ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ, "ಕಂಕಣ" ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ್ರಲ್ ಮಾಲ್ ಎದುರು!
ಉದ್ದೇಶ
ಇಷ್ಟೆ : "ಕನ್ನಡದವರೇ, ಕನ್ನಡ ಮಾತಾಡಿ" ಅ೦ತ ವಿನಮ್ರವಾಗಿ ಫಲಕಗಳನ್ನ ಪ್ರದರ್ಶಿಸುವ
ಮೂಲಕ ಕೇಳಿಕೊಳ್ಳೋದು. ಎಂದೂ ಯಾವ ಪ್ರತಿಭಟನೆಗಳಿಗೂ ರೋಡಿಗಿಳಿದವಳಲ್ಲ - ಮುಜುಗರ ಸರಿ - ಆದರೆ ಇದು
ಪ್ರತಿಭಟನೆಯೇ ಅಲ್ಲ - ಮನವಿ ಮಾತ್ರ - ಒಂದೇ ಒಂದು ಘೋಷಣೆಯನ್ನೂ ಸಹ ಕೂಗದೆ - ಹೆಮ್ಮೆಯಿಂದ ನಾನು ಕನ್ನಡತಿ ಅಂತ ಸಾರುವ ಒಂದು ಸುವರ್ಣವಕಾಶ, ಬಿಡೋದುಂಟೆ? ಕನ್ನಡಿಗರನ್ನ ಎಬ್ಬಿಸಿ "ಕನ್ನಡ ಮಾತಾಡ್ರಪ್ಪ, ದೇವ್ರುಗಳ"!! ಅಂತ
ಕೇಳಿಕೊಳ್ಳುವ ಅಭಿಯಾನ.
ಈ ಅಭಿಯಾನಕ್ಕೆ ಬೇಕಿದ್ದ ಪೂರ್ವ
ತಯಾರಿ ಅಷ್ಟಿಷ್ಟಲ್ಲ. ನಂಗೊತ್ತು ಕಂಕಣ ಬಳಗದ ಕೆಲವು ಸಧಸ್ಯರು ಅತ್ಯಂತ ಹೆಚ್ಚು ಶ್ರಮವಹಿಸಿ ತಯಾರಿ ನಡೆಸಿದ್ರು. ಚಿದಾನಂದ್, ಶ್ರೀಧರ್, ಪ್ರಕಾಶ್, ಭ್ರಮೇಶ್, ರವೀಂದ್ರ ....
ಅನೇಕರು. ಕವಿರಾಜ್ ಅವರು ಸಹ ಖುದ್ದು ತಾವೇ ಪ್ರತಿಯೊಂದು ವಿಭಾಗದಲ್ಲೂ ಎಚ್ಚರ ವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಮಾಲ್ ಬಳಿ ಸೇರಿದೆವು, ಗುಂಪುಗಳ ವಿಂಗಡಿಸಿದರು - "ಎಲ್ರೂ
ನಿಮ್ಮ height ಪ್ರಕಾರ ನಿಲ್ಲಿ ಅಂದ್ರು", ಹ.ಹ.! ನನ್ನ ಸ್ಕೂಲ್ PT ಮೇಡಂ ನೆನಪಾದ್ರು! ಎತ್ತರ ಇದ್ದೀನಿ ಅಂತ ಅಲ್ಲೆಲ್ಲೋ ಹಿಂದೆ ಹೋಗಿ ನಿಂತಾಗೆಲ್ಲ, "ಹೇ ನೀನು, ಹೂಂ
ನೀನು, ಬಾ .. ಮುಂದೆ ಬಾ, ಯಾವಾಗ್ಲು ಹಿಂದೆ ಹೋಗಿ ನಿಲ್ತೀಯ" ಅಂತ ರೇಗುತಿದ್ದ ನೆನಪಾಯ್ತು.
