Monday, September 23, 2013

ಚಿತ್ತ ಬ್ರಾಂತಿ 

ಅವನಿಗೆ
ಅವಳ
ಸಿ೦ಗಾರದ
ಅರಿವಿಲ್ಲ
ಒಲಿದವಳು ನುಲಿದರೂ  ಸ್ವರ್ಗವೇ ಸಿಕ್ಕ೦ತೆ (ತಾರ್ಕಿಕ)
  
ಅವಳಿಗೆ
ಅವನ
ತ್ಕಟತೆಯ
ಪರಿವಿಲ್ಲ
ಕಾಯಿಸಿ ಬೇಡಿಸಿ ಕೊಡುವ ಮುತ್ತೇ ಮುತ್ತ೦ತೆ (ಮಾದಕ)

ಕಮರಿವೆ
ಭಾವಗಳು
ಋತುಗಳ
ಹ೦ಗಿಲ್ಲ
ಎಲ್ಲವೂ ಅವರವರ ತತ್ವಕ್ಕೆ ಮಣಿದ೦ತೆ (ಸಮಜಾಯಿಷಿ)

ಈಡೇರದ
ಆಸೆಗೆ
ವಾಸ್ತವಿಕೆ
ಒಲಿಯೋಲ್ಲ
ಮಬ್ಬಲ್ಲಿ ಕಣಿ ಕೇಳಿ ಕಬ್ಬನ್ನು ಜಗಿದ೦ತೆ (ಸ೦ಗತಿ)
 
ಬೈರಾಗಿಗೆ
ಮುಡುಪಿಟ್ಟ
ಪ್ರೀತಿಯದು
ಕರಗಿಲ್ಲ  
ಹುಚ್ಚು ಕುದುರೆಯ ಜಾಡು - ಮನಸು ಹರಿದ೦ತೆ (ತಿರುಳು)  

13 comments:

  1. ನಿಮ್ಮ ಕವನದ ಶೈಲಿಗೆ, ಕವನದ ತರ್ಕ, ಮಾದಕತೆ....ತಿರುಳಿಗೆ ಮನಸ್ಸು ಮಾರು ಹೋಯಿತು. ಮೇಲಿರುವ ಚಿತ್ರವೂ ಸಹ ಕವನಕ್ಕೆ ಭೂಷಣವಾಗಿದೆ. ಚಿತ್ರವನ್ನು ನೀವೇ ತೆಗೆದಿರುವಿರಾ? ಅಭಿನಂದನೆಗಳು.

    ReplyDelete
    Replies
    1. ನೀವು ನನ್ನ ಕವನ ಓದ್ತೀರ ಅ೦ದ್ರೆ ಅದು ಖುಷಿ ಕೊಡುವ ಸ೦ಗತಿ, ಜೊತೆಗೆ ನಿಮ್ಮ ಪ್ರತಿಕ್ರಿಯೆ ಬೋನಸ್ ಸಿಕ್ಕ೦ತೆ, ಧನ್ಯವಾದ ಸುನಾತ್.

      Delete
  2. ಸೊಗಸಾದ ಬಣ್ಣದ ಕವನ. ನೀವು ಕೊಟ್ಟ ತಾರ್ಕಿಕತೆ, ಸಮಜಾಯಿಷಿ, ತಿರುಳುಗಳಿಂದ ನನಗೆ ಒಂದು ವಿಭಿನ್ನ ಕವನ ಓದಿದಂತಾಯಿತು.

    ReplyDelete
    Replies
    1. Hi Chandrashekar,
      ಪ್ರತಿಕ್ರಿಯೆಗೆ ಧನ್ಯವಾದ :)

