Wednesday, June 27, 2012

ಪುಸ್ತಕದ ಮಹಲು

ಈ ದಿನ ಹೊಸದೊಂದು ಅನುಭವದೆಡೆಗೆ ಹೆಜ್ಜೆ.  ಹೊಸದೊಂದು ಗುಂಪು, ಹೊಸ ಪರಿಚಯ, ನಾನಿಲ್ಲಿ ಹೊಸಬಳು - ಒಂದು ರೀತಿಯ ಕುತೂಹಲ ಈ ದಿನ ಹೇಗಿರಬಹುದೆಂಬ ಯೋಚನೆ ಹೊಸ ಹುರುಪಿನಲ್ಲಿ ಮಗಳ ಜೊತೆ, ಜ್ಯೋತಿ ಬಸು ಹಾಗು ಅವರ ಮಕ್ಕಳ ಜೊತೆ ನಾಯ೦ಡಳ್ಳಿ  ಸರ್ಕಲ್ನಲ್ಲಿ ಬಸ್ಸಿಗಾಗಿ ಕಾದು ನಿಂತ ಕೆಲವೇ ನಿಮಿಷಗಳಲ್ಲಿ ಬಸ್ಸು ಹಾಜರಿ.

ಹತ್ತಿದೊಡನೆ ಎಲ್ಲರನ್ನು ಒಮ್ಮೆ ಕಣ್ಣಾಯಿಸಿ ಕೈ ಬೀಸಿ ಸೀಟಿನಲ್ಲಿ ಕುಳಿತೆ. ಸ್ವಲ್ಪ ಹೊತ್ತಿನಲ್ಲೇ ಎಲ್ಲರ ಪರಿಚಯಗಳು ಶುರುವಾದವು. ಮಹೇಶ್, ಜ್ಯೋತಿ ಬಸು, ಶ್ರೀಕಾಂತ್, ಶಿವೂ, ಓಂ ಶಿವಪ್ರಕಾಶ್, ಪವಿತ್ರ, ಪ್ರಕಾಶ್ ಹೆಗ್ಡೆ, ಆಜಾದ್ ಸರ್, ಉಮೇಶ್, ಸುದೇಶ್, ಸುಲತ, ಸಂಧ್ಯಾ, ಗಿರೀಶ್, ನವೀನ, ನಂದಿನಿ, ಗುರು ಹೀಗೆ ಎಲ್ಲರ ಪರಿಚಯಗಳು ಮುಗಿದವು. ಇವರ ಮಧ್ಯೆ ನನ್ನ ನೆಚ್ಚಿನ ಆಶಾ ಪ್ರಕಾಶ್ ಹೆಗ್ಡೆ ಕೂಡ. ನೋಡಿದಾಗ, "ಅರೆ, ಇವರ!! ಇವರ ಬಗ್ಗೆ ನನಗೆ ಈಗಾಗಲೇ ತಿಳಿದಿದೆ,  ಪರಿಚಯವಿದೆ - ಇವರನ್ನ ಪ್ರಕಾಶ್ ರವರ ಪುಸ್ತಕಗಳಲ್ಲಿ, ಛಾಯಾಚಿತ್ರಗಳಲ್ಲಿ, ಅವರ ಕವನಗಳಲ್ಲಿ ಬೇಟಿ ಆಗಿರುವೆ" ಎಂದೆನಿಸಿದ್ದು ನಿಜ. ನಾನಿವರ A/c ಅಂದರೆ ತಪ್ಪಾಗಲಾರದು, ಕಾರಣ!..... ಯಾರೊಬ್ಬರ ಅಭಿಮಾನಿಯಾಗಲು ಕಾರಣಗಳಿರಲೇಬೇಕೆ? ಅವರನ್ನು ನೋಡಿದ್ದೇ ಒಂದು ಸಂತಸ.