"ಇದು
ನಮ್ಮ ಮೊದಲ ಹೆಜ್ಜೆ - ಯಾರು ನಾಚ್ಕೊಬೇಡಿ - ಹೆಮ್ಮೆಯಿಂದ ಫಲಕ ಹಿಡ್ಕೊಂಡು
ನಿಂತ್ಕೊಳ್ಳಿ - ನಡೀರಿ" ಅಂತ ಎಲ್ಲ ತಂಡಗಳಿಗೂ ಹುರಿದುಂಬಿಸಿದ್ದರು ಕವಿರಾಜ್. ಚಪ್ಪಾಳೆಗಳೊಂದಿಗೆ ಅಭಿಯಾನಕ್ಕೆ PLACARD ಹಿಡಿದು ಮುನ್ನಡೆದ ಮೊದಲ ತಂಡ
ನಮ್ಮದು/ನನ್ನದು.
* * *
ಅದೇನು ಹುಮ್ಮಸ್ಸು - ಅದೆಲ್ಲಿಯ ಸ್ಪೂರ್ತಿ! ಇಂಥ ಒಂದು ಅಭಿಯಾನಕ್ಕೆ ಸಾಮಾನ್ಯ ಜನರು ಸ್ಪಂಧಿಸಿದ್ದು ಹೀಗೆ :
- ಬೈಕಲ್ಲಿ / ಬಸ್ಸಲ್ಲಿ / ಕಾರಲ್ಲಿ ಹೋಗ್ತಿದ್ದವ್ರು ಕೈ ಬೀಸಿ ಹೋಗ್ತಿದ್ರು
- ಕೆಲವರು ಫೋಟೋ ಕ್ಲಿಕ್ಕಿಸ್ತಿದ್ದ್ರು / ವಿಡಿಯೋ ಮಾಡ್ಕೊಳ್ತಿದ್ರು
- ಒಂದು ಮುಗುಳ್ನಗೆಯೊಂದಿಗೆ THUMBS UP ಮಾಡ್ತಿದ್ರು
- ತಾವಾಗೆ ಖುದ್ದಾಗಿ ಬಂದು "ಬೇಕಿತ್ತು ರೀ ಇದು" ಅಂತ ಹೇಳ್ತಿದ್ರು
- ಬಸ್ ಡ್ರೈವರ್ಗಳು / ಕಂಡೆಕ್ಟರ್ಗಳು ಮೆಚ್ಚುಗೆ ಸೂಚಿಸುತ್ತಿದ್ರು
- ಬಸ್ ಡ್ರೈವರ್ಗಳು / ಕಂಡೆಕ್ಟರ್ಗಳು ಮೆಚ್ಚುಗೆ ಸೂಚಿಸುತ್ತಿದ್ರು
- ಇನ್ನು ಸಮಯ, ಉದಯ, ಜ್ಹೀ, ಬೀ, ಕಸ್ತೂರಿ ಸಹ ಅಲ್ಲಿದ್ರು
* * *
ಜನಸಾಮಾನ್ಯರು ಖುದ್ದಾಗಿ ನಮ್ಮ ಮಧ್ಯೆ - ನಮ್ಮ ಜೊತೆ ಬಂದು ಫಲಕ ಹಿಡಿದು ದನಿಯಾದದ್ದು ಹೀಗೆ :
ಜನಸಾಮಾನ್ಯರು ಖುದ್ದಾಗಿ ನಮ್ಮ ಮಧ್ಯೆ - ನಮ್ಮ ಜೊತೆ ಬಂದು ಫಲಕ ಹಿಡಿದು ದನಿಯಾದದ್ದು ಹೀಗೆ :
* * *
ಇವರು - ಕವಿರಾಜ್ ರ ಪತ್ನಿ ರಾಜೇಶ್ವರಿ - ಕವಿಯವರಂತೆ ಸರಳ, ಸ್ನೇಹಮಯೀ, ಆತ್ಮೀಯ ವ್ಯಕ್ತಿತ್ವ! ಖುಷಿಯಾಯ್ತು ಭೇಟಿ :) ಅವರೊಟ್ಟಿಗೆ ಮುಂದಿನ ಫೆಬ್ರವರಿಯಲ್ಲಿ ಭುವಿಗಿಳಿವ ಪುಟ್ಟ ಜೀವವೂ ಸಹ ಇತ್ತು, ವಿಶೇಷ ! ಈಗಿಂದಲೇ ಅದಕ್ಕೂ ಕಂಕಣ!
