೆ" http://dinakarmoger.blogspot.in/2014/04/blog-post_14.html   ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html ಭಾಗ (೪) :  "ಮಿತಿ" ಎಂದು ಮುಂದುವರೆಸುವ ನನ್ನ ಪುಟ್ಟ ಪ್ರಯತ್ನ: 


ಅಲ್ಲಿಂದ ಮನೆಯ ಹಾದಿ ಹಿಡಿದು ಹೇಗೆ ಬಂದೆನೋ! ಬಂದೊಡನೆ ಏನೊಂದು ಭಾವವಿಲ್ಲದೆ ಮೂಖಿಯಂತೆ ಕುಳಿತುಬಿಟ್ಟೆ. ಫ್ಯಾನಿನ ಗಾಳಿ ಜೋರಾಗಿ ಬೀಸುತಿದ್ದರೂ ಬೆವರುತ್ತಿದ್ದೆ. ನನ್ನ ಬಗ್ಗೆ ನನಗೆ ನಾಚಿಕೆ, ಕೀಳರಿಮೆ. ಪತಿಯ ಪ್ರಾಮಾಣಿಕತೆ  ಆ ಘಳಿಗೆಯನ್ನು  ಎಚ್ಚರಿಸಿತ್ತು. ಅವರ ನಿಷ್ಕಲ್ಮಷ ಪ್ರೀತಿಗೆ ಎಷ್ಟೊಂದು ಶಕ್ತಿಯಿದೆ ಎಂದು ಗ್ರಹಿಸಿರಲಿಲ್ಲ. ನಾನು ಮಾರುಹೋದೆ!
ನವಿರಾದ ಭಾವಗಳು  ಹಸೆಮಣೆಯ ಕನಸಂತೆ  ಮದುಮಗನ ಮುಗುಳ್ನಗೆ  ಮನಸದುವೆ ಸೋತಂತೆ  ನವ-ನವೀನ ಬಯಕೆಗಳು  ಅವಕಿಲ್ಲ ಮಿತಿಯಂತೆ!
ಅಲ್ಲಿಯ ತನಕ ಆ ನನ್ನ ಗೆಳೆಯನಿಗಾಗಿ  ಹಂಬಲಿಸಿದ್ದೆ, ಮನಸಿನಲ್ಲೇ ಮೋಹಿಸಿದ್ದೆ, ಎಲ್ಲೆಲ್ಲೂ ಅವನೇ ಆವರಿಸಿಕೊಂಡಿದ್ದ! ನನಗಾದರೂ ಯಾವ ಮಂಕು ಬಡಿದಿತ್ತೊ? ಆ ಸಮಯದಲ್ಲಿ ಇವರು ಫೋನ್ ಮಾಡದೆ ಇದ್ದಿದ್ದರೆ! ಅಬ್ಭಾ..! ಊಹೆಯೂ ಸಹ ತಲೆ ತಗ್ಗಿಸುವಂತೆ ಮಾಡಿದೆ. 
ಅದೆಷ್ಟು ಹೊತ್ತು ಹಾಗೆ ಶವದಂತೆ ಕುಳಿತಿದ್ದೆ…

ದೇವರ ಹೂ

Image
ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. 
"ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"....
"ಅಲ್ಲೇ ಇಡು. ಅಲ್ಲೇ, ಅಲ್ಲೇ. ಎರಡು ಹಾರ ಜಾಸ್ತಿ ತ೦ದಿದ್ದೀ ತಾನೆ? ತುಳಸಿ ಮಾಲೆ ಬೇರೆಯಾಗಿ ಕಟ್ಟಿದ್ದೀಯ? ನಿ೦ಗೆಷ್ಟು ಸರ್ತಿ ಹೇಳೋದು, ಹೂ ತ೦ದಾಗ ದೂರದಿ೦ದ್ಲೆ ಆ ಟೇಬಲ್ ಮೇಲಿಡು ಅ೦ತ".... "ಬ೦ದಾಗ್ಲೆಲ್ಲ ಅದೂ ಇದೂ ಮುಟ್ಕೊ೦ಡೇ ಹೋಡಾಡ್ತೀಯ!", ಕೆ೦ಚಿಯ ಕಡೆ ದುರದುರನೆ ನೋಡಿ ಗೊಣಗಾಡಿದರು ಶಾ೦ತಮ್ಮ.

"ಇನ್ನೂ ಇಲ್ಲೇ ನಿ೦ತಿದ್ದೀಯ? ದುಡ್ಡು ನಾಳೆ ತಗೊ, ಎಲ್ಲ್ರೂ ಬರೊ ಹೊತ್ತಾಯ್ತು ಹೊರಡು", ಅ೦ತ ಮತ್ತೊಮ್ಮೆ ಗುಡಗಿದರು ಶಾ೦ತಮ್ಮ.

"ಇಲ್ಲಾ ಅಮ್ಮೋರೆ, ಮಗಳ ಪೀಸ್ ಕಟ್ಬೇಕು ಇಸ್ಕೂಲಿ೦ದ ವಾಪಸ್ ಕಳ್ಸೋರೆ, ಈ ತಿ೦ಗಳ್ದು ಪೂರ್ತಿ ಈಗ್ಲೆ ಕೊಟ್ಬಿಡಿ, ಈವೊತ್ತಿ೦ದು ತಿ೦ಗಳ್ದು ಎಲ್ಲಾ ಸೇರಿ 900 ಆಯ್ತು",  ಅ೦ತ ದೃಢವಾಗಿ ಅಲ್ಲಿಯೇ ನಿ೦ತಳು ಕೆ೦ಚಿ.