ಅಲ್ಲಿಂದ ಶುರುವಾದ ಪಯಣ :

ಪ ಪ ಪ ಪರಿಚಯಗಳು - ಬಿಡದಿ ಖ್ಯಾತಿಯ ಇಡ್ಲಿಗಳು - ಅಂತ್ಯಾಕ್ಷರಿ ಹಾ ಹಾ ಹಾ ಹಾಡುಗಳ - ನಡುವೆ ಕೀ ಕೀ ಕೀ ಕೀಟಲೆಗಳು - ಆಡು ಆಡುತ್ತಲೇ ತಲುಪಿದ್ದು ಹಾಯಾಗಿ ಮಲಗಿರುವ ಶ್ರೀ ರಂಗನ ಪಟ್ಟಣಕ್ಕೆ. ಈ ಪುಟ್ಟ ನಗರದಲ್ಲಿ ಅಡಗಿರುವ ಇತಿಹಾಸಗಳೆಷ್ಟೋ - ಇದರ ನಡುವೆ ನಮ್ಮ ಮನೆಯ ಕುಲದೇವತೆ ನಿಮಿಷಾಂಬ ದೇವಿಯು ನದಿಯ ದಂಡೆಯಲ್ಲಿ ಹಸನ್ಮುಖಿಯಾಗಿ ವಾಸಿಸುತ್ತಿದಾಳೆ. ಇನ್ನು ನಮಗಂತಲೇ ಕಾದಿದ್ದ ಬಾಲು ಸರ್ ಬೇಟಿ. ಅವರ ಮುಗ್ಧ ನಗೆ ಹಾಗು ಮನ ಮುದ ನೀಡುವ ಪ್ರಾಮಾಣಿಕ ಮಾತುಗಳು. ಮಾತನಾಡುತ್ತಲೇ ತಲುಪಿದ್ದು ಒಂದು ಭವ್ಯ ಲೋಕಕ್ಕೆ, ಮೂಕ ವಿಸ್ಮಿತವಾಗಿಸುವ ಒಂದು ಪುಸ್ತಕದ ಮಹಲಿಗೆ. ಪಾಂಡವಪುರಕ್ಕೆ.
ಪಾಂಡವಪುರ ಹಾಗು ಅಂಕೆಗೌಡರು

"ಪಾಂಡವಪುರದ ಪುಸ್ತಕ ಮಹಲು" ಈ ಮಹಲಿನೊಳಗೆ ಕಾಲಿಡುತ್ತಿದ್ದಂತೆ ಎಲ್ಲಿ ನೋಡಿದರಲ್ಲಿ ಶಾರದಾಂಬೆಯ ಒಲವು - ಸರಸ್ವತಿಯದ್ದೆ ಗೆಲುವು. ಈ ಮಹಲನ್ನು ಹುಟ್ಟುಹಾಕಿದವರು ಅಂಕೆಗೌಡರು. ಅತಿ ಸರಳ ವ್ಯಕ್ತಿತ್ವ. ಅವರ ಮಹಲಿನಲ್ಲಿ ಪುಸ್ತಕಗಳದ್ದೆ ಕಾರುಬಾರು. ಎಲ್ಲೆಲ್ಲೂ ರಾಶಿ ರಾಶಿ ಪುಸ್ತಕಗಳು, ಕಾಲಿಟ್ಟೆಡೆ ಪುಸ್ತಕಗಳು, ಕಣ್ಣು ಹಾಯಿಸಿದಲ್ಲೆಲ್ಲ ಪುಸ್ತಕಗಳು!


ಈ ಸಂಗ್ರಹ ನೆನ್ನೆ ಮೊನ್ನೆಯದಲ್ಲ - ಅಂಕೆಗೌಡರ ಜೀವಮಾನದ ಸಂಗ್ರಹ! ಆರುನೂರು ವರ್ಷಗಳ ಹಿಂದಿನ ಪುಸ್ತಕಗಳಿಂದ ಹಿಡಿದು ಇತ್ತೀಚಿನ ವರೆಗೂ ಎಲ್ಲವೂ ಲಭ್ಯ!! ಒಂದು ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳಿರಬಹುದು. ಅವರು ವೃತ್ತಿಯಲ್ಲಿ ಗಳಿಸಿದ ಪ್ರತಿಯೊಂದು ರೂಪಾಯಿ ಈ ಪುಸ್ತಕಗಳ ಖರೀದಿಗೆ ಬಳಸಿದ್ದಾರೆ. ತಮ್ಮಲ್ಲಿರುವ ಆಸ್ತಿಗಳನೆಲ್ಲ ಮಾರಿ ಪುಸ್ತಕ ಸಂಗ್ರಹಕ್ಕೆ ಉಪಯೋಗಿಸಿದ್ದಾರೆ. ಸುತ್ತ ಮುತ್ತಲಿನ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇವರ ಪುಸ್ತಕ ನಿಧಿ ಉಪಯುಕ್ತವಾಗುತ್ತಿದೆ. ಇವರ ಈ ನಿಲುವಿಗೆ ಇವರ ಪತ್ನಿಯ ಸಹಕಾರವೂ ಮೆಚ್ಚುವಂತದ್ದೆ.ಇವರ ಬಗ್ಗೆ ಬಾಲುರವರ ಬ್ಲಾಗಿನಲ್ಲಿ ಓದಿದ್ದೆ [http://nimmolagobba.blogspot.in/2010/08/blog-post_16.html]. ಕಣ್ಣಾರೆ ನೋಡಿದಮೇಲಂತೂ ನನ್ನ ಪ್ರತಿಯೊಬ್ಬ ಸ್ನೇಹಿತರಿಗೂ, ಪುಸ್ತಕ ಪ್ರೇಮಿಗಳಿಗೂ ಇಲ್ಲೊಮ್ಮೆ ಬೇಟಿಯಾಗುವಂತೆ ಹೇಳಲೇಬೇಕಿದೆ.


