Monday, November 28, 2011

ಭಾವಸಿಂಚನ ... stage ಮೇಲೆ..

3K ಸಮುದಾಯದ ಚೊಚ್ಚಲ ಪ್ರಕಟಣೆ... ಕವಿಗಳಲ್ಲದವರ ಕವನಗಳ ಗುಂಜನ ಭಾವಸಿಂಚನ
ಈ ಸಮುದಾಯ ನನ್ನ ಮನಸಿಗೆ ತುಂಬಾ ಹತ್ತಿರ. ಎಲ್ಲರೂ ರೂಪಕ್ಕ ಅಂತ ಕರೆಯೋದು ಇದಕ್ಕೆ ಕಾರಣ ಇರಬಹುದು....
ಕಳೆದುಕೊಂಡ ಪ್ರೀತಿಯ ತಮ್ಮನ ನೆನಪು ಎಂದಿಗೂ ಆರದು. ಅವನು ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ ಅಂತ ಸಾರಿ ಸಾರಿ ಹೇಳೋಕೆ, 3K ಯ ಗೆಳೆಯರೆಲ್ಲರಿಂದಲೂ ರೂಪಕ್ಕ ಅಂತ ಕರೆಸಿಕೊಂಡು ಅವನು ನನ್ನೊಡನೆ ಇದ್ದಾನೆ ಅಂತ್ ಸಂತೃಪ್ತಳಾಗೋಕೆ !

ಇನ್ನು 26 ನವೆಂಬರ್ 3K ಯ ಇತಿಹಾಸದಲ್ಲಿ ಇದೊಂದು ಸುದಿನ. ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದುಂಡಿರಾಜ್ ಸರ್, ಕವಿರಾಜ್ ರವರು ಹಾಗು ನನ್ನ ಸ್ನೇಹಿತರು ಲೇಖಕರು ಆದ ಮಂಜುನಾಥ್ ಕೊಳ್ಳೆಗಾಲ ... ಇವರಿಂದಲೇ ಪುಸ್ತಕದ ಬಿಡುಗಡೆ ಆಗಿದ್ದು. ಭಾವಸಿಂಚನದ ಸಾರ್ಥಕತೆ ಯಾದದ್ದು.

3K ತಂಡ ಇದಕ್ಕಾಗಿ ಪಟ್ಟ ಪರಿಶ್ರಮ ನನಗೆ ಗೊತ್ತಿದೆ! ಇವರನ್ನ ನನ್ನ ಅಣ್ಣ ತಮ್ಮಂದಿರು ಅಂತ ಹೇಳಿಕೊಳ್ಳೋಕೆ ನನಗೆ ಹೆಮ್ಮೆ. ಆ ರೀತಿಯ ಒಂದು ಬಾಂಧವ್ಯ 3K ಶೃಷ್ಟಿಸಿದೆ!
--------------
ಇನ್ನು ಹೇಳಿಕೊಳ್ಳೋಕೆ ಆಗದ ಒಂದು ಸಂದಿಗ್ಧವೆಂದರೆ : ಅತಿಥಿಗಳೊಡನೆ stage ಮೇಲೆ ಕೂರುವುದು! ಅವರ ಮುಂದೆ ಕೂರುವ ಯೋಗ್ಯತೆ ಇರಲಿ, ನಿಲ್ಲುವ ಅರ್ಹತೆ ಸಹ ಇಲ್ಲದವಳು. ಎಂಥದೋ ಮುಜುಗರವಾಗ್ತಿತ್ತು, ಇರದ ಗಾಂಭೀರ್ಯ ತಾನಾಗೆ ಬಂದು ಮುಖದ ಮೇಲೆ ಬಂದು ಕುಳಿತಿತ್ತು... ದೇವರೇ ನನ್ನ ಸ್ನೇಹಿತರು ಇದಕ್ಕೆ ಬಲವಂತ ಮಾಡದೆ ಹೋಗಿದ್ದರೆ ನಾನು ನಾನಾಗೆ ಇರಬಹುದಿತ್ತು... ಇದೆಂಥ ಸಂಕಟ .... ಅಲ್ಲಿ ಹೇಗೆ ಕೂರಬೇಕು.. ಕೈ ಕಟ್ಟಿಕೊಂಡು ಕೂರಬೇಕ? ಕೈ ಬಿಟ್ಟು ಕುಂತರೆ ತಪ್ಪಾಗುತ್ತ... ಇಲ್ಲಸಲ್ಲದ confidence ತುಂಬಿಸಿಕೊಂಡು.... ಅಲ್ಲಿ ಇಲ್ಲಿ ನೋಡಿಕೊಂಡು ತೋರ್ಪಡಿಸದೆ ವಿಶ್ವ ಪ್ರಯತ್ನ ಮಾಡುತಿದ್ದೆ... ಇನ್ನು ಉಳಿದಂತೆ - Hall ನಲ್ಲಿ ಕುಂತ ಜನರ ಪೈಕಿ - ಯಾರಾದರು "ಈ ಹುಡುಗಿಯನ್ನೆಕೆ ಇಲ್ಲಿ ಕೂರಿಸಿದರು" ಅಂತ ನಗಾಡಿರ್ತಾರ...