* * *
ದಿನಕರ್ ತೂಗುದೀಪ : ಇವರು ಸಹ "Guest"ಆಗಿ ಬಂದು ದನಿಗೂಡಿಸಿದ್ದು ವಿಶೇಷ
* * *
ಎಲ್ಲರು ಸೇರಿ ಈ ಫೋಟೋ ತೆಗೆಸಿಕೊಳ್ಳುವಾಗ್ಲು ಒಂದು ಜೈಕಾರ ಆಗಲಿ / ಹಿಪ್ ಹಿಪ್ ಹುರ್ರೇ ಅಂತ ಆಗಲಿ ಏನನ್ನು ಕೂಗುವಂತಿರಲಿಲ್ಲ. ಉದ್ವೇಗ / ಖುಷೀ ಹೇಗೆಲ್ಲ ನಿಯಂತ್ರಿಸಿಕೊಳ್ಳಬೇಕು ನೋಡಿ :) ....

ಕಡೆಗೆ ಬಂದ ಕಾಫಿ ಮಾತ್ರ - ಸೂಪರ್ - ಬೇಕಿತ್ತು - ಆ ಸಮಯಕ್ಕೆ ಸಿಕ್ಕ ಅಮೃತವದು :
ದಿನಕರ್ ತೂಗುದೀಪ : ಇವರು ಸಹ "Guest"ಆಗಿ ಬಂದು ದನಿಗೂಡಿಸಿದ್ದು ವಿಶೇಷ
* * *
ಎಲ್ಲರು ಸೇರಿ ಈ ಫೋಟೋ ತೆಗೆಸಿಕೊಳ್ಳುವಾಗ್ಲು ಒಂದು ಜೈಕಾರ ಆಗಲಿ / ಹಿಪ್ ಹಿಪ್ ಹುರ್ರೇ ಅಂತ ಆಗಲಿ ಏನನ್ನು ಕೂಗುವಂತಿರಲಿಲ್ಲ. ಉದ್ವೇಗ / ಖುಷೀ ಹೇಗೆಲ್ಲ ನಿಯಂತ್ರಿಸಿಕೊಳ್ಳಬೇಕು ನೋಡಿ :) ....

ಕಡೆಗೆ ಬಂದ ಕಾಫಿ ಮಾತ್ರ - ಸೂಪರ್ - ಬೇಕಿತ್ತು - ಆ ಸಮಯಕ್ಕೆ ಸಿಕ್ಕ ಅಮೃತವದು :
ಎರಡುವರೆ / ಮೂರು ಗಂಟೆಗಳ ಕಾಲ ನಿಂತೇ ಇದ್ದು ಮನೆಗೆ ಬಂದ ಮೇಲೆ
ಗೊತ್ತಾಗಿದ್ದು - ಕಾಲು ನೋವು ಅಂತ!! ಆ ನೋವಲ್ಲು ಒಂದು ಧನ್ಯತೆಯ ಭಾವ, ಅದೊಂದು Excellent Feel.
ಕವಿರಾಜ್ ರವರಿಗೆ - ಕಂಕಣಕ್ಕೆ ಒಂದು ನಮನ
ಈಗಷ್ಟೇ ಮೊದಲಾಗಿದೆ.... ಇನ್ನೂ ಬಹಳ ಬಾಕಿ ಇದೆ.
