Wednesday, February 20, 2013

ಸಾಧ್ಯವಾದರೆ ಕೈ ಜೋಡಿಸಿ, ಇಲ್ಲವಾದರೆ......

"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾಗ ವಿಚಾರಿಸುತಿದ್ದಾರೆ. ಆಗಲಿ, ನೋಡೋಣ ಅಂತ ಹೇಳಿ ಸುಮ್ಮನಾಗ್ತಿದೀನಿ.

ಯಾಕೋ ಈ ನಡುವೆ ಯಾರನ್ನೂ ಅಲ್ಲಿಗೆ ಕರೆದೊಯ್ಯುವ ಮುನ್ನ ಯೋಚಿಸುವನ್ತಾಗಿದೆ! NGO ಗೆ ಹೋದವರಲ್ಲಿ ಕೆಲವರಿಗೆ ಆ ಮಕ್ಕಳನ್ನ ಹೇಗೆ ಮಾತಾಡಿಸಬೇಕು, ಏನೇನು ಕೇಳಬೇಕು, ಏನೇನು ಕೇಳಬಾರದು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇರೋದಿಲ್ಲ. ಎಲ್ಲರೂ ಹೀಗಿರ್ತಾರೆ ಅಂತಲ್ಲ. ಆದ್ರೆ - ಹೀಗೂ ಇರ್ತಾರೆ ಅನ್ನೋದೇ ವಿಪರ್ಯಾಸ. ಅಲ್ಲಿಗೆ ಹೋಗುವ ಮುನ್ನ ನನ್ನದೊಂದು ನಿವೇದನೆ ಸದಾ ಇರುತ್ತದೆ. ಮಕ್ಕಳೊಡನೆ ಆಡಿ, ಅವರನ್ನ ನಗಿಸಿ, ಮುದ್ದಿಸಿ, ಮಾತನಾಡಿಸಿ ತಮ್ಮ ದಿನವನ್ನ ಅರ್ಥಪೂರ್ಣವಾಗಿಸಿ ಅಂತ. ಆದರು ಮಕ್ಕಳನ್ನು ಬೇಟಿಯಾದವರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ!

"ಒಹ್, ನಿಂಗೆ ಅಮ್ಮ ಇಲ್ವಾ ಹಾಗಿದ್ರೆ?, ನಿಂಗೇ, ಒಹ್ ಇಬ್ರೂ ಇಲ್ವಾ? ಛೆ ಛೆ! ಪಾಪ, ಯಾವಾಗ್ ಬಂದ್ರಿ ಇಲ್ಗೆ? ಯಾರ್ ಕರ್ಕೊಂಡ್ ಬಂದಿದ್ದು? ನಿಂದು ಯಾವೂರನ್ತಾನೆ ಗೊತ್ತಿಲ್ವ? ನಿಮ್ಮಪ್ಪ ಅಮ್ಮ ನೆನಪಾಗ್ತಾರ? ನೆನಪಾದಾಗ ಏನ್ ಮಾಡ್ತೀರ? ಛೆ, ಅಯ್ಯೋ ಪಾಪ! ನಿಮಗೂ ಒಂದು ಮನೆ ಅಂತ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅನ್ನಿಸಿರುತ್ತೆ ಅಲ್ವ?"



ಇಂಥ ಪ್ರಶ್ನೆಗಳಿಂದ ಮಕ್ಕಳ ಮನಸಿನ ಮೇಲೆ ಯಾವ ಪರಿಣಾಮ ಬೀಳಬಹುದೆಂದು ಯೋಚಿಸುವ ಗೋಜಿಗೂ ಹೋಗುವುದಿಲ್ಲ ಇವರು. ಆಶ್ರಮಕ್ಕೆ ಬಂದ ಅತಿಥಿಗಳೆಲ್ಲ ಹೋದ ಮೇಲೆ, ಕೆಲವು ಮಕ್ಕಳ ಮನಸ್ಥಿತಿಯಲ್ಲಿ ಏರು ಪೇರು ಕಾಣಬಹುದು. ಯಾರ ಬಳಿಯೂ ಮಾತನಾಡದೆ ಇದ್ದಕಿದ್ದ ಹಾಗೆ ಮಂಕಾಗಿಬಿಡ್ತಾರೆ. ಮತ್ತೊಮ್ಮೆ ಈ ಮಕ್ಕಳನ್ನ ಒಂದು ಮನಸ್ಥಿತಿಗೆ ತರುವಲ್ಲಿ ನಮ್ಮೆಲ್ಲರ ಪ್ರಯತ್ನ ಒಮ್ಮೊಮ್ಮೆ ವಿಫಲವಾಗುತ್ತೆ.

