ನನ್ನೂರಿನ ಚ೦ದಿರ

ನನ್ನೂರಿನ ಚ೦ದಿರ
 

ಭುವಿ ಕಾಯವ ಲಾ೦ದ್ರ
ಕರ್ಮಯೋಗಿಯ೦ತೆ
ಹಿ೦ದಿರುಗಿ ನೋಡದೆ
ಸರ-ಸರನೆ ಸರಿದ೦ತೆ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ..... 

ಕದ್ದು ಕಾಡುವ
ಇಣುಕಿ ಕೆಣಕುವ
ಬಿದಿಗೆಯ ಚ೦ದಿರನ
ಮ೦ದ ನಗುವಿಲ್ಲ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....

ಹುಣ್ಣಿಮೆಯ ಬೆಳದಿ೦ಗಳೇಕೆ
ಹುಸಿ - ಮುನಿಸಿನ
ಕ೦ಗಳಿಲ್ಲ
ಕದ್ದಿ೦ಗಳೂ ಇಲ್ಲ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....

ನಾ ನಿ೦ತೆಡೆ - ನಾ ಹೋದೆಡೆ
ಹಿ೦ದಿ೦ದೆ ಬರುವುದಿಲ್ಲ 
ನುಸುಳಿ ಕಚಗುಳಿಯಿಡುವ
ತು೦ಟತನವೂ ಇಲ್ಲ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....

ಸುಳಿವಿಲ್ಲ..... ಸುಳಿವಿಲ್ಲ.....

RS
* * * ಬಾಳೊ೦ದು ಭಾವಗೀತೆ * * *

Comments

 1. ಇಣುಕಿ ಕೆಣಕಿ ಕಾಡುವ... ಗವ್ವನೆಯ ಕತ್ತಲಲಿ ಮಂದ ಬೆಳಕಿನ ಓಕುಳಿಯಿಡುವ ಮುದ್ದು ಚಂದಿರನ ಬಗೆಗಿನ ಕವನ ಚೆನ್ನಾಗಿದೆ ರೂಪಕ್ಕ.

  ಚಂದಿರನ ಸುಳಿವಿಲ್ಲ ಎನ್ನುವ ರೂಪಕ್ಕ ನೀವು ಕನ್ನಡಿ ನೋಡಿಕೊಳ್ಳಿ.. ಅಲ್ಲೊಬ್ಬಳು ಚಂದ್ರಿಕೆ ಕಂಡಾಳು... ತುಸು ಮೂಡುವ ನಗು ಖಂಡಿತಾ ಬೆಳದಿಂಗಳಾಗಿರುತ್ತದೆ ... :) :)

  "ತಿಂಗಳ ಬೆಳಕಿನ ಇರುಳಿನಲ್ಲೊಂದು
  ಅಮ್ಮನು ಕೆಲಸದಿ ಇರುತಿಹ ಕಂಡು ... " ಎಂಬ ಪುಟ್ಟ ಮಕ್ಕಳ ಪದ್ಯ ನೆನಪಾಯಿತು

  ReplyDelete
  Replies
  1. ಪುಟ್ಟಿ... ಓದಿಗೆ, ಪ್ರೀತಿಗೆ, ಪ್ರತಿಕ್ರಿಯೆಗೆ ನಿನಗೊ೦ದು ಅಪ್ಪುಗೆ.....

   Delete
 2. "ಚಂದಿರ ಭೂಮಿಗೆ ಬೆಳಕನ್ನು ಚೆಲ್ಲಲು ಹುಣ್ಣಿಮೆ ಬರಬೇಕು" ಎನ್ನುವ ಮುದ್ದಾದ ಹಾಡಿನಂತೆ
  ಪ್ರತಿಸಾಲು ಸೂಸಿರುವ ಭಾವ ವೈಖರಿ ಸೊಗಸಾಗಿದೆ
  ಬಾನಿನ ಚಂದಿರನ ಕಾಣುವ ತವಕ, ಚಡಪಡಿಸುವ ಮನಸ್ಸು ಅನಾವರಣಗೊಂಡಿದೆ.
  ಇಷ್ಟವಾಯಿತು!

  ReplyDelete
  Replies
  1. ಧನ್ಯವಾದ ಶ್ರೀಕಾ೦ತ್.... :) ಪ್ರತಿಕವಿತೆಗೂ ನಿಮ್ಮ ಬಳಿ ಕನ್ನಡ ಹಾಡೊ೦ದು ಇದ್ದೇ ಇರುತ್ತೆ, ಅದು ನಮಗೆಲ್ಲಾ ತು೦ಬಾ ಇಷ್ಟವಾಗುತ್ತೆ....

