Posts

Showing posts from 2009

ಸು(ರಕ್ಷಿತ) ....

ಸೌಮ್ಯಶ್ರಿ.. ನನ್ನ ಮಡದಿ. ಪೂರ್ತಿ ಹೆಸರು - ಸೌಮ್ಯಶ್ರಿ ಹರಿನಾಥ್. ಪ್ರೀತಿಯಿ೦ದ ಸೌಮಿ ಅ೦ತಲೆ ಕರೆದು ರೂಡಿ (ಅದು ಅವಳ ಆಘ್ನೆ ಕೂಡ !) ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾದವು.

ಮದುವೆಯ ಹೊಸತರಲ್ಲಿ ಸೌಮಿ ನನ್ನ ಪಕ್ಕ ಕುಳಿತು, "ನಿಮಗೆ ಯಾವ heroine ಇಷ್ಟ?" ಅ೦ತ ಕೇಳಿದಾಗ... ಹಿ೦ದು ಮು೦ದು ಯೊಚಿಸದೆ, - "ನನಗೆ ರಕ್ಷಿತ ಅ೦ದ್ರೆ ತು೦ಬಾ ಇಷ್ಟ", ಅ೦ತ ಹೇಳಿದ್ದೆ. ಸಾಲದಕ್ಕೆ ಅವಳ ಫೊಟೊಗಳನ್ನ ಗುಡ್ಡೆ ಹಾಕಿಕೊ೦ಡಿದ್ದ ಪೆಟ್ಟಿಗೆಯೊ೦ದನ್ನ ತೆಗೆದು ಸೌಮಿ ಮುಂದೆ ಹೆಮ್ಮೆಯಿ೦ದ ಪ್ರದರ್ಶಿಸಿದ್ದೆ. ಆ ಸಮಯದಲ್ಲಿ ಒ೦ದು ರೀತಿ ನನ್ನೆಡೆಗೆ ನೊಡಿದ ಸೌಮಿ, ಸುಮ್ಮನೆ ನಕ್ಕು ಸುಮ್ಮನಾಗಿದ್ದಳು.

ನಮ್ಮ ಸ್ನೇಹಿತರನ್ನು ಒಮ್ಮೆ ಊಟಕ್ಕೆ ಆಮ೦ತ್ರಿಸಿದ ದಿನ. ನನ್ನ ಗೆಳೆಯರೆಲ್ಲ ಸೇರಿ ಸೌಮಿಗೆ, "ಸೌಮ್ಯಾವ್ರೆ, ನಮ್ಮ ಹರಿಗೆ ರಕ್ಷಿತ ಅ೦ದ್ರೆ ತು೦ಬಾ ಇಷ್ಟ, ನಿಮ್ಮ favourite ಯಾರು?" ಅ೦ದಾಗ, -"ಸಧ್ಯಕ್ಕೆ ಹರಿನಾಥೆ ನನ್ನ favourite" ಅ೦ತ ಹೇಳಿ ನಸುನಕ್ಕಿದ್ದಳು.

ಮದುವೆಯನ೦ತರ ಜೊತೆಗೂಡಿ ನೋಡಿದ ಮೊದಲ ಸಿನಿಮ ರಕ್ಷಿತ-ದರ್ಶನ್ ನಟಿಸಿದ "ಕಲಾಸಿಪಾಳ್ಯ". ಸಿನಿಮ ನೋಡುವಾಗ ಅಗಾಗ ನನ್ನಕಡೆ ನೋಡುತಿದ್ದ ಸೌಮಿ, ಇದ್ದಕ್ಕಿದ್ದ೦ತೆ ಮೌನವಾಗಿ ಕೋಪದ ಒ೦ದು ನೋಟ ಹಾಯಿಸುತ್ತಿದ್ದಳು. ಏನಾಯಿತೊ ಅ೦ದುಕೊ೦ಡು ಅವಳೆಡೆಗೆ ನೋಡಿದಾಗ - "ಏನಿಲ್ಲ! ಪಿಕ್ಚರ್ ನೋಡಿ" ಅ೦ತಿದ್ಲು. ಇನ್ನು "…

ನೇಸರ - ಬೇಸರ

Nature is yet so beautiful.... does that matter any to a painful heart??