ಇತ್ತೀಚಿಗೊಬ್ಬರು, "ನೀವು ಹೇಳಿದ್ರಿ ಇದು ಅನಾಥಾಶ್ರಮ - Orphanage ಅಂತ, ನಾವೆಲ್ಲೋ ಅಪ್ಪ-ಅಮ್ಮ ಯಾರು ಇರದ ಅನಾಥರು ಅಂದುಕೊಂಡ್ವಿ" ಅಂತ ನನ್ನ ಕೇಳಿಯೇ ಬಿಟ್ಟರು. "ಯಾಕೆ ಸರ್, ತುಂಬ disappoint ಆಗೋಯ್ತ? ಏನೋ ಒಂದು image ಇಟ್ಟುಕೊಂಡು ಬಂದಿದ್ರಿ ಅನ್ಸುತ್ತೆ! ಸಧ್ಯ, ಈ ಮಕ್ಕಳಿಗೆ ಯಾರೂ ಇಲ್ಲದೆ ಯಾರಾದರೊಬ್ಬರು ಇದ್ದಾರಲ್ಲ ಅಂತ ಖುಷಿಪಡಬೇಕು ಅಲ್ವ? ನಿಜ, ಈ ಆಶ್ರಮದಲ್ಲಿ ಕೆಲವರಿಗೆ ಅಪ್ಪ, ಕೆಲವರಿಗೆ ಅಮ್ಮ, ಇನ್ನೂ ಕೆಲವರಿಗೆ ಯಾರೋ ಸಂಬಂಧಿಕರು ಅಂತ ಇದ್ದಾರೆ, ಇಬ್ಬರೂ ಇರದ ಮಕ್ಕಳಿಗೆ ಯಾರೂ ಇಲ್ಲ ಅಂತಲ್ಲ - ನಾವಿದೀವಿ" ಅಂತ ಹೇಳಬೇಕಾಯ್ತು. "ಅಲ್ಲಿದ್ದಾನೆ ನೋಡಿ, ಅವರಪ್ಪ ಆ ಹುಡುಗನ ಮುಂದೆಯೇ ಕೊಲೆಯಾಗಿ ಹೋದ, ಮತ್ತೊಬ್ಬ ಇದ್ದಾನಲ್ಲ ಅವನಮ್ಮ ಜೈಲಿನಲ್ಲಿ, ಇವನಪ್ಪ ದೊಡ್ಡ ಕುಡುಕ, ಇವರಮ್ಮ ಬಿಟ್ಟು ಎಲ್ಲಿಗೊದರೋ ಗೊತ್ತಿಲ್ಲ, ಅವನ ಚಿಕ್ಕಪ್ಪ ಅವನಿಗೆ ಕೊಟ್ಟ ಕಾಟದ ಗುರುತುಗಳು ಅವನ ಮುಖದಲ್ಲಿವೆ ನೋಡಿ, ಇವನು ಯಾವೂರಿಂದ ಓಡಿ ಬಂದನೋ ಗೊತ್ತಿಲ್ಲ, ಹೀಗೆ..... ಪಿಳಿ ಪಿಳಿ ಎಂದು ನೋಡುತಿರುವ ಪುಟ್ಟ ಕಣ್ಣುಗಳ ಹಿಂದೆ ಅನೇಕಾನೇಕ ಕಥೆಗಳಿವೆ, ಅವರನ್ನೆಲ್ಲ ಯಾಕೆ ಕೆಣಕಿ ಕಾಡ್ತೀರಿ?" ಅಂತ ಕೇಳಬೇಕನಿಸಿತ್ತು.

ಸೇವೆಯ ಹೆಸರಿನಲ್ಲಿ ಪುಣ್ಯಗಳಿಸಲು ಹೊರಟ ಮಂದಿಯ ನಡುವೆ ಅರಿವಿಲ್ಲದೆ ಪೆಟ್ಟು ತಿನ್ನುವ ಕಂದಮ್ಮಗಳು ಇವರು. ಸಮಾಜವನ್ನ ಹೆದರಿಸುವ ಶಕ್ತಿ / ಕಲೆ ಒಲಿಯುವು ಮುಂಚೆಯೇ ಇವರಲ್ಲಿ ಕೀಳರಿಮೆ ಮೂಡಿಸುವುದು ಎಷ್ಟು ಸರಿ? ಹಿಂದೊಮ್ಮೆ IT ಕಂಪನಿಯ ಗುಂಪೊಂದು ಆಶ್ರಮಕ್ಕೆ ಬಂದು ಹೋದ ಮೇಲೆ, "ರೂಪಕ್ಕ, ಅಳು ಬರೋತರ ಆಗ್ತಿದೆ" ಅಂತ ಕೃಷ್ಣ ಹೇಳಿದ್ದು ಈಗಲೂ ನೆನಪಿದೆ. ಅವನಿಗೆ ಸಮಜಾಯಷಿ ಹೇಳಿ ಮನೆಗೆ ಬಂದಾಗ ಮನಸು ಭಾರವಾಗಿತ್ತು, ಯಾರನ್ನ ಪ್ರಶ್ನಿಸೋದು? ಯಾರಿಗೆ ಉತ್ತರಿಸೋದು?

ಕೃಷ್ಣನ - ದೀಪಾವಳಿ

ದೀಪಾವಳಿ, ಎಲ್ಲರ ಮನೆಯಲ್ಲು ಸ೦ತಸ,
ರುಚಿ-ಅಡುಗೆ, ಹೊಸ-ಬಟ್ಟೆ, ಪಟಾಕಿಗಳ ಹಾವಳಿ!
ಕೃಷ್ಣನಿಗೆ ಮಾತ್ರ ಎ೦ದಿನ೦ತೆ ದಿನಚರಿ,
ಎದ್ದವನೇ ಆಶ್ರಮದ ಸುತ್ತ ಒಡೆದೆಸೆದು ಕಸ ಕಡ್ಡಿ,
ಗೋಡೆಗೊರಗಿ ಕುಳಿತ ಸುತ್ತಿಟ್ಟ ಚಾಪೆಯ ಹರಡಿ!

ಮನೆ ಮ೦ದಿಯೊಡನೆ ಬೆಳೆದ ಅನುಭವ ಅವನಿಗೆಲ್ಲಿ,
ಹಿ೦ದಿಲ್ಲ-ಮು೦ದಿಲ್ಲ,
ತೊಳೆದ ಎಂಜಲು ತಟ್ಟೆ ಹೊರತೊಂದು ನೆನಪಿಲ್ಲ!
ಒಡ್ಡುತನ - ಬಡತನಗಳ ನಡುವೆ ಹೇಗೆ ಬೆಳೆದು ಬ೦ದನೋ,
ಅ೦ತು ಸೇರಿದ್ದ ಆಶ್ರಮ - ಪುಣ್ಯಾತ್ಮರ ನೆರವೇನೋ!

ಅಲ್ಲಿರುವ ಅಣ್ಣ ತಮ್ಮ೦ದಿರೆ ಅವನಪಾಲಿಗೆಲ್ಲ,
ಪ್ರೀತಿ ಪ್ರೇಮ ತು೦ಬಿದ೦ತೆ ಬಾ೦ಧವ್ಯದ ಒಡಲ!
ಹ೦ಚಿಕೊಳ್ಳಲು ಅವನಲ್ಲಿ ಮಾತುಕತೆಗಳು ಅನೇಕ,
ಭಾವಗಳ ಬಚ್ಚಿಟ್ಟ - ಅವನಿಗೇಕೊ ಬಿ೦ಕ!