ಈ ರೀತಿಯ ಕಾರ್ಯಕ್ರಮ ನನಗೂ ಹೊಸತು... blog ಪ್ರಪಂಚಕ್ಕೆ ಹೊಸಬಳಲ್ಲದಿದ್ದರು ಹೆಚ್ಚಾಗಿ ಬ್ಲಾಗಿಸುವುದು ಆಗದು... ನನಗೆ ಸಮಯದ ಕೊರತೆ .... ಕಾರ್ಯಕ್ರಮಕ್ಕೆ ಬಂದಂಥ ಹಿರಿಯರಲ್ಲಿ Manikanth AR, Prakash ಹೆಗ್ಡೆ ಯಂಥವರು ... ಇವರ ಮುಖ ಪರಿಚಯ ನನಗಿಲ್ಲ! ಇವರ ಬಗ್ಗೆ ಕೇಳಿದ್ದೆ ಆದರು ಇವರ ಪರಿಚಯವಾದಾಗಲು ನನಗೆ ಗಲಿಬಿಲಿ .... ಇವರೇನಾ ಅವರು... ಅಥವಾ ನಾನು ಕೇಳಿಸಿಕೊಂಡಿದ್ದು ಸರಿಯೇ... ಯಾವುದಕ್ಕೂ ಹೇಗೆ react ಮಾಡೋದು ಅಂತ ತಿಳಿಯದೆ ಒದ್ದಾಡಿದ್ದುಂಟು...

ಇದೆಂಥ ಪರಿಸ್ಥಿತಿ - ಮುಂದೆ ಈ ರೀತಿ ಆಗಬಾರದು - ಯಾರು ಎಷ್ಟೇ ಬಲವಂತ ಮಾಡಿದರು stage ಹತ್ತುವ ಸಾಹಸ ಮಾಡ ಬೇಡ ಅಂತ ನನ್ನ ಮನಸಿಗೆ ನಾನೇ ಸಾಂತ್ವನ ಹೇಳಿಕೊಳ್ಳಬೇಕಾಯ್ತು... "ನೋಡ್ರಪ್ಪ : ಇನ್ನು ಮುಂದೆ ನನಗೆ ಯಾವುದಾದರು chocolate ಹಂಚುವ ಕೆಲಸಗಳಿದ್ದರೆ ಮಾತ್ರ ಹೇಳಿ, ಏನಾದ್ರೂ ಮೈಕ್ ಹಿಡಿದು ಮಾತನಾಡಲು ಹೇಳಿ, ಆದರೆ ಅತಿಥಿಗಳೊಡನೆ ಕೂರಲು ಮಾತ್ರ ಹೇಳಬೇಡಿ.. "
ಅಲ್ಲಿ ಅಮ್ಮ - ಚಿಕ್ಕಪ್ಪ ಎಲ್ಲರೂ ಕುಳಿತು ನೋಡುತಿದ್ದಾರೆ... ಅವರಮುಂದೆ ನಾನು ಇಲ್ಲಿ ಕುಳಿತಿರುವುದು ಯಾವ ಚಂದ!
ಹೇಗೆ ಅನ್ನಿಸಿತ್ತೋ ಹಾಗೆ ಬರೆದಿರುವೆ... ಅಷ್ಟೇ !