ಇವರ ಪುಸ್ತಕ ಬಂಡಾರ ಸಾರ್ವಜನಿಕರಿಗೆ ಅರ್ಪಿಸಿ ಗ್ರಂಥಾಲಯವಾಗಿಸಿದ್ದಾರೆ. ಹಾಗು ಹೀಗೂ ನಾವೆಲ್ಲರೂ ಸ್ವಾರ್ಥ ಲೋಕದಲ್ಲಿ ತೇಲುವ ನಾವಿಕರೆ ಹೌದು, ನಮ್ಮೆಲ್ಲರ ನಡುವೆ ವಿಭಿನ್ನವಾಗಿ ಸಮಾಜ ಸೇವೆ ಮಾಡುತಿರುವ ಅಂಕೆಗೌಡರಿಗೆ ನನ್ನ ಹೃದಯಪೂರ್ವಕ ನಮನ. ಇವರ ನಿಸ್ವಾರ್ಥ ಬದುಕು ಜ್ಞಾನದ ದೀವಿಗೆಯನ್ನು ಪ್ರಜ್ವಲಿಸಿ ಬೆಳಗಿಸಿದೆ! ಈ ಪುಸ್ತಕ ಪ್ರೇಮಿಗೆ - ಜ್ಞಾನ ದೇಗುಲವನ್ನು ನಿರ್ಮಿಸಿದ ಮಹಾನುಭಾವನಿಗೆ ಅನಂತಾನಂತ ವಂದನೆಗಳು.

ಎಲ್ಲರು ಮೂಕರಾಗಿ ಯಾವ ಪುಸ್ತಕವನ್ನು ನೋಡುವುದು - ಬಿಡುವುದೆಂದು ಗೊಂದಲದಲ್ಲಿರುವಾಗಲೇ ಅಂಕೆಗೌಡರನ್ನು ಪರಿಚಯಿಸಿ ಸನ್ಮಾನ ಮಾಡಿದರು ಬಾಲು ಸರ್, ಅಜಾದ್ ಸರ್ ಹಾಗು ಪ್ರಕಾಶ್ರವರು. ಈ ಸನ್ಮಾನ ಇವರ ಸಾಧನೆಗೆ ಸಲ್ಲಿಸಿದ ಗೌರವ.


ಅವರನ್ನು ಬೇಟಿ ಮಾಡಿದಾಗ ನಮ್ಮಲ್ಲಿರುವ ಒಂದೊಂದು ಪುಸ್ತಕವನ್ನು ಅಂಕೆಗೌಡರಿಗೆ ನೀಡೋಣವೆಂದು ಪ್ರಕಾಶ್ರವರು ಸೂಚಿಸಿದ್ದರು. ಅಂತೆಯೇ ನಮ್ಮೆಲ್ಲರ ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡೆವು. "ಭಾವಸಿಂಚನ" ವನ್ನು ಅಂಕೆಗೌಡರ ಕಯ್ಯಲ್ಲಿ ನೋಡಿದಾಗ ಹೆಮ್ಮೆ ಅನಿಸಿದ್ದು ನಿಜ.