ಅ೦ದೊಮ್ಮೆ, ಇ೦ದೊಮ್ಮೆ ಬ೦ದು ಹೋಗುವ ಮ೦ದಿ,
ಹಣ್ಣು, ಹಾಲು, ಸಿಹಿತಿನಿಸು ಕೊಡುವುದು೦ಟು
ತಮ್ಮ ಗೆಲುವು ಸಂಭ್ರಮಗಳ ನೆಪವೊಡ್ಡಿ!
ಯಾರೊ ತೊಟ್ಟು ಎಸೆದ ಬಟ್ಟೆ, ಆಡಿಬಿಟ್ಟ ಆಟಿಕೆಗಳು,
ಓದಿಬಿಟ್ಟ ಹಾಳೆಗಳ ಅ೦ಟಿಸಿ ಓದುವ ಪುಸ್ತಕಗಳು!

ಅವರಿವರ ಕರುಣೆಗೆ ತುತ್ತಾಗಿ ಬೆಳೆಯುತ,
ಮು೦ದೇನು ಎ೦ದು ಅರಿಯದ ಬದುಕು!
ಪ್ರತಿ ಹೆಜ್ಜೆಗೂ ಭಿಕ್ಷೆ - ಮಾಡದ ತಪ್ಪಿಗೆ ಶಿಕ್ಷೆ,
ಕನಸ ಕಾಣಲು ಸಹ ಮನದೊಳಗೆ ಅಳುಕು!
ಕೃಷ್ಣನ ಪರಪುಟ್ಟ ಕಣ್ಣುಗಳು ಬೆದರಿದ೦ತೆ,
ಮೌನರೋದನೆ ಪ್ರಶ್ನಾರ್ತಕ ಒಳಗೊಳಗೆ!
"ನನಗೇಕೆ ಈ ಬಾಳು..?, ನಾನಿಲ್ಲಿ ಹೀಗೇಕೆ "..?
ಅ೦ಜಿಕೆ ನಡುವೆ ಅನಿವಾರ್ಯ -
 ಬಯಸುವುದು ಹೇಗೆ
ಹೊ೦ಬಣ್ಣದಾಕಾಶ, ಬೆಳಕಿನದೀವಳಿ?

44 comments:

  1. good writeup difficult to convince few personalities roopaji.

    ReplyDelete
  2. nevu heliddu sari ide... navu kandita nam team ... yendu makkala manasu novu ago reei nadkodilla anta heloke hemme aguthe :)DOM

    ReplyDelete
  3. ಕಣ್ಣಲ್ಲಿ ಒಂದು ರೀತಿಯ ಚೈತನ್ಯ ಉಕ್ಕಿ ಬರುತ್ತೆ ರೂಪ ನಿಮ್ಮ ಈ ಲೇಖನ...ಒಂದು ಒಳ್ಳೆಯ ಕಾರ್ಯ ಮಾಡುವಾಗ ಎದೆ ತುಂಬಿ ಬರಬೇಕು..ಎದೆಯುಬ್ಬಿಸಿ ನಡೆಯಬೇಕು..ತಲೆ ಎತ್ತಿ ಅಲ್ಲ ಅನ್ನುವ ಮಾತಿನಂತೆ..ನಾವು ಏನೋ ಒಂದು ದಿನ ಕಳೆದು ಅವರ ಜೀವನಕ್ಕೆ ಒಂದು ದೊಡ್ಡ ಸೇವೆ ಮಾಡಿಬಿಡುತ್ತೇವೆ ಎನ್ನುವ "ವಿಶಾಲ" ಎದೆಗಾರಿಕೆ ಬಿಟ್ಟು..ಅವರೊಳಗೆ ಒಬ್ಬನಾಗಿ ನಾನು ಇಂದು ನಿಮ್ಮೊಡನೆ ಇರುವೆ ಎನ್ನುವ ಭಾವ ಆ ಮಕ್ಕಳಿಗೆ ಕೊಟ್ಟಾಗ.ಸಿಗುವ ಸಂತೋಷವೇ ಬೇರೆ..
    ಹಳೆಕಾಲದ ಮನೆಯಾ ಬಾಗಿಲು ಎತ್ತರದಲ್ಲಿ ಕಮ್ಮಿ ಇರುತ್ತೆ.ಕಾರಣ ತಲೆಬಾಗಿಸಿ ನಡೆ ಎನ್ನುವ ಪಾಠ ಅಂತಹ ಮನೋಭಾವ ಹೊತ್ತು ಇಂತಹ ದೇವರುಗಳು ಇರುವ ಗುಡಿಗೆ ಹೋದಾಗ ಮಾತ್ರ ಮನಕ್ಕೆ ಸಂತಸ ಸಿಗುತ್ತದೆ..ಸುಂದರ ಲೇಖನ...ಬಹಳ ಇಷ್ಟವಾಯಿತು..ಆ ಪುಟ್ಟ ಪುಟ್ಟ ದೇವರುಗಳ ಜೊತೆ ಸಮಯ ಕಳೆಯಬೇಕು ಎನ್ನುವ ಆಸೆ ಇದೆ..ಅವಕಾಶ ಸಿಗುತ್ತಾ ರೂಪ...

    ReplyDelete
    Replies
    1. Srikanth,
      Nimma maathu akshara saha nija.
      pratikriyege dhanyavaada.
      khandita nimage namma "NELE"ge swaagatha. Mundondu karyakramakke nimmellaranna aamantrisuva bayakeyide.
      Maanaveeyathe mereyuva nimma protsaaha heege irali.

