ಚಿತ್ರ ಬಿಡಿಸಲು ಕುಳಿತಾಗ, ಬಗೆಬಗೆಯ ಊಹೆಗಳಿತ್ತು,
ಕುಂಚ ಲೋಕಕ್ಕೆ ಲಗ್ಗೆ ಇಟ್ಟು, ಸ್ವರ್ಣಚಿತ್ತಾರವ ಮನದಲಿ ನೆನೆದು!
ಪ್ರೇಮ ಪರವಷಳಾಗಿ ಬಿಡಿಸಿದ ಚಿತ್ರ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?
ಮೆಲುಕಿ ಹಾಕಿ, ಎಳೆ ಎಳೆಯಾಗಿ ಸುರಿದ ಬಣ್ಣಗಳ ರಾಶಿ,
ಹಾ! ಹಸಿರು, ಬಿಳಿ, ನೀಲಿ.... ಇದೊಂದು ಸುಪ್ತವರ್ಣಗಳ ಕಾಶಿ!
ನೋಡುಗರು ನಿಬ್ಬೆರಗಾದರೂ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?
ಚಿತ್ರ ರಸಿಕರ ಕಣ್ಸೆಳೆದು, ಕಲೆ-ಆರಾಧಕರ ಮನಗೆದ್ದು,
ವಿಮರ್ಶಕರ ಕಿಚ್ಚಿಗೆ ತುತ್ತಾಗಿ..,
ಮೋಹಕವಾಗಿ ಬೆಳೆದಿದ್ದು!ವರ್ಣರoಜಿತ - ಸ್ವರ್ಣಸಂಚಿತವಾದರೂ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?
ಹಸಿರು ಒಣಗಿದ ಹುಲ್ಲಿನಂತೆ, ಬಿಳಿ ಬಿಳಿಚಿದ ಸುಣ್ಣದಂತೆ,
ನೀಲಿ ನರಳಿ ನುಸುಳಿದಂತೆ!! ಮಾಸಿದಂತಿದೆ ಮನಸಿನ ಬಣ್ಣಗಳು?
ಪ್ರೀತಿಸಿ, ಪೋಷಿಸಿ, ಮುದ್ದಿಸಿ ಬರೆದದ್ದು,
ಕೊನೆಗೂ ಖಾಲಿ ಖಾಲಿ ಎಂದೇಕೆ ಅನಿಸಿದ್ದು?
Friday, July 30, 2010
Subscribe to:
Posts (Atom)
ಪ್ರತಿ ಬೆಳಗೂ ಹೊಸತನ....
ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...
-
"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾ...
-
ಕಳೆದ ವರ್ಷ “ನನ್ನ ಸ್ನೇಹಿತ ಗೋಪಿಯ ಮದುವೆ, ನಿಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ…. ಬರ್ತೀರಿತಾನೆ?.”, ಅ೦ತ ಕೇಳಿ, ಮಕ್ಕಳ ಪ್ರತಿಕ್ರಿಯೆಗೆ ಕಾಯ್ತಿದ್ದೆ...
-
ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. "ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"......