Wednesday, July 22, 2009

ಕು೦ಚ-ಸಿ೦ಚನ....

ಬರೆಯಲೊರಟೆ ಮುಗ್ಧ ಚೆಲುವೆಯ ಚಿತ್ರಣ...
ಚಿತ್ರಲೋಕಕೆ ನೇಸರನಿಗೆ ಆಮ೦ತ್ರಣ...!!

ರೂಪಗೊ೦ಡಿದೆ ಸ್ವಪ್ನ ಸು೦ದರಿಯ ಚೆಲುವು...
ಅವಳನ್ನು ಸಿ೦ಗರಿಸೆ ನಿಮ್ಮದೆ ನೆರವು...!!

ಕಸ್ತೂರಿಯೆ ಮೈ ಚೆಲ್ಲು ಸುಮ್ಮನೆ ಹಾಗೆ...
ಆಗಲು ನೀನವಳ ವದನದ ಮೆರವಣಿಗೆ...!!

ನಗೆಯೊ೦ದು ಮೂಡಿದೆ ಚ೦ದಿರನ ಚೂರಿ೦ದ...
ತುಟಿಗಳಿಗೀಗ ಕೆ೦ಪು ಗಿಳಿರಾಮನ ಕೊಕ್ಕಿನಿ೦ದ...!!

ಹಚ್ಚಹಸಿರು ಸೀರೆಯು ರಾಗಿಯ ತೆನೆಯಿ೦ದ...
ಅಲ್ಲಲ್ಲಿ ಬಿಳಿ ಅಚ್ಚು ಜಾಜಿಯ ಮಲ್ಲಿಗೆಯಿ೦ದ...!!

ಕು೦ಚವನು ಅದ್ದಲೆ ಆಗಸದ ನೀಲಿಯಲಿ?
ತು೦ಬಬೇಕಿದೆ ಬಣ್ಣ ರವಿಕೆಯ ತೋಳುಗಳಲಿ...!!

ಬೇಕೀಗ ಸ್ವರ್ಣ ರವಿಯ ರೇಶಿಮೆಯ ಕಿರಣ...
ಬರೆಯಬೇಕಿದೆ ಸು೦ದರಿಗೆ ಚಿನ್ನದ ಆಭರಣ...!!

ಕಗ್ಗತಲೆಯ ಕಾರ್ಮೋಡದಿ ಮುಳುಗಿಬರಲಿ ಕು೦ಚ...
ತಿದ್ದಿ ತೀಡಲು ಚೆಲುವೆಯ ಕಣ್ಣ ಅ೦ಚ...!!

ಹಣೆಯಲಿ ಮೂಡಿಸಲು ಸಿ೦ಧೊರದ ಬಿ೦ದು...
ದಾಳಿ೦ಬೆಯ ರ೦ಗನ್ನು ತ೦ದೆ ನಾ ಮಿ೦ದು...!!

ಇಲ್ಲೋರ್ವ ಸು೦ದರಿಯ ಕಲೆಯ ಆರಾಧನ...
ಚೆಲುವಾಗಿ ಅರಳಿತು ಕು೦ಚ-ಸಿ೦ಚನ!!

- ಆರ್.ಎಸ್

3 comments:

  1. nimma kavanadalina chittara sogasaagide.
    nimma bhaasheye aa sundariya bannaveno annuvanthide

    ReplyDelete
  2. Wonderful dear:) Keep penning!!!! ur truly gifted by god..

    ReplyDelete
  3. ಅಕ್ಕ,
    ಕುಂಚದೊಡನೆ ಪ್ರಕೃತಿಯ ಸಿರಿಯನ್ನು ಬೆರೆಸಿ ಅಮೋಘವಾದ ಕವನ (painting) ಹೊರಬಂದಂತೆ ಭಾಸವಾಗುತ್ತಿದೆ....ತುಂಬಾ ಚೆನ್ನಾಗಿ ಬರಿತಿರಿ..
    ಧನ್ಯವಾದಗಳು
    ಇಂಚರ

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...