      Delete
  4. ಕಾಳಜಿ ಮೇಲಿನದಾದ್ರೆ ಅದು ತೋರಿಕೆ ಅಷ್ಟೇ... ಯಾರೋ ಮೆಚ್ಚಬೇಕು ಎಂದು ಮಾಡುವ ಸಹಾಯ ಸಹಾಯವೆಂದು ಅವರಿಗೇ ಅನಿಸೊಲ್ಲ (ಕೇಳಲಿ ಅವರು ತಮ್ಮ ಮನಸ್ಸನ್ನು). ಸುಂದರ ವೈಚಾರಿಕ ಲೇಖನ ರೂಪಾ. ಮಕ್ಕಳ ನಿಷ್ಕಲ್ಮಶ ಮನದಲ್ಲಿ ಗೊಂದಲಗಳನ್ನು ಹಾಕುವುದು ತರವಲ್ಲ... ಅವರಿಗೇ ತಂತಾನೇ ಅರ್ಥವಾಗುತ್ತೆ ದಿನಕಳೆದಂತೆ... ಅಲ್ಲವೇ?

    ReplyDelete
    Replies
    1. Danyavaada Azad Sir,

      Howdu, Tamma manasina jothe maathu-kathe maaduva janaru sookshmathegalige spandistaare sir. Elli, avrigelli time irutte sir?
      Torpadikegende halavu mandhi bartaare!

      Delete
  5. ಮನಕಲಕುವ ವಿಷಯ. ಸೇವೆ passion ಆಗದೇ fashion ಆದಾಗ ಹೀಗೆಲ್ಲ ಆಗುತ್ತದೆ. ನನಗುಂಟು ನಿನಗಿಲ್ಲ ಅಂತ ತೋರಿಸಿಕೊಳ್ಳೋದಕ್ಕೆ ಎಷ್ಟೊಂದು ದಾರಿ! ಮನುಷ್ಯ ಯಾವಾಗಲೂ ಅವನ ಮನದಾಳದ ಎಳಸಿನ ಜೊತೆ ಗುದ್ದಾಡ್ತಾನೇ ಇರ್ತಾನೆ. ಒಮ್ಮೊಮ್ಮೆ ಅದು ಇವನ ಅಂಕೆಮೀರಿ ಕಪಿಚೇಷ್ಟೆ ಮಾಡಿಬಿಡುತ್ತೆ

    ReplyDelete
    Replies
    1. Thank you for the read Master,

      Manushya vayassaadante manushyanaagi beleyabekide. Badalige, shareerakke maatra vayassaagi, budhi nintalle nintogirutte.

      Delete
  6. ನಿಮ್ಮ ಅಂತಃಕರಣಕ್ಕೆ ನಮ್ಮೆಲ್ಲರ ನಮನಗಳು.

    ಕೆಲವು ಜನಕ್ಕೆ ಅನಾಥಾಶ್ರಮಗಳಲ್ಲಿ ಮತ್ತು ವೃದ್ಧಾಶ್ರಮಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದೇ ಅರಿವಿರುವುದಿಲ್ಲ. ಅವರು ಹೊರಗೂ ಎಡಬಿಡಂಗೀ ಮಾತುಗಳನು ಆಡಿ ನೋಯಿಸುವವರೇ!

    ಮಾದ್ಯಮಗಳಲ್ಲಿ ಫೋಟೋ ಹಾಕಿಸಿಕೊಳ್ಳಲು ಮತ್ತು ನ್ಯೂಸ್ ಹೊತ್ತಿನಲ್ಲಿ ಮಿಂಚಲು ಹೊರಡುವ ಮೂಲಕ ಕುಮಾರರಿಗೆ ನಮ್ಮ ಧಿಕ್ಕಾರವಿದೆ.

    ಮಕ್ಕಳ ಮನಸ್ಸು ನೋಯಿಸಲೇ ಬಾರದು.

    ಕವನದಲ್ಲಿ ಕೃಷ್ಣನು ಕೇಳಿದ ಪ್ರಶ್ನೆಗಳು ಸಮಂಜಸವಾಗಿವೆ.

    ReplyDelete
    Replies
    1. Thank you for the comments Badariyavare.
      Torpadikeya jeevana...!
      Maadhyamagala bagge, alli minchuvavara bagge Enu helodu Sir..
      "ಮಕ್ಕಳ ಮನಸ್ಸು ನೋಯಿಸಲೇ ಬಾರದು" I agree.

      Delete
  7. ಅಂಥಾ ಪ್ರಶ್ನೆಗಳಿಗೆ ಉತ್ತರ ಸಿಕ್ಕ ಮೇಲೆ ಆ ಪ್ರಶ್ನೆಗಳನ್ನ ಕೇಳಿದವರಿಗಾಗುವ ಉಪಯೋಗವಾದರೂ ಏನು ಅನ್ನೋದು ಗೊತ್ತಿಲ್ಲ. ಅವರ ಕಥೆ ಕೇಳಿ ಮರುಗೋ ರೀತಿ, ತೋರಿಸೋ ಕನಿಕರ.. ಅದು ಮಾಡೋ ಉಪಕಾರಕ್ಕಿಂತ ಅಸಮಾಧಾನವೇ ಜಾಸ್ತಿ. ಕಾಲೇಜು ಓದುವಾಗ, ಎನ್ ಎಸ್ಸ್ ಎಸ್ಸ್ ಕ್ಯಾಂಪ್ ನಲ್ಲಿ ಒಮ್ಮೆ ಹೀಗೆ ಒಂದು ದಿನ ಒಂದು ಅನಾಥಾಶ್ರಮದ ಸುತ್ತ ಮುತ್ತ ಸ್ವಚ್ಚ ಮಾಡುವ ಕಾರ್ಯವಿದ್ದು.. ಅದೇ ಸಂಜೆ ಅನಾಥಾಶ್ರಮದ ಅಂಗಳದಲ್ಲಿ ಕೆಲವೊಂದು ಮನರಂಜನೆಯ ಕಾರ್ಯಕ್ರಮಗಳನ್ನ ನಡೆಸಿ ಕೊಡೋದಿತ್ತು. ನಮ್ಮ ಸರ್ ಮೊದಲೇ ಹೇಳಿದ್ದರು, ನೋಡಿ ನೀವು ಮಕ್ಕಳ ಜೊತೆ ಆಡಿ, ಹಾಡಿ, ಕುಣೀರಿ ಆದ್ರೆ ಮಕ್ಕಳಿಗೆ ಯಾವೊಂದು ಪ್ರಶ್ನೆಯನ್ನು ಕೇಳಬೇಡಿ. ನಿಮ್ಮಲ್ಲಿ ಹುಟ್ಟ ಬಹುದಾದಂಥ ಪ್ರಶ್ನೆಗಳಿಗೆ ಅವರಿಗೆ ಸರಿಯಾದ ಉತ್ತರ ಕೊಡೋ ಚೈತನ್ಯ ಇದ್ದರೆ, ಅವರಿಗೆ ಸರಿಯಾದ ಉತ್ತರ ಗೊತ್ತಿದ್ದರೆ, ಆ ಉತ್ತರಗಳಿಂದ ಅವರಿಗೊಂದು ಬದುಕು ಪ್ರಾಪ್ತವಾಗುವುದಿದ್ದರೆ.. ಖಂಡಿತ ಅವರ್ಯಾರಿಗೂ ಈ ಆಶ್ರಮಗಳ ಅವಶ್ಯಕತೆ ಇರೋದಿಲ್ಲ ಅಂತ. ಎಷ್ಟು ನಿಜ ಅಲ್ವ..?? ಎಷ್ಟೋ ಜನರಿಗೆ ತಾವ್ಯಾರು ಅನ್ನೋದೇ ಗೊತ್ತಿರೋಲ್ಲ. ಇನ್ನು ತಮ್ಮ ಪೂರ್ವಾಪರ ಹೇಗೆ ಗೊತ್ತಿರತ್ತೆ...?? ಇನ್ನು ಪೂರ್ವಾಪರ ಉಳ್ಳವರು ಕೂಡ ಇಂಥಾ ಒಂದು ಅವಸ್ಥೆಗೆ ತಲುಪಿದ್ದಾರೆಂದರೆ.. ಇಂಥ ಪ್ರಶ್ನೆಗಳು ಬಾಕಿ ಎಲ್ಲರಿಗಿಂತ ಅವರಿಗೆ ನೋವುಂಟು ಮಾಡುವುದು ಜಾಸ್ತಿ. ಯಾರೇ ಆಗಲಿ ದಯಮಾಡಿ ಅಂಥಾ ಪ್ರಶ್ನೆ ಕೇಳ ಬೇಡಿ.