   Delete
 3. ಚಂದಿರ ಈ ಕವಿತೆ ಓದಿ ಮುನಿಸಿ ಕೊಂಡಾನು ಜೋಕೆ .... ಚಂದದ ಕವಿತೆ ಮೇಡಂ ,

  ReplyDelete
  Replies
  1. ಹಾಗ೦ತೀರ ಬಾಲು ಸರ್.... ಮುನಿದ ಚ೦ದಿರನ ಒಲಿಸಿಕೊಳ್ಳೊದು ಕಷ್ಟನ ಹೇಳಿ.... ಪ್ರತಿಕ್ರಿಯೆಗೆ ಧನ್ಯವಾದ :)

   Delete
 4. ಚೆಂದದ ಕವನ ರೂಪಕ್ಕ... ಪ್ರತಿ ಬಾರಿ "ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ....." ಎಂಬ ಸಾಲು ಬಂದಾಗ... ಅಯ್ಯೋ ಪಾಪ ಬಂದುಬಿಡಬಾರದೇ ಈಗಲೇ ಆ ಚಂದಿರ ಅನ್ನಿಸುತ್ತದೆ... ಮನಸೆಳೆವ ಸಾಲುಗಳು...

  ReplyDelete
  Replies
  1. ಪ್ರದೀಪ್,
   ಪ್ರತಿಕ್ರಿಯೆಗೆ ಧನ್ಯವಾದ....... :)

   Delete
 5. ಸುಳಿವಿರದ ಚಂದಿರನ ಹುಡುಕುತ್ತಾ ಹುಡುಕುತ್ತಾ ನಮ್ಮನ್ನು ಭಾವ ಲೋಕಕ್ಕೆ ಕೊಂಡೊಯ್ದ ನಿಮ್ಮ ಕಾವ್ಯ ಪ್ರತಿಭೆಗೆ ಶರಣು. ಕದ್ದಿ೦ಗಳು ಒಳ್ಳೆಯ ಪ್ರಯೋಗ.

  ReplyDelete
  Replies
  1. ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದ bp ಯವ್ರೆ :)....
   ಪದ ಪ್ರಯೋಗ / ಬಳಕೆ ನಿಮ್ಮ ಬಳಿ ಕಲಿತದ್ದು.......

   Delete
 6. ಕಾರ್ಮೋಡದೊಳಗೂ ನುಸುಳೋ ಪರಿಣಿತ .

  ನೋವನ ಮುದುಡಿಸೋ ನಲಿವಿನ ಧೀಮಂತ .
  ಮುದ್ದು ಚಂದಿರ ಅಲ್ಲೂ ಸುಳಿಯಲಿ ತಂಪಾದ ನೆನಪುಗಳ ಜೊತೆ :)
  ಇಷ್ಟವಾಯ್ತು ಭಾವಲಹರಿ

  ReplyDelete
  Replies
  1. ಭಾಗ್ಯ,
   ಧನ್ಯವಾದ..... ನಿಮ್ಮ ಎರಡು ಸಾಲುಗಳು ಸಹ ಮನ ಮುಟ್ಟಿದೆ.....
   "ಕಾರ್ಮೋಡದೊಳಗೂ ನುಸುಳೋ ಪರಿಣಿತ .
   ನೋವನ ಮುದುಡಿಸೋ ನಲಿವಿನ ಧೀಮಂತ"

   Delete
 7. Roopa medam,

  neeviruva oorinali chandiranilla..

  sadya naniruva maneyalli
  karrent illa, computor illa,
  internet illa.....adakkagi yara link illa

  karana mane badalayisiddene..[tamasege]

  nimma kavana chennagide.

  ReplyDelete
  Replies
  1. This comment has been removed by the author.

   Delete
  2. ಶಿವು ಅವ್ರೆ,
   ಧನ್ಯವಾದ.. :) ಕರೆ೦ಟ್, ಇ೦ಟರ್ನೆಟ್, ಕ೦ಪ್ಯೂಟರ್ ದೇವರುಗಳೆಲ್ಲ ನಿದ್ದೆಯಿ೦ದ ಆದಷ್ಟು ಬೇಗ ಏಳಲಿ...

   Delete
 8. ನಾ ನಿ೦ತೆಡೆ - ನಾ ಹೋದೆಡೆ
  ಹಿ೦ದಿ೦ದೆ ಬರುವುದಿಲ್ಲ
  ನುಸುಳಿ ಕಚಗುಳಿಯಿಡುವ
  ತು೦ಟತನವೂ ಇಲ್ಲ
  ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....

  ಚಂದದ ಸಾಲುಗಳು.....
  ನಿಮ್ಮ ಬೇಸರ ಕಂಡು
  ವ್ಯಕ್ತ ಪಡಿಸಿದ ಪರಿ ಕಂಡು ಬರದೇ ಇದ್ದಾನ್ಯೇ? ಖಂಡಿತಾ ಬರ್ತಾನೆ...

  ReplyDelete
 9. ಸಾಲುಗಳು ಸೊಗಸಾಗಿವೆ

  ReplyDelete
 10. ನಿಮ್ಮ ಕಾವ್ಯ ಕಂಡು ಚಂದಿರ ಇನ್ನೂ ಅಮವಾಸ್ಯೆಯಲು ಮೂಡಬಹುದೇನೋ. ತುಂಬಾ ಸೊಗಸಾಗಿದೆ ಕವನ ಮೇಡಂ. :)

  ReplyDelete

Post a Comment

Popular posts from this blog

ಹೀಗೊಂದು ಮಹಿಳಾ ದಿನಾಚರಣೆ!!

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ

ನಸುಕಿನ ಕನವರಿಕೆಗಳು