ಕಲ್ಬೆಂಚು

ಹಗುರಾಗಿ 
ಬಂದು 
ಸೋಕಿ ಹೋಗುವ 
ಗುಲ್ಮೊಹರಿನ 
ಪಕಳೆ ...

ಅಂಗೈನ 
ರೇಖೆಗೊತ್ತುವ 
ತರಗೆಲೆಗಳ 
ಮೊನಚು ತುದಿ ...

ಉಸಿರಿಗೆ 
ತಾಕಿ 
ನಡೆದುಬಿಡುವ 
ತಂಗಾಳಿಯ
ನಿಶಬ್ಧ ಮೌನ...

ಬೆರಳುಗಳ 
ನಡುವೆ 
ಸರಕ್ಕನೆ ಜಾರುವ 
ಗುಂಡಿಗೆಯಂತ 
ಒರಟುಗಲ್ಲು ...

ಕಲ್ಬೆಂಚಿನ
ಮೇಲೆ 
ನೆನಪುಗಳ 
ಗೀಚುತ್ತ ....  
"ಮುನಿದರೂ ಸೈ  
... ನನ್ನನ್ನಗಲಿ  ಹೋಗಬೇಡ" 

(RS)

Comments

 1. ಅಂತೂ ಈಗ ನಿಮ್ಮ ಬ್ಲಾಗಿಗೂ ಕಾಲ ಬಂತು!
  .ನವಿರಾದ ಕಾವ್ಯದ ಮೂಲಕ ನಮ್ಮ ಯವ್ವನವನ್ನೂ ಮರುಕಳಿಸಿದ ತಾವೇ ನಮಗೆ ಬಹು ಮಾನ್ಯರು..

  ಉದ್ಯಾನವನದ ಬೆಂಚು ಬೆಂಚನೂ ಕದಕಿದರೆ ಕೋಟಿ ಪ್ರೇಮ ಕಾವ್ಯಗಳು.

  ಹಲವು ಒಲವೇ ಸಾಕ್ಷಾತ್ಕಾರದ ಪುಣ್ಯದ ಫಲಕೆ ಮಕ್ಕಳಿರಲವ್ವ ಮನೆ ತುಂಬ, ನಮ್ಮ ಸಂಸಾರ ಆನಂದ ಸಾಗರ... ಕಡೆ ಕಡೆಗೆ ಮನೆಯೇ ಮಂತ್ರಾಲಯ.

  ಕೆಲವು ಮೊಳಕೆಯಲೇ ಅಸುನೀಗುವವು... ಕೆಲವು ಫಲ ಬಿಡು ಹೊತ್ತಿಗೆ ಗ್ರಹಚಾರ ನೆರೆಯೋ... ಪ್ರೇಮ ಬರಗಾಲವೋ.. ನಿಟ್ಟುಸಿರ ಕಾವು....

  ಅದು ಮದರಾಸೋ ಇಲ್ಲ ಬೆಂಗಳೂರೋ ಗುಲ್ಮೊಹರ ಗಿಡ ನಿರ್ಭಾವ ಸಾಕ್ಷಿ... ಕೊಡವುತ್ತ ಹಣ್ಣೆಲೆ ತಾನು ಕಾಯುತ್ತೆ ಹೊಸ ಜೋಡಿಯ...

  ಕಲ್ಲು ಬೆಂಚಿಗೆ ಮಾತ್ರ ಅಂಡುಗಳ ಊರು ಸೌಭಾಗ್ಯ!

  ReplyDelete
  Replies
  1. BP Ji, thank you so much for your read and comments :)
   Punyakke aa benchugalige baayillavashte ....

   Delete
 2. ತಂಗಾಳಿಯಲ್ಲಿ ತೇಲಿ ಬರುವ ಗುಲ್‍ಮೊಹರಿನ ಪಕಳೆಗಳಂತೆಯೇ, ನಿಮ್ಮ ಕವನವೂ ನವಿರಾಗಿ ತೇಲಿ ಬಂದಿದೆ!

  ReplyDelete
  Replies
  1. Sir, Namasthe....
   Odige pratikriyege namana....

   Delete
 3. nice kavana roopa . kallu benchina naviraada bhaava gala abhivyakthi :)

  ReplyDelete

Post a Comment

Popular posts from this blog

ಹೀಗೊಂದು ಮಹಿಳಾ ದಿನಾಚರಣೆ!!

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ

ನಸುಕಿನ ಕನವರಿಕೆಗಳು