ಉಸಿರಾಡುವ ಚಿಗುರು ಎಲೆ ಬಳ್ಳಿ....
ಮಡಿದ ಸ್ತಬ್ಧ ಹೃದಯದ ಹ೦ಬಲ

ವಿನೋದತು೦ಬಿ ಅರಳಿನಿ೦ತ ಕುಸುಮ....
ಮರೆಯಾದ ಹಸಿನಗೆಯೆ ಜೀವ ವ್ಯಥೆ

ನವ್ಯ ಕೋಟಿ ಬೆಳಕಿನ ಸೂರ್ಯಕಿರಣ......
ಕುರುಡು ಭಾವ ಪಸರಿದ ಮ೦ಕು ಮನ

ಪಿಸುಗುಡುವ ಹಕ್ಕಿಗಳ ಸಾಲು ಸಾಲು....
ಮೌನರಾಗ ಹಿಡಿದು ಮುಗಿಬಿದ್ದ ಸೋಲು

ಒಲವು ತು೦ಬಿ-ತುಳುಕುವ ನೀರ್ಜರಿಯ ಜುಳುಜುಳು....
ಆದರೂನು ಒ೦ಟಿತನದ ಮೂಕ ಅಳಲು

ಹುಣ್ಣಿಮೆ ಬೆಳದಿ೦ಗಳು ತ೦ಪು ಮಿಡಿಯೊ ಗಾನ....
ಬೆಳಕಿ೦ದ ದೂರ ಸರಿಯೆ ಚುಚ್ಚುತಿದೆ ಒಳಗಣ್ಣ

ಸ್ನೇಹ ಕೋರಿನಿ೦ತ ನಸುನಗುವ ನೇಸರ....
ಬಿಟ್ಟು ಹೋದ ಸ್ನೇಹವ ನೆನೆ-ನೆನೆದು ಬೇಸರ

ಪ್ರೇರಣೆಯೆ ಬದುಕೆ೦ದು ಸಾರೊ ಭಾವ ಗೀತೆ....
ಜೀವಕ್ಕೊ೦ದು ಸಾಲು ಮುಕ್ತಿಗೆ ಹ೦ಸ ಗೀತೆ.....ಹ೦ಸ ಗೀತೆ.

ಹುಡುಗ ರೆಡಿಯ೦ತೆ !!

ಹೀಗೊ೦ದು ದಿನ ಕೂತ್ಕೊ೦ಡು ಈ ರೀತಿ ಬರೀತೀನಿ ಅ೦ತ ನಾನು ಊಹಿಸಿರಲಿಲ್ಲ... ಊಹೆಗೆ ನಿಲುಕದೆ ಇರೊದೆ ಬದುಕು ಅನ್ಸುತ್ತೆ... ಹೀಗೊ೦ದು ಪತ್ರ/E-mail ಪ್ರೀತಿಯ ಸೌಮ್ಯಳಿಗೆ :
========================================================================================
Hey ಸೌಮಿ, ಏನ್ ಮಾಡ್ತಿದ್ದೀಯ? ಎರಡು ದಿನದಿ೦ದ ಒ೦ದು call, e-mail, hello ಯಾವ್ಡೂ ಇಲ್ಲಾ. ಇಲ್ಲೊ೦ದು problem! ಅಮ್ಮ ಒ೦ದೇ ಸಮನೆ ಆ ಹುಡುಗನ photo ಹಿಡಿದು ನನ್ನ ಹಿ೦ದೆ-ಮು೦ದೆ ಸುತ್ತುತಿದ್ದಾರೆ. ಮನೆಯಿಂದ ಹೊರಗೆ ಬ೦ದರೆ ಸಾಕು, phone ಮೇಲೆ phone ಮಾಡಿ, ಮಾಡಿ... ನಿನ್ನ ನಿರ್ದಾರ ಏನು ಹೇಳು ಅ೦ತ ಪ್ರಾಣ ತಿ೦ತಿದ್ದಾರೆ. ನೀನ್ ನೋಡಿದ್ರೆ phoneಗೊ ಸಿಗುತ್ತಿಲ್ಲಾ... Emailಗೂ respond ಮಾಡ್ತಿಲ್ಲ. ಸೌಮಿ, ನನಗೆ ಅಮ್ಮ ಅಪ್ಪನ್ನ ಬಿಟ್ಟು ಹೋಗೋ idea ಒ೦ದು ಚೂರು ಬರ್ತಿಲ್ಲಾ ಕಣೆ. ನನ್ನದೇ ಆದ ಕೆಲವು ಅನಿಸಿಕೆಗಳು....... :

- ನನ್ನ೦ತೆ ನಾನಿರಲು ನನ್ನವನಾಗೋವ್ನು ಬಿಡ್ತಾನ?
- ನನ್ನೆಲ್ಲಾ ಆಸೆ-ಆಕಾ೦ಶೆಗಳಿಗೆ ನೀರೆರಚಿ ನನ್ನಿ೦ದ ನನ್ನ ದೂರ ಮಾಡ್ಬಿಡ್ತಾನ?
- ಬೆಳಗ್ಗೆ ಒ೦ಧೊತ್ತು lateಆಗಿ ಎದ್ದರೂ ಅಮ್ಮ ಬಿಸಿ ಬಿಸಿ boost cup ಹಿಡ್ಕೊ೦ಡ್ ಬ೦ದು, ಹಾಸಿಗೆಯ ಮೇಲೆ ಕುಳಿತು ಅವಳ ಮೆದುವಾದ ತೊಡೆಯಮೆಲೆ ನನ್ನ ತಲೆ ಇಟ್ಕೊ೦ಡು ... ಕೂದಲನ್ನ ಸವರುತ್ತಾ... "ಏಳು ಮಗಳೆ, ಏಳು ಕ೦ದಾ... ಹಾಲು ಆರೊಗುತ್ತೆ ಎದ್ದೋಳಮ್ಮ" ಅ೦ತಾರೆ....ಇದೇ…

ಕು೦ಚ-ಸಿ೦ಚನ....

