Wednesday, November 21, 2012

ಕೊನೆಗೂ ಮನೆಯಲ್ಲಿದ್ದ ಕಸ(ಬ) ಗುಡಿಸಿ ಎಸೆದೆವು!!


ಇಲ್ಲೊಬ್ಬ ಸಂತಸದಿಂದ ಕುಣಿದಿದ್ದಾನೆ!

ಮತ್ತೊಬ್ಬ "ಹಾಲು-ಕುಡಿದಂಗಾಯ್ತು" ಎಂದ

"ಸಿಹಿ ಉಂಡೇ ಬಿಡುವೆ" ಅಂದನವನು

"ಈ ದಿನ ನನ್ನದೇ ಔತಣ" ಎಂದನಿವನು

"ಅಬ್ಭಾ...ಅಂತೂ ಏನೋ ಒಂದು ಗತಿ ಆಯ್ತು"

"ಎಂಥ ಖುಷಿ ಕೊಡುವ ಸುದ್ದಿ" ಎಂದರೆ ಇನ್ನೊಬ್ಬ.....

" ***** " ಉಸುರಿದ ಅವನೊಬ್ಬ

"ಪಟಾಕಿ ಹೊಡಿಬೇಕನಿಸ್ತಿದೆ" ಮಗದೊಬ್ಬ ....

ಹೀಗೆ ಇನ್ನು ಅನೇಕಾನೇಕ ಪ್ರತಿಕ್ರಿಯೆಗಳು!!


ಸಾವನ್ನು ಸಂಭ್ರಮದಿಂದ ಆಚರಿಸುವ ಈ ಪರಿ ನಾನಂತೂ ನನ್ನ ಜೀವನದಲ್ಲೇ ಕಂಡಿದ್ದಿಲ್ಲ!

ಈ ದಿನ ಪ್ರತಿಯೊಬ್ಬ ಭಾರತೀಯನೂ ಸಂಭ್ರಮದಿಂದ ಸಾವನ್ನು ಆಚರಿಸಿದ್ದಾನೆ....!

ಕಸಬ ಸತ್ತ.......!

ಎಲ್ಲರ ಮುಖದಲ್ಲೂ ನಗು!

ಕಸಬನನ್ನು ತಾನೇ ಕೊಂದವನಂತೆ ತೋರುವ ಕಿಚ್ಚೆದೆಯ ವೀರನ ಗಮ್ಮತ್ತು!

ನನ್ನ ದೇಶದ ಯಾವ ವೇದ-ಪುರಾಣ-ಧರ್ಮಗಳಲ್ಲಿಯೂ ಸಾವನ್ನು ಸಂಭ್ರಮದಿಂದ ಆಚರಿಸಿ ಎಂದು ಬರೆದಿಲ್ಲ. ಆದರೆ ಇದು ಅಂತಿಂಥ ಸಾವಲ್ಲ. ದೇಶಪ್ರೇಮ ಎನ್ನುವುದು ಈ ಎಲ್ಲಾ ವಿಧಿ, ವೇದ, ಪುರಾಣ, ಧರ್ಮಗಳಿಗಿಂತ ಮಿಗಿಲಾದದ್ದು ಎನ್ನುವುದಕ್ಕೆ ಈ ಸಾವಿನಿಂದ ಹೊಮ್ಮುತಿರುವ ಭಾವನೆಗಳೇ ಸಾಕ್ಷಿ.......



ಈ ಭಾವನೆಯಲ್ಲಿ ಮಿಶ್ರ ಅನಿಸಿಕೆಗಳಿಗೆ, ಅನ್ಯ ಅಭಿಪ್ರಾಯಗಳಿಗೆ ಎಡೆಯಿಲ್ಲ, ಜಾತಿ - ನೀತಿ - ಪಜೀತಿಗಳಿಲ್ಲ! ಎಲ್ಲರಲ್ಲೂ ಹಾಗು ಎಲ್ಲೆಲ್ಲರಲ್ಲೂ ಅಡಗಿರುವ 26/11ನ ಕಪ್ಪು ಛಾಯೆ. ನನ್ನ ದೇಶಕ್ಕೆ ಲಗ್ಗೆಯಿಟ್ಟು ನನ್ನ ಜನರನ್ನೇ ಕೊಂದವನ ಮೇಲಿರುವ ಉದ್ರಿಕ್ತ ಆವೇಶ. ನಾನು, ನನ್ನದು, ನನ್ನಿಂದ ಎನ್ನುವ ಅಹಂಗಳಿಗಿಂತಲೂ ಅತೀ ಅತೀ ದೊಡ್ಡದಾದ ಭಾವನೆಯಿದು.