"ಅದ್ಯಾಕೆ ಆ ವಯ್ಯಾರ, ಸರಿಯಾಗಿ ಕೇಳು. ಇನ್ನೊ೦ದ್ಸರ್ತಿ ಮನೇಲಿ ಎಲ್ಲಾ ಮುಟ್ಕೊ೦ಡು ಹೋಡಾಡ್ಬೇಡ ಆಯ್ತ, ಬ೦ದಾಗೆಲ್ಲ ಎರಡೆರಡು ಕೆಲ್ಸ ಕೊಡ್ತೀಯ, ಮಡಿ-ಮೈಲಿಗೆ ಒ೦ದೂ ಇಲ್ಲ", ಬೈದಾಡಿಕೊ೦ಡೇ ಒಳಗಿನಿ೦ದ ದುಡ್ಡು ತ೦ದು ಟೇಬಲ್ ಮೇಲಿಟ್ಟರು ಶಾ೦ತಮ್ಮ.

"ದ್ಯಾವ್ರೆ! ಆ ಕುಡ್ಕನ್ ಕಣ್ಗೆ ಬೀಳೋಕಿನ್ಮು೦ಚೆ ಈ ದುಡ್ಡಿಗೇನೇನ್ ಬರ್ತದೊ ಎಲ್ಲಾ ತಕ್ಕೊ೦ಡು ಮನೀಕಡೆ ಹೊಳ್ಟೋಗ್ಬೇಕು&q…

ಹೀಗೊಂದು ಮಹಿಳಾ ದಿನಾಚರಣೆ!!

Image
ಈ ದಿನ ಎಂದಿಲ್ಲದ ಕೆಲಸ ಮನೆಯಿಂದಲೇ ಮೊದಲಾಗಿತ್ತು, ಅನಿರೀಕ್ಷಿತ ನೆಂಟರು - ಅತಿಥಿ ದೇವೋಭವ! ನಿನ್ನೆ ಸಂಜೆ ಆಫೀಸಿನಿಂದ ಹೊರಟಾಗ ತಡವಾಗಿ ಉಳಿದ ಕೆಳಸಗಳೆಲ್ಲ ಬದಿಗಿಟ್ಟು ಬಂದಿದ್ದೆ. ಈ ದಿನ ಮನೆಯಿಂದಲೇ ವಿಳಂಬ. ಹೊರಟಾಗ ನಿನ್ನೆ  ಸಂಜೆ ಮಾಡದೆ ಬಿಟ್ಟು ಬಂದ ಆಫೀಸಿನ ಕೆಲಸಗಳು ನೆನಪಾದವು, ಆತುರತುರವಾಗಿಯೇ ಆಟೋ ಹಿಡಿದು ಕಚೇರಿಗೆ  ಹೊರಟೆ.ಆಫೀಸಿಗೆ ಹೆಜ್ಜೆ ಇಡುತಿದ್ದಂತೆ, "ಹ್ಯಾಪಿ ವಿಮೆನ್ಸ್ ಡೇ ಮೇಡಂ" ಅಂತ ಸೆಕ್ಯೂರಿಟಿಯ ನಗುಮೊಗದ ಸಲಾಮು! ಬ್ಯಾಗಿನಿಂದ ಆಕ್ಸಿಸ್ ಕಾರ್ಡ್ ತೆಗೆಯುತ್ತಲೇ ಒಂದು ಸ್ಮೈಲ್ ಕೊಟ್ಟು "ಥ್ಯಾಂಕ್ಸ್ ವೇಲು", ಅಂತ ಹೇಳಿ ಒಳಗೆ ನಡೆದೆ.  ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ!  ನನ್ನ ಟೇಬಲ್ಲಿನ ಮೇಲೆ ಒಂದು ಕೆಂಪು ರೋಜ ಹೂ ಒಂದು ಗ್ರೀಟಿಂಗ್ ಕಾರ್ಡು. "Happy Women's Day To Smt. Roopa Satish, from Admin Staff" ಅಂತ ಬರೆದಿತ್ತು. ಹೂ ಇಷ್ಟವಾಯ್ತು-ಹಾಗೆಯೇ ನನ್ನ ಆಫೀಸಿನ ಸ್ಟಾಫ್ ಗಳ ಆತ್ಮಿಯತೆಯೂ! ಗಾಜಿನ ಪುಟ್ಟ ಬಟ್ಟಲಿನೊಳಗೆ ನೀರು ತುಂಬಿಸಿ ಹೂವಿನ ಕಡ್ಡಿ ಮುರಿದು ಅದರೊಳಗೆ ತೇಲಿ ಬಿಟ್ಟೆ. ಇನ್ನು ಮೇಲ್ ಬಾಕ್ಸ್ ತುಂಬಾ ವಿಶೇಷವಾದ ಶುಭ ಸಂದೇಶಗಳು. ಅದರಲ್ಲಿ ಮನಸೆಳೆದ ಒಂದು ಸಂದೇಶ ನಮ್ಮ ಆಫೀಸಿನ ಹಿರಿಯರಲ್ಲಿ ಒಬ್ಬರಾದ ಜನರಲ್ ಮ್ಯಾನೇಜರ್ (GM) ರವರದ್ದು. ಹೆಣ್ಣು ಸಮಾಜದ ಕಣ್ಣು ಎನ್ನುತ್ತ ತಾಯಿ-ಮಗಳು-ಪ್ರೇಯಸಿ-ಅಕ್ಕ-ತಂಗಿಯರ ಪ್ರತಿರೂಪಗಳ ಬ…

ಸಾಲುಗಳ ಹುಡುಕಾಟ!

Image