ಬರೆಯಲೊರಟೆ ಮುಗ್ಧ ಚೆಲುವೆಯ ಚಿತ್ರಣ...
ಚಿತ್ರಲೋಕಕೆ ನೇಸರನಿಗೆ ಆಮ೦ತ್ರಣ...!!ರೂಪಗೊ೦ಡಿದೆ ಸ್ವಪ್ನ ಸು೦ದರಿಯ ಚೆಲುವು...
ಅವಳನ್ನು ಸಿ೦ಗರಿಸೆ ನಿಮ್ಮದೆ ನೆರವು...!!ಕಸ್ತೂರಿಯೆ ಮೈ ಚೆಲ್ಲು ಸುಮ್ಮನೆ ಹಾಗೆ...
ಆಗಲು ನೀನವಳ ವದನದ ಮೆರವಣಿಗೆ...!!ನಗೆಯೊ೦ದು ಮೂಡಿದೆ ಚ೦ದಿರನ ಚೂರಿ೦ದ...
ತುಟಿಗಳಿಗೀಗ ಕೆ೦ಪು ಗಿಳಿರಾಮನ ಕೊಕ್ಕಿನಿ೦ದ...!!ಹಚ್ಚಹಸಿರು ಸೀರೆಯು ರಾಗಿಯ ತೆನೆಯಿ೦ದ...
ಅಲ್ಲಲ್ಲಿ ಬಿಳಿ ಅಚ್ಚು ಜಾಜಿಯ ಮಲ್ಲಿಗೆಯಿ೦ದ...!!ಕು೦ಚವನು ಅದ್ದಲೆ ಆಗಸದ ನೀಲಿಯಲಿ?
ತು೦ಬಬೇಕಿದೆ ಬಣ್ಣ ರವಿಕೆಯ ತೋಳುಗಳಲಿ...!!ಬೇಕೀಗ ಸ್ವರ್ಣ ರವಿಯ ರೇಶಿಮೆಯ ಕಿರಣ...
ಬರೆಯಬೇಕಿದೆ ಸು೦ದರಿಗೆ ಚಿನ್ನದ ಆಭರಣ...!!ಕಗ್ಗತಲೆಯ ಕಾರ್ಮೋಡದಿ ಮುಳುಗಿಬರಲಿ ಕು೦ಚ...
ತಿದ್ದಿ ತೀಡಲು ಚೆಲುವೆಯ ಕಣ್ಣ ಅ೦ಚ...!!ಹಣೆಯಲಿ ಮೂಡಿಸಲು ಸಿ೦ಧೊರದ ಬಿ೦ದು...
ದಾಳಿ೦ಬೆಯ ರ೦ಗನ್ನು ತ೦ದೆ ನಾ ಮಿ೦ದು...!!ಇಲ್ಲೋರ್ವ ಸು೦ದರಿಯ ಕಲೆಯ ಆರಾಧನ...
ಚೆಲುವಾಗಿ ಅರಳಿತು ಕು೦ಚ-ಸಿ೦ಚನ!!
- ಆರ್.ಎಸ್
ಬಿಳಿಮುಗಿಲು!!ಕೈಗೆಟುಕದ ಆಗಸದಲ್ಲಿ - ಜೀವಸಾರ ತುಂಬಿಕೊಂಡಂತೆ ಬಿಳಿಮುಗಿಲು... ಬೆಣ್ಣೆಯ ಮುದ್ದೆಗಳಂತೆ .... ಹತ್ತಿಯ ಗುಡ್ದೆಗಳಂತೆ .... ಬಾನಿಗೆ ಸಿಂಗಾರವೇ ಈ ಮೇಘಗಳು...ಇವಿಲ್ಲದೆ ಹೋದಲ್ಲಿ ಬಾನಿಗೆಲ್ಲಿ ಆಕಾರ? ಚಿತ್ರ ಬಿಡಿಸುವ ಕಲೆಗಾರರಿಗೆಲ್ಲಿ ರೂಪ? ಕವಿಗಳಿಗೆಲ್ಲಿ ಸ್ಪೂರ್ತಿ?....ಗಗನವ ವರ್ಣಿಸಿ...., ಬಣ್ಣಿಸಿ...., ಮುದ್ದಿಸಲು ಕಾರಣ - ಈ ಅಂಬರ ಚುಂಬಿತ ಬಿಳಿಮುಗಿಲು....