"ಭಾವಸಿಂಚನ" 3K ಸಧಸ್ಯರುಗಳ ಚೊಚ್ಚಲ ಕವನ ಸಂಕಲನ - ಇಂಥದೊಂದು ಐತಿಹಾಸಿಕ ತಾಣವಾಗಲಿರುವ ಗ್ರಂಥಾಲಯದಲ್ಲಿ "ಭಾವಸಿಂಚನ" - ಈಗಲೂ ನೆನೆಸಿಕೊಂಡರೆ ಒಂದು ರೀತಿಯ ರೋಮಾಂಚನ. ಈ ಖುಷಿಯನ್ನು ನನ್ನ 3K ಕುಟುಂಬಕ್ಕೆ ಹಂಚಲೆಬೇಕಿದೆ. ಈ ತಾಣಕ್ಕೆ ಬೇಟಿಯಾದವರು ಮೂಕವಿಸ್ಮಿತರಾಗುವುದಂತು ಹೇಳನಿಶ್ಚಯ!  ಅಲ್ಲಿಂದ ಹೊರಡುವ ಮಾತಿರಲಿ ಎದ್ದೇಳುವ ಮನಸು ಯಾರಿಗೂ ಇರಲಿಲ್ಲ!


ಕರಿಘಟ್ಟ [ಬೆಟ್ಟ]

ಇಲ್ಲಿಂದ ಹೊರಟದ್ದು ಹತ್ತಿರದಲ್ಲೇ ಇದ್ದ ಕರಿಘಟ್ಟಕ್ಕೆ... ವೆಂಕಟರಮಣ ಸ್ವಾಮಿಯ ದೇಗುಲಕ್ಕೆ. ನಮಗೆಂದೇ ಕಾದಿದ್ದ ಸ್ವಾಮಿಯ ಕೊನೆಯ ದರುಶನ ಮುಗಿಸಿ - ಭರ್ಜರಿ ಊಟಕ್ಕೆ ಲಗ್ಗೆ! ಮೂರು ಬಾರಿ ಪುಳಿಯೋಗರೆ ತಿನ್ನುವಷ್ಟು ರುಚಿಯಾದ ಅಡುಗೆ...ನಂತರ ಬೆಟ್ಟದ ಮೇಲಿದ್ದ ಒಂದು ಪುಟ್ಟ ಓಪನ್ ಏರ್ ಥಿಯೇಟರ್.... ಗುರು ಹಾಗು ಶಿವೂರವರ ನೇತ್ರತ್ವದಲ್ಲಿ ಆಟ - ಒಡನಾಟ. ಆದರಲ್ಲಿ ನಾವು ಬೇಟಿಯಾದ ಚೆ೦ಡಾನಂದ ಸ್ವಾಮೀಜಿಗಳು, ಅವರ ವೇಷ ಭೂಷಣ ಹಾಗು ಭಕ್ತರಿಗೆ ನೀಡಿದ ಸಲಹೆಗಳು, ಅಳು ಬರುವಷ್ಟು ನಕ್ಕ ಕ್ಷಣಗಳು ಅವಿಸ್ಮರಣೀಯ!
ಸಂಜೆಯಷ್ಟರಲ್ಲಿ - ಈ ದಿಗ್ಗಜರುಗಳೇ ತುಂಬಿದ ಬ್ಲಾಗಿಗರ ಸಮೂಹದಲ್ಲಿ ನಾನಿನ್ನು ಹೊಸಬಳು ಎನ್ನುವ ಮಾತು ಹೇಳುವಂತಿರಲಿಲ್ಲ. ಇದೊಂದು ಸುಂದರ ಪ್ರವಾಸ, ಮರೆಯಲಾಗದ ಸ್ನೇಹಕೂಟ .... ಸಜ್ಜನರ ಸಹವಾಸದೋಳ್ ಹೆಜ್ಜೇನ ಸವಿದೆ.... ಮನೆಗೆ ಬಂದಾದರೂ ಇಲ್ಲಿಯವರೆಗೂ ಅಲ್ಲಿನ ನೆನಪುಗಳು ಕಾಡುತಿವೆ.

