ವರ್ಣರoಜಿತ ಖಾಲಿ ಚಿತ್ರ

ಚಿತ್ರ ಬಿಡಿಸಲು ಕುಳಿತಾಗ, ಬಗೆಬಗೆಯ ಊಹೆಗಳಿತ್ತು,
ಕುಂಚ ಲೋಕಕ್ಕೆ ಲಗ್ಗೆ ಇಟ್ಟು, ಸ್ವರ್ಣಚಿತ್ತಾರವ ಮನದಲಿ ನೆನೆದು!
ಪ್ರೇಮ ಪರವಷಳಾಗಿ ಬಿಡಿಸಿದ ಚಿತ್ರ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?

ಮೆಲುಕಿ ಹಾಕಿ, ಎಳೆ ಎಳೆಯಾಗಿ ಸುರಿದ ಬಣ್ಣಗಳ ರಾಶಿ,
ಹಾ! ಹಸಿರು, ಬಿಳಿ, ನೀಲಿ.... ಇದೊಂದು ಸುಪ್ತವರ್ಣಗಳ ಕಾಶಿ!
ನೋಡುಗರು ನಿಬ್ಬೆರಗಾದರೂ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?

ಚಿತ್ರ ರಸಿಕರ ಕಣ್ಸೆಳೆದು, ಕಲೆ-ಆರಾಧಕರ ಮನಗೆದ್ದು,
ವಿಮರ್ಶಕರ ಕಿಚ್ಚಿಗೆ ತುತ್ತಾಗಿ..,
ಮೋಹಕವಾಗಿ ಬೆಳೆದಿದ್ದು!ವರ್ಣರoಜಿತ - ಸ್ವರ್ಣಸಂಚಿತವಾದರೂ,
ಖಾಲಿ ಖಾಲಿ ಎಂದೇಕೆ ಅನಿಸಿದ್ದು?

ಹಸಿರು ಒಣಗಿದ ಹುಲ್ಲಿನಂತೆ, ಬಿಳಿ ಬಿಳಿಚಿದ ಸುಣ್ಣದಂತೆ,
ನೀಲಿ ನರಳಿ ನುಸುಳಿದಂತೆ!! ಮಾಸಿದಂತಿದೆ ಮನಸಿನ ಬಣ್ಣಗಳು?
ಪ್ರೀತಿಸಿ, ಪೋಷಿಸಿ, ಮುದ್ದಿಸಿ ಬರೆದದ್ದು,
ಕೊನೆಗೂ ಖಾಲಿ ಖಾಲಿ ಎಂದೇಕೆ ಅನಿಸಿದ್ದು?

Comments

 1. `ಕೊನೆಗೂ ಖಾಲಿ ಖಾಲಿ ಎಂದೇಕೆ ಅನಿಸಿದ್ದು?' ಬಹಳ ಗ೦ಭೀರವಾದ ಪ್ರಶ್ನೆ. ಕೆಲವೊಮ್ಮೆ ಹೀಗನಿಸುವುದು೦ಟು. ನಮ್ಮಲ್ಲಿ ಅಡಗಿರುವ ಅಪಾರ ಸಾಮರ್ಥ್ಯದ ಸೂಚಕವಿದಿರಬಹುದೇ? ಕವನ ಚೆನ್ನಾಗಿದೆ. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

  ReplyDelete
 2. dhanyavaada prabhamaniyavarige. eegalu khaali khaali ende anisuthiruvudu viparyaasa. nimma commentsge dhanyavaadagaLu. Will surely visit your blog.

  ReplyDelete
 3. ಕೆಲವು ಉತ್ಪನ್ನಗಳೇ ಹಾಗೆ, ಅವು ನಮ್ಮ ಸಂಪೂರ್ಣ ಬೆವರು, ಶ್ರಮ, ಹೊತ್ತು ಮತ್ತು ಬುದ್ದಿಮತ್ತೆ ಬಸಿದುಕೊಂಡು ಹೊರಬಂದರು, ಅವು ಖಾಲಿ ಖಾಲಿ ಎನಿಸಿಬಿಡುತ್ತವೆ. ಜಗವೇ ಅವುಗಳನ್ನು ಹೊಗಳುತ್ತಿದ್ದರೂ.
  ಬಹುಶಃ ಕವಿ - ಕಲಾವಿದ - ತಾಯಿಯ ಮನಸೇ ಅದು ಅನಿಸುತ್ತದೆ, ಸಕಲವೂ ಕೊಟ್ಟ ಮೇಲೆ ತಾನು ಖಾಲಿತನ ಅನುಭವಿಸಿದರೂ ಮತ್ತಷ್ಟು ಕೊಡುವ ಹುಮ್ಮಸ್ಸು ಮನೆಮಾಡಿಕೊಳ್ಳುವುದು!

  ReplyDelete
  Replies
  1. Thank you for the read BP avre....
   tumbaa haLeya kavanavidu, eLesu ansutte eega odOke....
   nimma pratikriyege dhanyavaada...

   Delete
 4. ಸುಪ್ತ ಮನಸ್ಸಿನ ಕನಸುಗಳು ಎಂದೂ ಮುಗಿಯುವುದೇ ಇಲ್ಲ, ಹಾಗೆಯೇ ಆಸೆಗಳು ಕೂಡ. ವರ್ಣರಂಜಿತ ಖಾಲಿ ಖಾಲಿ ಎಂದೇಳಿ ಮನದ ಭಾವನೆಗಳ ಪರಿಯ ಚಿತ್ರಿಸಿದ್ದು ನಿಜಕ್ಕೂ ವೈವಿದ್ಯಮಯ ಬರಹ.

  ReplyDelete
 5. ಸುಪ್ತ ಮನಸ್ಸಿನ ಕನಸುಗಳು ಎಂದೂ ಮುಗಿಯುವುದೇ ಇಲ್ಲ, ಹಾಗೆಯೇ ಆಸೆಗಳು ಕೂಡ. ವರ್ಣರಂಜಿತ ಖಾಲಿ ಖಾಲಿ ಎಂದೇಳಿ ಮನದ ಭಾವನೆಗಳ ಪರಿಯ ಚಿತ್ರಿಸಿದ್ದು ನಿಜಕ್ಕೂ ವೈವಿದ್ಯಮಯ ಬರಹ.

  ReplyDelete
  Replies
  1. Namasthe Basavaraj,
   Odi pratikriye neeDidakke preetiya dhanyavaada.
   tumbaa haLeya kavanavide, sankOchavanthoo houdu heegella baredaddu naanenaa antha!!!

   Delete

Post a Comment

Popular posts from this blog

ಹೀಗೊಂದು ಮಹಿಳಾ ದಿನಾಚರಣೆ!!

ನಸುಕಿನ ಕನವರಿಕೆಗಳು

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