5 comments:

  1. ಏನ್ ರೂಪಕ್ಕಾ ಇದು..? ನಿಮ್ಮಂಥವರಿಗೆ ಇಂತಹ ಅಳುಕು ಸಲ್ಲದು...!! ನೀವೇ ಇಷ್ಟೊಂದ್ panic ಆದ್ರೆ ನಮ್ಮಂತವರ ಗತಿ ಏನೂ..? but still ನಿಮ್ಮ ಆ ಅಳುಕು-ಅಂಜಿಕೆಗಳ ಕುತೂಹಲಭರಿತ ಭಾವಗಳನ್ನ ಸೊಗಸಾಗಿ ಹರಿಬಿಟ್ಟಿದ್ದೀರಾ..!! ತಮಾಷೆ ಅಂದ್ರೆ, ಇಂತಹ ಸಾಲುಗಳಿಗೆ ಜನ್ಮವಿತ್ತ ಅಂತಹ "Golden Pen" ನಿಮ್ಮಲ್ಲಿರಬೇಕಾದ್ರೆ, ಈ ಅಳುಕು-ಅಂಜಿಕೆಗಳೆಲ್ಲಾ ಬೇಕಾ...?

    ReplyDelete
  2. ಹಾಯ್ ರೂಪಕ್ಕ,

    ನಿಮ್ಮದೊಂದು ಬ್ಲಾಗ್ ಇದೆ ಅಂತ ಗೊತ್ತಿರ್ಲಿಲ್ಲ ....ಬ್ಲಾಗ್ ಹೆಸರು ಇಷ್ಟ ಆಯಿತು ....ಇನ್ನಷ್ಟು ಬರೀರಿ.....

    Nannadondu chikka Blog ide...alligu banni....

    http://ashokkodlady.blogspot.com

    ReplyDelete
  3. hi Ashok.......
    samayada abhaava....
    thanks for visiting!....
    and more over, nanage bareyoku barolla... :-( adakke yavaagaadru ommomme heege "Parvaagilla baredubidu" anta nanage nanna manassu force maadidaaga ee reeti bareeteeni!
    odovru swalpa kashtapattu adjust maadkobeku ashte :-)

    ReplyDelete
  4. hi...
    Raghav....
    ha ha neeve mecchabeku ee baravaNigena...
    astakkoo ishtu saaladu antha - monne mangaloorinalloo koorsidru...nanna gubbacchi hrudayavantu panjaradolage aagashte hodante vila vila oddaadtittu.
    Nanna life-career nalli adeshto stage-gaLa mele hatti anubhava aagiddaru.... ee-hiriya kannada saahitigaLamundhe naanondu haaralu baarada aagashte janisida gubbacchiya haage.... aa-confidence yaavaaga barutto gottilla...
    nija heLbekandre, nanna manasinoLage yaarigaadru iNuki noDuva avakaasha sikkare tiLitade hegirteeni antha....

    ReplyDelete
    Replies
    1. nija heLbekandre, nanna manasinoLage yaarigaadru iNuki noDuva avakaasha sikkare tiLitade hegirteeni antha....
      ಪ್ರಪಂಚದ ಎಲ್ಲಾ ಹೆಣ್ಮಕ್ಕಳ ಹಳೇ ಹೃದಯಗೀತೆನೇ ಇದು..!!
      ಅದನ್ನೇ ನೀವೂ ಹಾಡ್ತಿದಿರಾ.. ಕ್ಯಾಸೆಟ್ ತುಂಬಾ ಹಳೆದು.. ಟೇಪ್-ರೆಕೊರ್ಡರ್ ಮಾತ್ರಾ ಹೊಸಾದು..!!
      hehehehehehe :D
      .
      Well, roopakka inthaa ondu "ವ್ಯಾಕ್ಯೂಮ್", "ಶೂನ್ಯಭಾವ" ಸೃಷ್ಟಿ ಆಗೋದು ಸಹಜ...
      neevu gubbachhi na..>? Good Joke..
      inthaa innashtu jokes idre kalsi..
      ondsaari nakkbittu saaYtini..!! :D

      Delete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...