    ತುಂಬಾ ಒಳ್ಳೆಯ ಸಮಯೋಚಿತ ಲೇಖನ ರೂಪಕ್ಕ. ಆ ಮಕ್ಕಳ ಜೊತೆ ನಾನೂ ಒಂದಿಷ್ಟು ಆಟ ಆಡೋ ಕಾಲ ಆದಷ್ಟು ಬೇಗ ಬರಲಿ.

    ReplyDelete
    Replies
    1. Naik,
      Pratikriyege Dhanyavaada.
      Sari ide nimma maathu, nimma khalaji. Nimmanthavaru innu hecchaagi mundhe barali antha aashisteeni.

      Delete
  8. ತಾವೇನೋ ಸಮಾಜ ಸೇವೆ ಮಾಡಲು ಬಂದಿದ್ದೇವೆ ಎಂಬ ಉತ್ಸಾಹದಲ್ಲಿ ಮಕ್ಕಳ ಮನಸ್ಸಿಗೆ ನೋವುಂಟು ಮಾಡುವವರಿಗೆ ಏನೇನ್ನ ಬೇಕೋ ಗೊತ್ತಿಲ್ಲ ..

    ರೂಪಕ್ಕ ಲೇಖನ ತುಂಬಾ ಚೆನ್ನಾಗಿದೆ. ಆ ಪುಟ್ಟ ಮಕ್ಕಳೊಂದಿಗೆ ನಾನೂ ಮಗುವಾಗುವ ಅವಕಾಶ ನನಗೊಮ್ಮೆ ಸಿಗಬಹುದಾ??

    ReplyDelete
    Replies
    1. Hi Sandhya,
      Thank you.
      Khandita..... let me know when u wish to come.

      Delete
  9. ಮಾತೆಲ್ಲ ಮೌನದ ಮೊರೆಹೋಗಿ....

    ReplyDelete
  10. This comment has been removed by the author.

    ReplyDelete
  11. ಇ೦ಥ ಜನಗಳಿಗೆ ಏನ್ ಹೇಳಬೇಕೋ ಗೊತ್ತಾಗೊಲ್ಲ. ಹಾಗೆ ನೋಡಿದ್ರೆ ಎಲ್ಲರೂ ಅಂತಾರೆ - ಸತ್ಮೇಲೆ ಯಾರು ಜೊತೆಗೆ ಹೋಗೋಲ್ಲ! ಇರೋವರೆಗೂ ಇಂಥ ಕಿರಿಕ್ ಪ್ರಶ್ನೆಗಳು ಕೇಳ್ಕೊಂಡೆ ಬೇರೆಯವರ ಮನಸಿಗೆ ನೋವು ಮಾಡ್ತಾರೆ. ಇಂಥವರು ಅಲ್ಲಿ ಹೊಗೊಕಿ೦ತ ಮನೇಲಿ ತಮ್ಮ ಮಕ್ಕಳ ಜೊತೆ ಇರೋದು ವಾಸಿ.

    ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಇದನ್ನ ಓದಿದ ಮೇಲಾದ್ರು ಅಂತ ಜನರು ಸ್ವಲ್ಪ ಬುದ್ಧಿ ಕಲಿಯಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ

    ReplyDelete
  12. Buddi nettagiddaru sotta prashnegalanna kelo buddimanyaru nimage yeduraagadirali...... Yaako tumba kopadalli ee lekhanavanna baredirohaagide....

    Nimma ee sahanege, maduttiruva kelasakke..... olleyadaagali

    ReplyDelete
    Replies
    1. hi Naveen,
      Thank you for the comments.
      kopa kaanistideya lekhanadalli? then, I am successful in conveying my experience.

      Delete
  13. ಎಷ್ಟು ಓದಿದರೂ ಸಾಮನ್ಯ ತಿಳುವಳಿ ಇಲ್ಲದ ಮೇಲೆ ಪ್ರಯೋಜನ ಇಲ್ಲ. ಮಕ್ಕಳ ಮನಸನ್ನು ಅರಿಯದ ಇಂತಹ ದೊಡ್ಡವರ ದಡ್ಡತನ ಅಸಹ್ಯ ಆಗುತ್ತದೆ.