* * *
ಈಗಷ್ಟೇ ಮೊದಲಾಗಿದೆ.... ಇನ್ನೂ ಬಹಳ ಬಾಕಿ ಇದೆ.
* * *
* * *
ಚೆಂದದ ಕಂಕಣ.... ನಾವೂ ಅಲ್ಲಿರಬೇಕಿತ್ತು ಎಂದು ಎನಿಸಿತು
ReplyDeleteDhanyavaada Suguns :)
Deleteಇಂತಹ ಕನ್ನಡ ಪರ ಕೆಲಸಗಳಿಂದ ಇನ್ನು ಮುಂದಾದರೂ ಕನ್ನಡಿಗರೂ ಮತ್ತು ಇತರ ಭಾಷಿಗರೂ ಕನ್ನಡದಲ್ಲೇ ವ್ಯವಹರಿಸುವಂತಾಗಲಿ.
ReplyDeleteತಮ್ಮ ಕನ್ನಡ ಪ್ರೀತಿಗೆ ನಮ್ಮ ಒಕ್ಕೊರಲಿದೆ.
Sharanu BP avre :)
Deleteಖುಷಿಯಾಯಿತು ನಾನು ನಿಮ್ಮ ಪಕ್ಕದಲ್ಲಿ ಕೆಲಹೊತ್ತು bord ಹಿಡಿದುಕೊಂಡು ನಿಂತಿದ್ದೆ, ಎಂದು , ಕನ್ನಡದ ಕೆಲಸ ಖುಷಿ ಕೆಲಸ
ReplyDeletesathyavaada maathu nandi, kannadada kelasa hemmeya kelasa :) abhimaanada kelasa :)
Deleteರೂಪ, ಅಭಿನಂದನೆಗಳು..ನಾಚಿಕೆನೂ ಇದೆ ನಾನು ಅಲ್ಲಿರದಿದ್ದುದಕ್ಕೆ..
ReplyDeleteUmesh,
Deletepratikriyege dhanyavaadagaLu.... mundina karyakramagaLalli dayavittu baagavahisi :)
ವಾಹ್ ರೂಪ , ಸಕ್ಕತ್ತಾಗಿದೆ ನಿಮ್ಮ ಪ್ರಚಾರ..
ReplyDeleteಆದರೆ ವಿಸ್ಮಯ ನೋಡಿ ನಮ್ಮ ಊರಲ್ಲೇ ಇದ್ದುಕೊಂಡು ಕನ್ನಡ ಮಾತಾಡಿ ಅಂತ ಈ ರೀತಿ ಹೇಳ್ಬೇಕಾಲ ನಮ್ಮ ಜನಕ್ಕೆ .. ಅದೇನು ತಾತ್ಸಾರ ನೋಡಿ ಕನ್ನಡ ಮಾತೊಡೋಕೆ ..
nija kaNe angy :) ....... en karma nodu.....
Deleteಕನ್ನಡಕ್ಕಾಗಿ ಕೈ ಎತ್ತಿದ ಎಲ್ಲರಿಗೂ ಅಭಿನಂದನೆ
ReplyDeletedhanyavaadagaLu :)
Deleteಚೆಂದದ ಕಂಕಣ...ಅಭಿನಂದನೆಗಳು...
ReplyDeletedhanyavaada :) .......
Deleteನೋಡ್ತಿದ್ದರೆ ತುಂಬಾ ಖುಷಿಯಾಗುತ್ತೆ... ಜೈ!
ReplyDeleteAllvaa.... nangoo ashte :) .... Jai...
Deletenimma vishesha prayatnakkaagi
ReplyDeleteabhinandanegalu mattu dhanyavaadagalu.
dhanyavaada kalavathiavre :) ...........