ಈ ಸಾವು ಮರೆಯುವನ್ತದ್ದಲ್ಲ! ನಮ್ಮ ಕಾನೂನು, ನಮ್ಮ ಸರ್ಕಾರದ ನಡುವೆ ಕುದಿಯುತ್ತಿದ್ದ ನೋವುಂಡ ಜೀವಗಳ ಸೇಡಿಗೆ ಇದು ಉತ್ತರ. ಇವನ ಹಿಂದೆ ಅಡಗಿದೆ ಸರ್ಕಾರಗಳ ಮುಖವಾಡ, ರಾಜಕೀಯ ಇರಾದೆ, ತಮ್ಮ- ತಮ್ಮ ಪಕ್ಷಗಳಿಗೆ ಜನರ ಅಭಿಮತಗಳಿಸಲು ಯತ್ನಿಸುತಿದ್ದ ಎಣಿಕೆಗಳು! ಇವನಿಗಾಗಿ ನಮ್ಮೆಲ್ಲರ ಹಣ ವ್ಯರ್ಥವಾದದ್ದು ಎಷ್ಟೋ. ಡೋಲಾಯಮಾನದಂತೆ ನ್ಯಾಯ ಸಮ್ಮತಿಗಳ ನಡುವೆ ತೂಗುತಿದ್ದ ನಮ್ಮ ಕಾನೂನು.

ಇವೆಲ್ಲದರ ನಡುವೆ ಜನಸಾಮಾನ್ಯನ ಸಿಟ್ಟು ಹೆಪ್ಪುಗಟ್ಟಿ ಗೂಡಾಗಿ ಹೇಳಲು ಆಗದೆ ಅನುಭವಿಸಲು ಆಗದೆ ಪಟ್ಟ ರೋದನೆ. ಬದಲಿಗೆ ಜನಸಾಮಾನ್ಯನ ಆಕ್ರೋಶವೆಲ್ಲ - ಲೇಖನಗಳಾಗಿ, ಕವನಗಳಾಗಿ, ನಗೆಹನಿಗಳಾಗಿ, ವಿಡಂಬನೆಗಳಾಗಿ, ವ್ಯಂಗ್ಯಚಿತ್ರಗಳಾಗಿ, ಚರ್ಚೆಗಳಾಗಿ ಹರಿದಾಡಿದ್ದು ತಿಳಿದೇ ಇದೆ.

ಇವನ ಸಹಪಾಟಿಯೊಂದಿಗೆ ಕಿಂಚಿತ್ತು ಮರುಕವಿಲ್ಲದೆ ೧೬೫ ಜನರನ್ನು ಮಾತ್ರ ಕೊಂದವನಲ್ಲ, ಅವರ ಸಂಸಾರಗಳನ್ನು ಕೊಂದವ, ಅವರ ಕನಸುಗಳನ್ನು ಕೊಂದವ, ಅವರ ಜೀವನದ ದಿಕ್ಕುಗಳನ್ನೇ ಬದಲಾಯಿಸಿದವ. ದೇಶ ದೇಶವೇ ನಡುಗಿತ್ತು, ಮರುಗಿತ್ತು. ಇವನ ಬಂದೂಕಿಗೂ, ತಮ್ಮ ಜೀವಕ್ಕೂ ಹೆದರದೆ ದಾಳಿಗಿಳಿದ ನಮ್ಮ ಪೋಲೀಸರ ಪಡೆ ಕಡೆಗೂ ಇವನೊಬ್ಬನನ್ನು ಹಿಡಿದಾಗ ನನ್ನ ದೇಶದ ಕೋಟಿ ಕೋಟಿ ಜನರ ರೋಮ ರೋಮವೂ ಆವೇಶದಿಂದ ಕುದಿಯುತಿತ್ತು.

ತಡವಾದರೂ ಸದ್ದಿಲ್ಲದೇ ಅವನ ಸಾವು ಸಂಭವಿಸಿದೆ, ಉರಿವ ಬೆಂಕಿಯ ಮೇಲೆ ನೀರು ಸುರಿದಂತೆ....ಹಬೆ ಇನ್ನೂ ಆರಿಲ್ಲ. ಇವನ ತಂದೆ-ತಾಯಿ, ಬಂಧು-ಬಳಗ, ಊರು-ಕೇರಿ, ದೇಶಕ್ಕೆ ಇವನು ಬೇಕಿಲ್ಲ.

ಒಬ್ಬ ಕಸಬ ಸತ್ತರೆ ನೂರಾರು ಕಸಬರು ಹುಟ್ಟಿ ಬರುತ್ತಾರಂತೆ, ಆದರೇನಂತೆ ...ಯಾವ ಹುಳುವನ್ನೂ ಬಿಡುವ ಮಾತೇ ಇಲ್ಲ, ತಡವಾದರೂ ಬಂದೆ ಬಂತು ಸಾವು .....ಇದು ಭಾರತ!