      Delete
  3. ತಾರ್ಕಿಕ: ನಿಜ ಒಲಿದವಳು ಬಿಚ್ಚೊಲೆ ಗೌರಮ್ಮನಾದರೂ - ಪ್ರೀತಿಯ ಕಣ್ಣಿಗೆ ಅದೇ ಸರ್ವಾಲಂಕಾರ.
    ಮಾದಕ: ಕಾಯುವುದಿದೆಯಲ್ಲ ಅದೇ ಮುತ್ತು ಕಟ್ಟೋ ಗಳಿಗೆ.
    ಸಮಜಾಯಿಷಿ: ಅವರವರ ಮೂಗಿನ ನೇರಕ್ಕೆ ಜೀವನ ಸಮೀಕರಣ.
    ಸಂಗತಿ: ಒಳ್ಳೆಯ ಹನಿ ಇದು. ಬೇಧಿದ್ದೆಲ್ಲ ಸಿದ್ದಿಸುವಂತಿದ್ದರೆ ಮನುಜ ದೇವರೇ ಆಗುತ್ತಿದ್ದ!
    ತಿರುಳು: ಒಂದು ಇಡೀ ಕಾದಂಬರಿ ಓದಿದ ಖುಷಿಯಾಯಿತು...

    ReplyDelete
    Replies
    1. ಬದರಿಯವರೆ,
      ಓದಿ, ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸುವ ನಿಮ್ಮ ಮಾತುಗಳಿಗೆ ಪ್ರೀತಿಯ ಧನ್ಯವಾದ.

      Delete
  4. ತುಂಬಾ ಒಳ್ಳೆಯ ಕವನ ಶೈಲಿ...

    ವಿಭಿನ್ನವಾದ ವಿವರಣೆ...

    ಓದಿದಷ್ಟು ಬಾರಿ ಹೊಸ ಅರ್ಥ ಹೊಳೆಯುತ್ತವೆ,,.. (ಚಿತ್ತ ಭ್ರಾಂತಿ)

    ತುಂಬಾ ಖುಷಿಯಾಯಿತು ಓದಿ...

    ReplyDelete
    Replies
    1. thank you for the read and for the comments :)

      Delete
  5. ಕವನ ಶೈಲಿ... ವಿಭಿನ್ನ !!! ಅಭಿನಂದನೆಗಳು :)

    ReplyDelete
  6. ಜೀವನದಲ್ಲಿ ತಾರ್ಕಿಕ ಪ್ರಪಂಚದಲ್ಲಿ ನಡೆಯುವುದು ನಡೆಯೋಲ್ಲ ಆಗೋದು ಕಾಣೋಲ್ಲ
    ಮಾದಕ ಪ್ರಪಂಚದಲ್ಲಿ ಬೇಕಿದ್ದು ಬೇಕು ಬೇಡಿದ್ದೂ ಬೇಕು
    ಆಕಾಶ ಭುವಿಗಳ ಇರುವಂತೆ ಅಂಟಿಕೊಂಡು ಇಲ್ಲ ಬೆಸೆದುಕೊಂಡು ಇಲ್ಲ ಎನ್ನುವ ಭಾವಕ್ಕೆ ಸಮಜಾಯಿಷಿ ನೀಡುತ್ತದೆ
    ವಾಸ್ತವ ಸಂಗತಿಯ ಕರಾಳ ಕನ್ನಡಿ ನಿಜಕ್ಕೂ ಆಘಾತಕಾರಿ ಅದನ್ನು ನೋಡಿ ಜೀವಿಸಿದಾಗ ಕಬ್ಬಿನ
    ಸವಿಯಂತೆ ಜೀವನ
    ಜೀವನದ ಹಣ್ಣಿನ ತಿರುಳನ್ನು ಒರೆ ಹಚ್ಚಿನೋಡಿದಾಗ ಹಣ್ಣಾದದ್ದು ಕಾಯಿ ಮಣ್ಣಾದದ್ದು ಹಣ್ಣು.. ಸುಂದರ ಜೀವನದ ಸಾರ ಈ ಚಿಕ್ಕ ಚಿಕ್ಕ ಸಾಲುಗಳಲ್ಲಿ ಅಡಗಿ ಕೂತಿದೆ... ತ್ರಿವೇಣಿ ಸಂಗಮದಲ್ಲಿ ಸರಸ್ವತಿ ಗುಪ್ತಗಾಮಿನಿ ಸರಸ್ವತಿಯಂತೆ ಸೂಪರ್ DFR ಇಷ್ಟವಾಯಿತು.

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...