ಮತ್ತೆ, ಒಬ್ಬೊಬ್ಬರ ಕಯ್ಯಲ್ಲೂ ನೋಡಿದ ಕ್ಯಾಮೆರಾಗಳು ನನ್ನನ್ನು ಹಣುಕಿಸಿದ್ದುಂಟು, ಗಾಬರಿಗೊಳಿಸಿದ್ದುಂಟು! ಹೊಸ ಕ್ಯಾಮೆರ ಕೊಡಿಸದೇ ಹೋದರೆ ಅಡುಗೆ ಮಾಡಲಾರೆ ಎಂದು ಪಟ್ಟು ಹಿಡಿದರೆ ಕ್ಯಾಮೆರ ಮನೆಗೆ ಬಂದರೂ ಬಂದೀತು:-)

ಸಂತಸವೆಂದರೆ ಮತ್ತೊಮ್ಮೆ ಪಾಂಡವಪುರಕ್ಕೆ ನನ್ನ ಬೇಟಿ ಆಗುವ ಎಲ್ಲ ಸಂಭವಗಳು ಇವೆ. ಬೇಗ ತಿಳಿಸುತ್ತೇನೆ. ಇಂತದೊಂದು ಪ್ರವಾಸಕ್ಕೆ ನನ್ನನ್ನು ಆಮಂತ್ರಿಸಿದ ಪ್ರಕಾಶ್ರವರಿಗೆ ಹೃದಯಪೂರ್ವಕ ಧನ್ಯವಾದಗಳು.

 * * * *

 
ತಮ್ಮ ಫೋಟೋಗಳನ್ನು ನನಗೆ ನೀಡಿದ ಜ್ಯೋತಿ ಬಸು ಹಾಗು (ಅಲ್ಲಿಲ್ಲಿ ನಾನೇ ಕದ್ದು ತಂದ) ಫೋಟೋಗಳ ಮಾಲೀಕರಿಗೆ ಪ್ರೀತಿಯ ಧನ್ಯವಾದಗಳು.

PS : ಅಂಕೆಗೌಡರಿಗೆ ತಮ್ಮ ಪುಸ್ತಕಗಳನ್ನು ಕಳಿಸಲು ಇಚ್ಚಿಸುವವರು, ಸಹಾಯ ಹಸ್ತ ನೀಡಲಿಚ್ಚಿಸುವವರು, ಬೇಟಿ ಆಗ ಬಯಸುವವರು - ಈ ವಿಳಾಸವನ್ನು ಬರೆದುಕೊಳ್ಳಿ :
ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ]
ಹರಳ ಹಳ್ಳಿ
ಪಾಂಡವಪುರ ತಾಲೂಕ್
ಮಂಡ್ಯ ಜಿಲ್ಲೆ.571434
ಮೊಬೈಲ್ ನಂಬರ್ ;9242844934 ,9242844206

17 comments:

 1. ಕಳೆದ ವಾರದ ಪ್ರವಾಸದ ಸುಂದರ ಚಿತ್ರಣ ನೀಡಿದ್ದೀರಿ ,ಲೇಖನದಲ್ಲಿ ನಿಮ್ಮ ಅನುಭವದ ಮಾತುಗಳು ಭಾವ ಪೂರ್ತಿತವಾಗಿ ಹೊಮ್ಮಿವೆ.ಹೌದು ಈ ಪುಸ್ತಕ ಕಾಶಿಗೆ ಪ್ರತಿಯೊಬ್ಬರೂ ಭೇಟಿ ನೀಡಬೇಕು.ಉತ್ತಮ ಲೇಖನ ಧನ್ಯವಾದಗಳು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 2. ಕಾಕನ ಕೋಟೆಯಲ್ಲಿ ಒಂದು ಹಾಡಿದೆ..
  "ಕರಿಹೈದನೆಂಬೋನು ಮಾದೇಶ್ವರ...
  ಮಾದೇಶ್ವರನಿಗೆ ಶರಣು ಮಾದೇಶ್ವರ."

  ಇಲ್ಲಿ ಆ ಸಾಲುಗಳು...
  "ಶ್ರೀ ಅಂಕೆ ಗೌಡರು ಒಬ್ಬ ಪುಸ್ತಕೇಶ್ವರ
  ಪುಸ್ತಕೇಶ್ವರರಿಗೆ ಶರಣು ಪುಸ್ತಕೇಶ್ವರ!!!

  ಸುಂದರ ನಿರೂಪಣೆ ನಿಮ್ಮದು...
  ಜಗದಗಲದ ಭಾವಸಾಗರದಲ್ಲಿ
  ಅಲೆಗಳ ಮೇಲೆ ಹಾಯಿದೋಣಿಯಲ್ಲಿ
  ತೇಲಿ ಹೋದ ಹಾಗೆ ಸಂಭ್ರಮ...!!!!