20 comments:

  1. ನಿಮ್ಮ ಎಲ್ಲಾ ಸಾಲುಗಳು ಇನ್ನಷ್ಟು ದೇಶಭಕ್ತಿ ತುಂಬುವ ಹಾಗೆ ಮಾಡತ್ತೆ.... ನಾವು ಭಾರತೀಯರು , ಯಾರ ಸಾವನ್ನೂ ಸಂಭ್ರಮಿಸಲ್ಲ...ಆದರೆ ಈ ಒಂದು ಸಾವು ನಮ್ಮೆಲ್ಲರಿಗೂ ಖುಶಿ ನೀಡಿದೆ.. ಈ ವಿಶಯದ ಬಗ್ಗೆ ನಾನು ಲೆಖನ ಬರೆಯೋಣ ಎಣಿಸಿದ್ದೆ, ಅಷ್ಟರಲ್ಲೇ ನೀವೇ ಬರೆದಿರಿ... ನಿಮ್ಮ ಲೇಖನ ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗಿದೆ...

    ReplyDelete
  2. ರೂಪಾ, ಹಿಂಸೆ ಯಾವುದಕ್ಕೂ ಉತ್ತರವಲ್ಲ... ಅದರಲ್ಲೂ ಸೃಷ್ಠಿಯ ಅತಿ ಉನ್ನತ ಶ್ರೇಣಿಯ ಪ್ರಾಣಿಗಳಾಗಿದ್ದುಕೊಂಡು ಭಾವನೆಗಳ ಸ್ಪಂದನೆಗಳ ಗೂಡಾಗಿರುವ ನಾವು ಅಮಾನುಷವಾಗಿ ಮನುಹತ್ಯೆ ನಡೆಸುವುದು ಅಕ್ಷಮ್ಯ ಅಪರಾಧ. ವಿಪರ್ಯಾಸ ಎನಿಸಿದ್ದು, ಈ ಕೃತ್ಯದಲ್ಲಿ ಪಾಲುದಾರರಾಗಿದ್ದ ಬಹುಶಃ ಇವನಿಗಿಂತ ಕಡಿಮೆ ಕೊಲೆ ಮಾಡಿರಬಹುದಾದ ಇವನ ಜತೆಗಾರರನ್ನು ಅಂದೇ ಸೈನಿಕರು ಗುಂಡಿಟ್ಟು ಕೊಂದರು....ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಕಸಬನಿಗೆ ಅವರಿಗಿಂತ ನಾಲ್ಕು ವರ್ಷ ಹೆಚ್ಚು ಜೀವಿಸಲು ಅವಕಾಶ ಸಿಕ್ಕಿದ್ದು.... ಚನ್ನಾಗಿದೆ ಲೇಖನ

    ReplyDelete
  3. ಮಠ ಚಿತ್ರದಲ್ಲಿ ಒಂದು ಸಂಭಾಷಣೆ ಇದೆ."ಬ್ರಹ್ಮನಿಗೂ ನಿನಗೂ ಏನು ವ್ಯತ್ಯಾಸ.."..ಇದು ಬಹಳ ಚುಟುಕು ಪ್ರಶ್ನೆ.ಆದ್ರೆ ಅದರ ಅರ್ಥ ನಮ್ಮ "ಪರ್ಪಂಚ"ದಷ್ಟೇ ವಿಶಾಲ..ಜೀವ ಕೊಡಲು ಯೋಗ್ಯತೆ ಇಲ್ಲದ ಮನುಜ ಮತ್ತೊಬ್ಬರನ್ನು ಕೊಲ್ಲುವುದು...?...
    ಲೇಖನ ಸುಂದರವಾಗಿದೆ.
    ಇಲ್ಲಿ ಜಾತಿ, ನೀತಿ, ಧರ್ಮ.. ಅಲ್ಲ ಮುಖ್ಯ ಮನುಜ ಕುಲ ಮುಖ್ಯ...ನಾನು ನಿಮ್ಮಂತೆ..ನೀವು ನಮ್ಮಂತೆ ಎನ್ನುವ ಭಾವ ಬೆಳೆದಾಗ ಎಲ್ಲವು ಸುಂದರ..ಜಗವೇ ಸುಂದರ...

    ReplyDelete
    Replies
    1. Yes Srikanth,
      Nimma abhipraya, anisike ge swaagatha.
      Thanks for reading.

      Delete
  4. ಕಡೆಯ ಸಾಲುಗಳು ಭಾರತದ ದೈತ್ಯ ಶಕ್ತಿಯ ಸಾದೃಶ ವರ್ಣನೆ.