    ReplyDelete
    Replies
    1. Balu Sir,
      Thanks for visiting my blog.
      Khanditha Sir, odigu taavu nadedukolluva reetigu sambandhave irolla!!

      Delete
  14. ನಿಜ..

    ನಮ್ಮೆದುರಿಗೆ ಇರುವವರ ಭಾವನೆಗಳಿಗೆ ನೋವಾಗಾಬಾರದು ಎನ್ನುವ ಪ್ರಜ್ಞೆ ನಮಗಿರಬೇಕು...

    ಅನಾಥ ಮಕ್ಕಳೂ ಕೂಡ ಸುಂದರ ಹೂಗಳು...
    ಅವರ ಭಾವನೆಗಳೂ ಸಹ ಹೂವಿನ ಥರಹ....

    ಕವನ ಮನತಟ್ಟಿತು...

    ReplyDelete
    Replies
    1. thank you Prakash Ji....
      sundara hoogalu nijave,
      araluva munnave hosakihoguva bhaava jeevigalu saha!

      Delete
  15. ಅನಾಥ ಮಕ್ಕಳು ಮತ್ತೆ ಅನಾಥಶ್ರಮಗಳ ಜೊತೆ ನನಗೊಂದು ವಿಶೇಷ ನಂಟು .... ನೀವು ಹೇಳಿದ ಇಂತಹ ಅನೇಕ ವ್ಯಕ್ತಿಗಳನ್ನು ನೋಡಿದ, ಅವರ ಕೊಂಕು ನುಡಿಗಳನ್ನು ಕೇಳಿದ, ಕೆಲವೊಮ್ಮೆ ಅವರಾಡಿದ ಮಾತುಗಳನ್ನು ಕೇಳಿ ಬೇಸರ ವಾಗಿ ಅವರನ್ನು ತರಾಟೆಗೆ ತೆಗೆದುಕೊಂಡು ಅನೇಕ ಘಟನೆಗಳೂ ನನ್ನ ನೆನಪಿನ ಬುಟ್ಟಿಯಲ್ಲಿವೆ .. ಒಂದು ಕೈನಲ್ಲಿ ದಾನ ಮಾಡಿದರೆ ಇನ್ನೊಂದು ಕೈಗೆ ಗೊತ್ತಾಗಬಾರದು ಅಂತಾರೆ. ನನ್ನದು ಅದೇ ಆಭಿಪ್ರಾಯ . ಆದರೆ ಈಗೀಗ ಈ ಅನಥಶ್ರಮಗಳ ಬಗ್ಗೆ, ಅನಾಥ ಮಕ್ಕಳ ಬಗ್ಗೆ ಕಾಳಜಿ ತೋರಿಸುವವರ ಸಂಖ್ಯೆ ಹೆಚ್ಚ್ಗುತ್ತಿದೆ ಎನ್ನುವುದು ಸಂತಸದ ಸುದ್ದಿಯಾದರೂ ಕೇವಲ ಪ್ರಚಾರಕ್ಕಾಗಿಯೇ ಮಾಡುವವರು ಇವರಲ್ಲಿ ಬಹಳ ಮಂದಿ ಎನ್ನುವುದು ಅಷ್ಟೇ ಬೇಸರದ ಸಂಗತಿ.. ನಿಮ್ಮ ಮನಸ್ಸಿನಷ್ಟೇ ಸುಂದರವಾದ ಲೇಖನ ರೂಪಕ್ಕ, ಕವನವೂ ಸೂಪರ್ ...ನಾನು ಬರೆದಿದ್ದ ಅನಾಥೆ ಕವನ ನೆನಪಾಯಿತು... ನಿಮ್ಮ ಒಳ್ಳೆಯ ಕಾರ್ಯಗಳು ಹೀಗೆ ಮುಂದುವರಿಯಲಿ, ನಮ್ಮನ್ನು ನಿಮ್ಮ ಒಳ್ಳೆಯ ಕೆಲಸಗಳಲ್ಲಿ ಪಾಲುದಾರರಾಗಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಾ ......................

    ಅಭಿನಂದನೆಗಳು ......

    ReplyDelete
    Replies
    1. hi Ashok,
      Thanks for your comments.
      I know your committment towards such causes. I appreciate your concern and selfless service.
      Glad to have people like you around.

      Delete
  16. howdu naanu Ashok sir maathanna opputhene...haage roopa avre channagi baredidria?

    ReplyDelete
  17. Roo-1 ದೀದಿ ಏನು ಹೇಳಬೇಕೋ ಗೊತ್ತಾಗ್ತಿಲ್ಲ, ತುಂಬಾ ನೋವಾಯ್ತು ಅಲ್ಲಿನ ಚಿತ್ರಣದ ಬಗ್ಗೆ ತಿಳಿದು. :(


    ಆ ಅನಾಥ ಮಕ್ಕಳ .......... [ Sorry. xd ಆ ಮಕ್ಕಳು ಅನಾಥರಲ್ಲ.] ಆ ಮಕ್ಕಳ ಬಗೆಗಿನ ನಿಮ್ಮ ಮಮತೆ ಪ್ರೀತಿ ಕಳಕಳಿ ತುಂಬಿದ ಬರಹ ಓದಿ ಮತ್ತೇ ನನ್ನ ಮಾತು ಮಾತು ನೆನಪಾಯಿತು...... ಅದೇ ....

    ನನಗೆ ಕೆಲವರು "ಮನುಷ್ಯರ ಥರಾ" ಕಾಣಿಸುವುದಿಲ್ಲ .................. ದೇವರ ಥರಾ ಕಾಣಿಸುತ್ತಾರೆ

    ಧನ್ಯವಾದಗಳು

    ReplyDelete
    Replies
    1. hi Ra-1....
      Am speechless, heegella hogalabaardu....
      namma sneha preeti belagutirali....

