ಉಳಿದದ್ದು ನನಗೆ ಬಿಡು ....

ಮುಂಜಾವು...ಮಂಜು .....
ಇಲ್ಲಿದೆ ನವಿರ ಭಾವ...ಎಲೆ-ಮರ-ಗಿಡ-ಹೂ-ದುಂಬಿಗಳ ತಾಜಾ ಉಸಿರಾಟ
ಮುದ್ದು ಚಿಲಿ-ಪಿಲಿಗಳ ಸಣ್ಣ ದನಿಯ ಪಿಸುಮಾತು
ಆಗಷ್ಟೇ ಜನಿಸಿದ ಎಳೆ ಬಿಸಿಲುಹಸಿರು,
ಹೊಳೆಯುತ್ತಿರುವ ಬಿಂದು
ಎಲ್ಲೆಡೆ ನವೋನ್ಮಯ .........
ಆಹಾ! ಹೊಸ ಹುರುಪಿನ ಈ ದಿನ
ನನ್ನ ಜಗತ್ತೆಲ್ಲ ಅರಳಿದ ನವೊಲ್ಲಾಸ
ಇದಕೆಲ್ಲ ಯಾರು ಕಾರಣ
ನಿನ್ನ ಮೋಹಕ ನಸುನಗೆ?
ಆಗಿದ್ದಲ್ಲಿ, ಹೀಗೆಯೇ - ದಿನಕೊಮ್ಮೆ , just ಒಮ್ಮೆ
ನನ್ನ ನೋಡಿ ನಕ್ಕುಬಿಡು ....
ಉಳಿದದ್ದು ನನಗೆ ಬಿಡು ....

Comments

  1. ಸುಂದರ ಸಾಲುಗಳು...

    ReplyDelete
  2. ಮುದ್ದು ಚಿಲಿ-ಪಿಲಿಗಳ ಸಣ್ಣ ದನಿಯ ಪಿಸುಮಾತು
    ಆಗಷ್ಟೇ ಜನಿಸಿದ ಎಳೆ ಬಿಸಿಲುಹಸಿರು,
    ಹೊಳೆಯುತ್ತಿರುವ ಬಿಂದು... nice ...

    ReplyDelete

Post a Comment

Popular posts from this blog

ಹೀಗೊಂದು ಮಹಿಳಾ ದಿನಾಚರಣೆ!!

ನಸುಕಿನ ಕನವರಿಕೆಗಳು

ದಿ ಪ್ರೊಫೆಷನಲ್ - ಬದುಕಿನ ಕೊನೆ ಪುಟಗಳಲ್ಲಿ