  ReplyDelete
 3. ಈ ಕಾಲದಲ್ಲಿ ಸೈಟು ಪ್ರೇಮಿಗಳನ್ನು ನೋಡಿದ್ದೇವೆ. ಅಂಕೇಗೌಡರ ಪುಸ್ತಕ ಪ್ರೇಮ ನಮಗೆಲ್ಲ ಮಾದರಿಯಾಗಲಿ.

  ಸಚಿತ್ರ - ಸವಿವರ ಲೇಖನ ಮಾಹಿತಿ ಅಮೋಘವಾಗಿದೆ. ಪ್ರಕಾಶಣ್ಣನ ಗೆಟಪ್ಪೂ ನ ಭೂತೋ ನ ಭವಿಷ್ಯತಿ!!!

  ನಿಮ್ಮ ಶೈಲಿ ಸರಳ ಮತ್ತು ಓದಿಸಿಕೊಳ್ಳುವ ಕಲೆ ಹೊಂದಿದೆ.

  ReplyDelete
 4. ನಿಜಕ್ಕೂ ಚೆನ್ನಾಗಿದೆ..ನಿಮ್ಮ ಲೇಖನ ಮತ್ತೆಮೆಲುಕುಹಾಕುವಂತಿತ್ತು..
  ಬಿಡುವಾದಾಗ ನನ್ನ ಬ್ಲಾಗಿಗೂ ಹಣಿಕಿ ಹಾಕ್ರಿ

  ReplyDelete
 5. ಇಂತಹ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನಮ್ಮ ನಿಲುಕಿಗೇ ಸಿಗುವುದಿಲ್ಲ.ಇಂತಹ ಪುಸ್ತಕ ರಾಶಿ,ಅದರ ಹಿಂದಿರುವ ಅವರ ಮತ್ತು ಅವರ ಮನೆಯವರ ಪರಿಶ್ರಮ,ಸಾಧನೆ,ಇವೆಲ್ಲವೂ ನಮ್ಮನ್ನು ಮೂಕ ವಿಸ್ಮಿತರಾಗಿಸುತ್ತದೆ.ನಮ್ಮ ಕರ್ನಾಟಕಕದಲ್ಲೇ ಇರುವ ಅದ್ಭುತಗಳಲ್ಲಿ ಅಂಕೇ ಗೌಡರೂ ಒಬ್ಬರು.ಅವರ ಪುಸ್ತಕ ಪ್ರೇಮ ಅಪರೂಪದ್ದು!೨೦೧೦ರಲ್ಲಿ ಬಾಲಣ್ಣನವರು ನಮ್ಮನ್ನು ಅಲ್ಲಿಗೆ ಕಳಿಸಿದಾಗ ದಂಗಾಗಿ ಹೋದೆ.ಅಂಕೆ ಗೌಡರು 'ಇದು ಯಾವುದೋ ಜನ್ಮದಲ್ಲಿ ಸರಸ್ವತಿ ನನಗೆ ನೀಡಿದ ಶಾಪ ಸರ್'ಎಂದಾಗ ನನ್ನ ಕಣ್ಣುಗಳು ತೇವವಾಗಿದ್ದವೂ.ಅವರು ಸಣ್ಣವರಿದ್ದಾಗ ಎರವಲು ಪಡೆದಿದ್ದ ಪುಸ್ತಕವೊಂದನ್ನು ಹಿಂದಿರುಗಿಸಲು ಸ್ವಲ್ಪ ತಡವಾದಾಗ ಹಿರಿಯರೊಬ್ಬರು 'ಪುಸ್ತಕವನ್ನು ಸರಿಯಾಗಿ ಹಿಂದಕ್ಕೆ ಕೊಡೋಕೆ ಆಗದಿದ್ದರೆ ಪುಸ್ತಕ ಯಾಕೆ ತೆಗೆದುಕೊಂಡುಹೋಗುತ್ತೀರಿ'ಎಂದಿದ್ದರಂತೆ.
  ಆ ಮಾತುಗಳು ಅವರನ್ನು ಪುಸ್ತಕ ಸಂಗ್ರಹಿಸಲು ಪ್ರೇರೇಪಿಸಿತಂತೆ!
  ಪ್ರತಿಯೊಬ್ಬರೂ ಜೀವನದಲ್ಲಿ ನೋಡಲೇ ಬೇಕಾದ ಸ್ಥಳ 'ಪುಸ್ತಕದ ಮನೆ'.ಇಂತಹ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯನ್ನು ಸರ್ಕಾರ ಗೌರವಿಸಿ ಸೂಕ್ತ ಆರ್ಥಿಕ ಸಹಾಯ ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ.ಆದಷ್ಟು ಬೇಗೆ ಅದು ಕಾರ್ಯ ರೂಪಕ್ಕೆ ಬರಲಿ.ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ.ಧನ್ಯವಾದಗಳು.