      Delete
  18. ಓದಿ ಬಹಳ ಬೇಸರವಾಯಿತು ಅನಾಥರೆಂದರೆ ಏನು ಅಂತ ಗೊತ್ತಿರಲಿಲ್ಲ ಬರಿ ಸಿನಿಮಾದಲ್ಲಿ ನೋಡಿದ ನೆನಪು ನಿಜ ಜೀವನದಲ್ಲಿ ಗೊತ್ತಿರಲಿಲ್ಲ ನಿಮ್ಮ ಲೇಖನ ನೋಡಿ ಕಣ್ಣು ತೇವಗೊಳ್ಳದೆ ಇರಲಿಲ್ಲ , ನಿಜ ತಮ್ಮ ಬದುಕುಗಳಿಂದ ಎಷ್ಟು ಜನ ಇಂತಹವರ ಸೇವೆಗೆ ಬಿಡುವು ಮಾಡಿಕೊಳ್ಳುತ್ತಾರೆ ಮತ್ತೆ ಸ್ವಯಂ ನಿಲ್ಲುತ್ತಾರೆ ನಿಮ್ಮಂತ ವಿಶೇಷ ವ್ಯಕ್ತಿಗಳು ಮಾತ್ರ ಎಲ್ಲರಿಗು ಸೇವಾ ಮನೋಭಾವ ಇರೋದಿಲ್ಲ ಇದ್ದರು ಬಿಡುವು ಇರೋದಿಲ್ಲ ಆ ನಿಮ್ಮ ಮೊದಲ ಮಾತುಗಳು ಕೇಳಿ ಮನಸ್ಸಿಗೆ ಪಿಚ್ಚೆನಿಸಿತು ಮಕ್ಕಳಿಗೆ ದೊಡ್ದವರೇ ಮಾರ್ಗ ದರ್ಶನ ಅವರ ಬೆಳವಣೆಗೆಗೆ ದಾರಿ ಅವರು ನಮ್ಮನು ನೋಡಿ ಕಲಿತಾರೆ ನಾವೇ ಅವರ ಮನಸ್ಸಿಗೆ ಇಲ್ಲದ ನೋವಿನ ಭಾವ ತುಂಬಿ ಅಪ್ಪ ಯಾರು ಅಮ್ಮ ಯಾರು ಬಂಧು ಯಾರು ಉರು ಯಾವದು ಇಂತವೆಲ್ಲ ಪ್ರೆಶ್ನೆಗಳೇ ಗೊತ್ತಿರೋದಿಲ್ಲ ಅಂತದರಲ್ಲಿ ಉತ್ತರ ಎಲ್ಲಿಂದ ಬರಬೇಕು ರೊಪ ಮೆಡಮ ತಮ್ಮ ಅನುಕಂಪ ಸೇವಾ ಮನೋಭಾವ ಮತ್ತ ಅವರ ಮೇಲಿನ ಅಕ್ಕರೆ ಮತ್ತು ಅವರ ದುಃಖಕ್ಕೆ ಸ್ಪಂದಿಸಿದ ಈ ಲೇಖನ ಮನಕ್ಕೆ ಎಲ್ಲೋ ತಟ್ಟಿತು ತುಂಬಾ ಬೇಸರವಾಯಿತು , ದಯಮಾಡಿ ಸ್ನೇಹಿತರೆ ಅವರ ಮಾತುಗಳಿಗೆ ಸ್ಪಂದಿಸಿ ಮತ್ತೆ ಮಕ್ಕಳು ಮಕ್ಕಳೇ ಯಾರೇ ಆದರುನು ನಮ್ಮ ಮನೆಯ ಮಕ್ಕಳಿದಂತೆ ಲೋಖದ ಕಲ್ಮಶ ಅರಿಯದ ಮುಗ್ದರು ಅವರ ಭಾವನೆಗಳಿಗೆ ದಯಮಾಡಿ ನೋವು ಕೊಡಬೇಡಿ ನಿಮ್ಮ ಸೇವಾ ಮನೋಭಾವ ಇದ್ದರೆ ಅದರ ಮೇಲ್ವಿಚಾರಕರಿಗೆ ಹೇಳಿ ಅವರು ಆ ಮಕ್ಕಳೊಂದಿಗೆ ಬೇರೆತಿರುತ್ತಾರೆ ಅವರ ಮೂಲಕ ನಿಮ್ಮ ಸೇವೆಯನ್ನು ಮಾಡಿ ರೊಪ ಮೇಡಂ ನನ್ನ ಕಡೆ ಏನೇ ಸಹಾಯ ಬೇಕಿದ್ದರು ನಾನು ಇಲ್ಲಿಂದಲೇ ಮಾಡ ಬಲ್ಲೆ ದಯಮಾಡಿ ತಿಳಿಸಿ

    ReplyDelete
    Replies
    1. hi Sanju,
      Pratikriyege dhanyavaada.
      Khandita nimage tilisteeni, makkala kuritante khaalaji torida nimage namana.

      Delete
  19. ಒಪ್ಪುವಂತಹ ಮಾತು. ಕೆಲವರಿಗೆ ಸಮಾಜ ಸೇವೆಯೆನ್ನುವುದು ಪ್ರಚಾರಮಾಡಿಕೊಳ್ಳುವ ಒಂದು ಸಾಧನ ಅಷ್ಟೆ. ಮನೆ ಮುಂದೆ ಬಿದ್ದಿರುವ ವೃದ್ಧನನ್ನೋ, ಹಸಿವಿನಿಂದ ಸಾಯುತ್ತಿರುವ ನಾಯಿಯನ್ನೋ ಕಣ್ಣೆತ್ತಿಯೂ ನೋಡದ ಜನ, ದೊಡ್ಡದಾಗಿ ಇಂಥ ಕಡೆ ಹೋಗಿ ವಿಚಿತ್ರವಾಗಿ ಆಡಿ ಬರುತ್ತಾರೆ. ಎಷ್ಟೋ ಸಾಫ್ಟ್ ವೇರ್ ಕಂಪನಿಗಳಲ್ಲಿ corporate social responsibility ಎನ್ನುವುದು ಕಾಟಾಚಾರದ ವಿಷಯವಾಗಿದೆ. ತಾವೇನೋ ಸಮಾಜಕ್ಕೆ ದೊಡ್ಡದು ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಆತುರವೇ ಎದ್ದು ಕಾಣುತ್ತದೆ. ಉತ್ತಮ ಲೇಖನ