Deleteಹಂಸಲೇಖ ಒಮ್ಮೆ ಹೇಳಿದ್ದರು ಕೊಳಲಿನ ಬಡತನವೇ ಅದರ ಸಿರಿವಂತಿಕೆ. ಎಷ್ಟು ನಿಜ. ನಗಾರಿ ಸದ್ದು ಮಾಡುತ್ತೆ ಆದರೆ ನಾವು ಕಿವಿ ಮುಚ್ಚಿಕೊಳ್ಳುತ್ತೇವೆ. ಕೊಳಲು ನಾದ ಹೊರಡಿಸುತ್ತೆ ಕಿವಿ ತೆರೆದುಕೊಳ್ಳುತ್ತದೆ.. ತಲೆ ಆಡಿಸುತ್ತೇವೆ. ಅದು ಅದರ ತಾಕತ್ತು. ಮಾಡಬೇಕಾದ ಕೆಲಸದಲ್ಲಿ ಸದ್ದು ಬೇಕಿಲ್ಲ.. ಆದರೆ ಶಬ್ದ ಹೊರಡಿಸಬೇಕು ಎನ್ನುವ ಈ ರೀತಿಯ ಸುಂದರ ಅಭಿಯಾನಗಳು ಹೆಮ್ಮೆ ಪಡುವಂತಹವು. ಮತ್ತು ಇಂಥಹ ಚಿಕ್ಕ ಚಿಕ್ಕ ಜಾತಗಲೇ ಮನದಲ್ಲಿ ಬೇರೂರುವುದು. ಕನ್ನಡ ಭಾಷೆಯನ್ನೂ ಉಳಿಸಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನಗರಗಳಲ್ಲಿ ಇದ್ದರೂ.. ಪ್ರೊ. ಜಿ ವೆಂಕಟಸುಬ್ಬಯ್ಯ ಅವರು ಹೇಳಿದಂತೆ ಕನ್ನಡ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತೆ ಅದಕ್ಕೆ ಸಹೃದಯರ ಸಂಗಾತಿ ಬೇಕು ಅಂತ.
ReplyDeleteಸುಂದರ ಹೆಜ್ಜೆ.. ಸುಂದರ ಮನಗಳ ಹೆಜ್ಜೆ ಮೂಡುತ್ತಿದೆ ಕನ್ನಡಾಂಬೆಯ ಹೃದಯದಲ್ಲಿ. ಸೂಪರ್ DFR ಇಷ್ಟವಾಯಿತು. ಶ್ರಮ ಪರಿಶ್ರಮ ಮತ್ತು ಅವಿರತವಾಗಿ ನೀವು ಸಮಾಜ ಮುಖಿಯಾಗಿ ತೊಡಗಿಕೊಳ್ಳುವ ಪರಿ.
Sri,
DeleteNimma pratikriye endinanthe vishesha, preranathmaka....
Nudi NamangaLu :)
ಸಖತ್ ಕಾರ್ಯಕ್ರಮ. ಲಾಲ್ಬಾಗಿನಲ್ಲಿ ಕಂಕಣ ಅವ್ರು ಕನ್ನಡ ಮಾತಾಡೋ ಬಗೆಗಿನ ಫಲಕ ಹಿಡಿದಿದ್ರ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ. ಈ ತೆರನಾದ ಮತ್ತೊಂದು ಕಾರ್ಯಕ್ರಮದ ಬಗ್ಗೆ ಸಚಿತ್ರ ವಿವರಣೆಯನ್ನು ಓದಿ ಖುಷಿಯಾಯ್ತು. ಶುಭವಾಗ್ಲಿ ಕಂಕಣಕ್ಕೆ :-)
ReplyDeleteDhanyavaada Prashasthi :)
ReplyDeleteಓದುತ್ತಾ ಓದುತ್ತಾ ಲೀನವಾದ ಭಾವ :)
ReplyDeleteಛೇ..! ನಾನು ಅಲ್ಲಿರಬೇಕಿತ್ತು ಅನಿಸುವಂತೆ ಮಾಡಿತು... ಸೂಪರ್ :)