  ReplyDelete
 6. ರೂಪ ಮೇಡಮ್,ಆಂಕೇಗೌಡರ ಪುಸ್ತಕಮನೆಗೆ ಬೇಟಿ ನೀಡಿದ ಅನುಭವ, ಮತ್ತು ಕರಿಘಟ್ಟದ ಖುಷಿ ವಿಚಾರಗಳನ್ನು ನಿಮ್ಮದೇ ನಿರೂಪಣೆಯಲ್ಲಿ ಚೆನ್ನಾಗಿ ಬರೆದಿದ್ದೀರಿ...ನಿಮ್ಮೆಲ್ಲರನ್ನು ಬೇಟಿಯಾಗಿದ್ದು ನನಗಂತೂ ತುಂಬಾ ಖುಷಿ..ಬ್ಲಾಗಿಗರೆಲ್ಲಾ ಹೀಗೆ ಏನಾದರೂ ಒಂದು ಹೊಸತನ್ನು ಮಾಡುವತ್ತ...ಮುನ್ನುಗ್ಗೋಣ..

  ReplyDelete
 7. ಬಹಳ ಸುಂದರವಾಗಿ ಬರೆದಿದ್ದೀರಿ ಹಾಗೆ ಮಾಹಿತಿಯನ್ನು ನೀಡಿ ಎಲ್ಲರೂ ಹೋಗಿ ನೋಡಲೇಬೇಕು ಎನಿಸುವಂತೆ ಮಾಡಿದ್ದೀರಿ. ಧನ್ಯವಾದಗಳು. ಅಂಕೆಗೌಡ್ರು ಮತ್ತೆ ಅವರ ಧರ್ಮಪತ್ನಿ ಇಬ್ಬರನ್ನು ನೋಡಿದರೆ ಇಂತಹ ಮಹತ್ತರ ಸಾಧನೆ ಮಾಡಿದ್ದಾರೇ ಎಂದೆನಿಸುತ್ತೆ. ನಿಜಕ್ಕೂ ಅವರ ಹವ್ಯಾಸಕ್ಕೆ ತಲೆಬಾಗಿ ಶರಣೆನ್ನುವೆವು.

  ReplyDelete
 8. ರೂಪಕ್ಕ,

  ಎಲ್ಲರ ಬ್ಲಾಗ್ ಗಳಲ್ಲೂ ಇದೇ ಸುದ್ದಿ,, ಇದೇ ಫೋಟೋ....ಎಷ್ಟೇ ಓದಿದರೂ ಬೇಜಾರು ಅನ್ನಿಸಲೇ ಇಲ್ಲ,,,,,ನಿಮ್ಮ ಲೇಖನ ಮನಕ್ಕೆ ಮುದ ನೀಡಿತು...ನಿಮಗೆ ಗೊತ್ತಿರುವಂತೆ ಸ್ವಲ್ಪದರಲ್ಲೇ ನಾನು ನಿಮ್ ಜೊತೆ ಬರುವ ಅವಕಾಶ ದಿಂದ ತಪ್ಪಿಹೋಗಿದ್ದೆ...ನಿಜವಾಗಿಯೂ ದುಃಖ ಆಗ್ತಾ ಇದೆ....ಲೇಖನ, ಫೋಟೋ ಗಳು ಎಲ್ಲವೂ ಸೂಪರ್. ....ಧನ್ಯವಾದಗಳು...