    ReplyDelete
    Replies
    1. Dhanyavaada Deepa,
      ಮನೆ ಮುಂದೆ ಬಿದ್ದಿರುವ ವೃದ್ಧನನ್ನೋ, ಹಸಿವಿನಿಂದ ಸಾಯುತ್ತಿರುವ ನಾಯಿಯನ್ನೋ ಕಣ್ಣೆತ್ತಿಯೂ ನೋಡದ ಜನ, ದೊಡ್ಡದಾಗಿ ಇಂಥ ಕಡೆ ಹೋಗಿ ವಿಚಿತ್ರವಾಗಿ ಆಡಿ ಬರುತ್ತಾರೆ.
      nija nimma maathu.

      Delete
  20. ಸಾಧ್ಯವಾದರೆ ಕೈ ಜೋಡಿಸಿ, ಇಲ್ಲವಾದರೆ...ಸುಮ್ಮನಿರಿ... ಕೊಂಕುನುಡಿಗಳನ್ನು ಆಡಿ ಮುಗ್ದ ಮಕ್ಕಳ ಮನಸ್ಸನ್ನು ಘಾಸಿಗೊಳಿಸಬೇಡಿ... ಲೇಖನ ಚೆನ್ನಾಗಿದೆ ರೂಪಕ್ಕ...

    ಈಗ ಎಲ್ಲಾ ಕಡೆ ನಿಯಮಗಳು ಇರುವಂತೆ, ಇಂತಹ ಆಲಯಗಳನ್ನು ಪ್ರವೇಶಿಸುವ ಮುನ್ನ ಕಡ್ಡಾಯವಾಗಿ ಅಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಬೇಕು ಎನಿಸುತ್ತಿದೆ ಈ ಲೇಖನ ಓದಿ..

    ವಿದ್ಯಾವಂತರುಗಳಿಗೇಯೇ ಇಂತಹ ಭಾವನಾತ್ಮಕ ನಡವಳಿಕೆಗಳನ್ನು ಹೇಳಿಕೊಡುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಶೋಚನೀಯ ಸ್ಥಿತಿ...

    ReplyDelete
    Replies
    1. Thanks Bangara,
      Nimma soochane salahe sooktavaagide, will see if we can implement them.

      Delete
  21. ನಿಜ ರೂಪ ನಿಮ್ಮ ಮಾತು ನನಗೂ ಒಮ್ಮೆ ಅನುಭವವಾಗಿದೆ. ನಮ್ಮ ಸ್ನೇಹಿತೆಯೊಬ್ಬಳು ಅನಾಥ ಮಕ್ಕಳನ್ನು ಸಾಕುತ್ತಿದ್ದಾಳೆ ಅವವಳಿಗೆ ಸಹಾಯ ಮಾಡಲು ಬೃಹತ್ ಕಂಪನಿಗಳಲ್ಲಿ ಕೆಲಸ ಮಾಡುವ ೪,೫ ಜನ ಒಮ್ಮೆ ಅವಳ ಮನೆಗೆ ಭೇಟಿ ಕೊಟ್ಟಾಗ ಮಕ್ಕಳನ್ನು ನಿಮ್ಮ ಅಪ್ಪ,ಅಮ್ಮ ಎಲ್ಲಾ ಎಲ್ಲಿದ್ದಾರೆ ನಿಮಗೆ ಅವರುಗಳ ಬಗ್ಗೆ ಏನಾದ್ರು ಗೊತ್ತಾ ಅಥವಾ ಏನೂ ಗೊತ್ತಿಲ್ಲದೇ ಇಲ್ಲಿ ಬಂದು ಸೇರಿದ್ರಾ ಎಂದು ಪ್ರಶ್ನೆ ಕೇಳ್ತಾ ಇದ್ದ ಹಾಗೆ ನನ್ನ ಸ್ನೇಹಿತೆ ಅವರನ್ನು ಆಚೆ ಕಳುಹಿಸಿದ್ದಾಳೆ. ನಂತರದ ದಿನಗಳಲ್ಲಿ ನನ್ನ ಸ್ನೇಹಿತೆ ಆ ೪,೫ ಜನ ಬೈದರಂತೆ ನಾವು ಏನೋ ಸಹಾಯ ಮಾಡೋಣ ಅಂತಾ ಹೋದ್ರೇ ಹೊರಗೆ ಕಳುಹಿಸಿದ್ರು ಅಂತಾ. ಆದರೆ ಯಾಕೆ ಹೊರಗೆ ಕಳುಹಿಸಿದ್ರು ಅನ್ನೋದು ಮಾತ್ರ ಚಿಂತಿಸಲಿಲ್ಲ ವಿದ್ಯಾವಂತರು. ವಿದ್ಯೆ ಇದ್ದರೇನು ಸ್ವಲ್ಪ ಸಂಸ್ಕೃತಿ ಮತ್ತು ಸಭ್ಯತೆ ಇರಬೇಕು ಎಂದೆನಿಸಿತು. ಈ ಲೇಖನದಿಂದಾದರೂ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.
    ಧನ್ಯವಾದಗಳು ರೂಪ ಒಂದೊಳ್ಳೆ ವಿಚಾರವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ

    ReplyDelete
    Replies
    1. hi Suguna,
      nimma pratikriyege dhanyavaada,
      makkala sookshmathege spandisadavaru hege ulidavara bhavanegalige spandistaare antha yochane aagutte!

      Delete
  22. ಒಂದೊಳ್ಳೆ ಲೇಖನ, ಬೇರೆಯವರ ಭಾವನೆಗೆ, ಮನಸ್ಸಿಗೆ ನೋವಾಗಬಾರದು ಸರಿ. ತಡವಾದ ಓದು. ಚೆನ್ನಾಗಿದೆ ಬ್ಲಾಗು.

    ReplyDelete
  23. This comment has been removed by the author.

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...