  ReplyDelete
 9. ರೂಪಾ ನೀವು ಬಸ್ಸಿಗೆ ಹತ್ತಿದ ಕ್ಷಣದಿಂದ ಕರಿಘಟ್ಟದ ಘಟ್ಟದವರೆಗೂ ವಿವರಣೆಗಳೊಂದಿಗೆ ಘಟನಾವಳಿಗಳ ಚಿತ್ರಣ ಸೊಗಸಾಗಿ ಮೂಡಿಸಿದ್ದೀರಿ,,,
  ಹೌದು ಅದೊಂದು ಮರೆಯದ ಅನುಭವ, ನಿಮ್ಮ ಪರಿಚವಾದದ್ದೂ ನಮ್ಮ ಭಾಗ್ಯ... ಎಲ್ಲಾ ಲೇಖಕರೂ ತಮ್ಮದೇ ರೀತಿಯಲ್ಲಿ ಅದ್ವಿತೀಯರು...ಯಾರಿಗೆ ಯಾರೂ ಕಡಿಮೆಯಲ್ಲ... ಆ ಕಾರಣಕ್ಕೆ ಅಲ್ಲದೇ 3K ಬಗ್ಗೆ ಅಶೋಕ್, ಪ್ರದೀಪ್ ಇವರಿಂದ ಕೇಳಿದಾಗಿನಿಂದ ನಿಮ್ಮ ಪರಿಚಯ ಮಾಡಿಕೊಳ್ಳಬೇಕೆಂಬ ಆಸೆಯಿತ್ತು ಅದು ಅಂಕೇಗೌಡರ ಜ್ಞಾನಮಂದಿರ ದರ್ಶನದ ಸಮಯ ಆದದ್ದು ಇನ್ನೂ ಸಾಂದರ್ಭಿಕ. ಧನ್ಯವಾದ

  ReplyDelete
 10. ವಾಹ್ ..!! ರೂ-1 ವಾಹ್ ...!! ತುಂಬಾ ಚೆನ್ನಾದ ನಿ"ರೂಪ"ಣೆ ಯೊಂದಿಗೆ, ಒಳ್ಳೆಯ, ಲೇಖನವನ್ನ ಕೊಟ್ಟಿದ್ದೀರ. ನಿಮ್ಮ ಈ ಲೇಖನದ ವಿಶೇಷತೆ ಏನಂದ್ರೆ, ನಾನು ಅದರೊಳಗೆ ಇಳಿಯುವ ಪ್ರಮೇಯವೇ ಬರಲಿಲ್ಲಾ..!! :-) ಅದೇ ನನ್ನನ್ನ ದೂರ ಕೊಂಡೊಯ್ದು ಬಿಟ್ಟಿತು.. ಅಂಕೇಗೌಡರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ, ಒಂದು ಸುಂದರವಾದ ಲೇಖನಕ್ಕೆ, ನಿಮ್ಮೆಲ್ಲರ ಪುಸ್ತಕ ಪ್ರೇಮಕ್ಕೆ, ಹೃತ್ಪೂರ್ವಕ ಧನ್ಯವಾದಗಳು...

  बहुत कुछ सीखने को भी मिला.

  Thank You .

  ReplyDelete
 11. roopakka nimma lekhana oodi.. naanu aa pustaka bhandaradalli telaadi banda haage aitu.. :P
  (swalpa jasti aitu all? :D )
  but still.. :) nimma lekhana odida mele nananta pustaka premi alli bheti needade iralu yavide karana bekilla.. :)
  hagadare omme , matamme nimma jote allige " sindu maduve" prayukta bhetiya tayari nedesona.. :)

  ReplyDelete
 12. Balu Sir, Dhanyavaada. Ankegowdarannu parichayisida tamage antananta vandanegaLu.

  ReplyDelete
 13. Sandhya, Badariavre haagu Srikanth,
  Pratikriyege preetiya DhanyavaadagaLu :-)

  ReplyDelete
 14. Doctor Sir,
  Nimma pratikriyege dhanyavaadagaLu... Neevu heLida maatu akshara saha nija. Blogige bEti neeDidakke dhanyavaadagaLu.

  Shivu,
  Nimmannella bEti aagiddu nanangoo tumbaane khushi tandide. Aadashtu bega mattomme bEti aagona.

  ReplyDelete
 15. This comment has been removed by the author.

  ReplyDelete
 16. Manasu - Dhanyavaada. Nija, e sthalakke omme kanditha bEti kodi.

  Ra-1 : Thank you for your nice comments. Liked ur comment coz it had ನಿ"ರೂಪ"ಣೆ :-P

  Ashok : Howdu, nimannu tumbaa miss madikondvi. Ellara blog nalloo onde dina publish maadona antha team decide maadidru. E-idea kottavaru shivu kaLaiah.

  Angy : Thankew Swt Hrt for ur comments. Yes, lets plan during Sindu's wedding :-).......

  ReplyDelete

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which h...