    ಅಯ್ಯೋ ಅನ್ನುವುದೇ ನಮ್ಮ ತಪ್ಪು, ಇಲ್ಲಿ ನುಸುಳದ ಕ್ರಿಮಿಗಳೇ ಇಲ್ಲ.

    ಉತ್ತಮ ಬ್ಲಾಗ್ ಬರಹ ಇದು.

    ReplyDelete
  5. ರೂಪ,

    ನಮ್ಮ ದೇಶದ ಮನಸುಗಳ ಭಾವನೆಗಳನ್ನು ನಿಮ್ಮ ಲೇಖನದಲ್ಲಿ ನೋಡಿ ಬಹಳ ಹೃದಯ ಮುಟ್ಟಿದೆ.....super ಬಿಡಿ....

    ಕಸಬ್ ಖತಂ...ಒಂದು ಅವಿಸ್ಮರಣೀಯ ಘಳಿಗೆ
    ಈ ಕಸಬ್ ಖತಂ ಬೇರೆ ಕಸಬರಿಗೆ ಒಂದು ಸೂಕ್ತವಾದ ಚಾಟಿ ಏಟಿನ ಪಾಠ.....
    ಮಿತಿ ಮೀರಿ ಎಲ್ಲೇ ದಾಟಿದರೆ ನಿದಾನಿಸಿಯಾದರು ಸಿಕ್ಷಿಸುವ ನಮ್ಮ ಪರಿ ಇದು
    ನಿದಾನಿಸಿದೀವಿ ಎಂದರೆ ಹೆದರಿದ್ದೀವಿ ಎಂದರ್ಥವಲ್ಲ.
    ನಾವು ರಾಮನ ಅನುಯಾಯಿಗಳು, ಕೃಷ್ಣನ ಪಾಲಕರು ಕ್ಷಮಿಸಿ ನೋಡಿದೆವು, ಆದರು ಕ್ಷಮೆಗೆ ಅರ್ಹನಲ್ಲನಾದ
    ಕೌರವರೂ ಸತ್ತರು, ರಾವಣನು ಸತ್ತನು, ಕಸಬನು ಖತಂ ಆದ ...

    ಇಂತ ದೇಶ ದ್ರೋಹಿಗೆ - ಯಾವ ದೇಶಪ್ರೇಮಿಯು ವಕಾಲತ್ತು ವಹಿಸಲಾರ.....
    (Sorry, nimma system nindale operate maadi post maadidakke)......

    ಗೋಪಿ


    ReplyDelete
    Replies
    1. gopi,
      thanks for your opinion....
      i understand your remarks.
      Nimmade ondu opinion, nanna modala saalugalalli ide
      And Sir, no excuse, next time nanna PC yinda operate maadidare :)

      Delete
  6. ಉತ್ತಮವಾದ ಲೇಖನ,ರೂಪ.
    ಭಾರತದಲ್ಲಿ ಸಾವನ್ನು ಅನಾದಿಕಾಲದಿಂದಲೂ ಸಂಭ್ರಮದಿಂದ ಆಚರಿಸುತ್ತೇವೆ .ರಾವಣ, ಕುಂಭಕರ್ಣ,ಮಹಿಷಾಸುರ ಇವರೆಲ್ಲ ಸತ್ತ ದಿನವೇ ನಾವು ಹೋಳಿಗೆ ತಿಂದು ಹಬ್ಬ ಆಚರಿಸುವುದು.ದುಷ್ಟರು ಸತ್ತ ದಿನ ನಾವು ಧರ್ಮ ಸಂಸ್ಥಾಪನೆ ಆಯಿತು ಎಂದು ಹರ್ಷಪದುವುದು ಮೊದಲಿನಿಂದಲೂ ಇದೆ , ಅಲ್ಲವೇ ?

    ReplyDelete
  7. Srikanth....
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ......
    ನೀವು ಹೇಳಿದ್ದು ಸರಿ ....

    ReplyDelete
  8. Hii Roo -1 :D

    ನನ್ನ ದೇಶದ ಯಾವ ವೇದ-ಪುರಾಣ-ಧರ್ಮಗಳಲ್ಲಿಯೂ ಸಾವನ್ನು ಸಂಭ್ರಮದಿಂದ ಆಚರಿಸಿ ಎಂದು ಬರೆದಿಲ್ಲ. ಆದರೆ ಇದು ಅಂತಿಂಥ ಸಾವಲ್ಲ. ದೇಶಪ್ರೇಮ ಎನ್ನುವುದು ಈ ಎಲ್ಲಾ ವಿಧಿ, ವೇದ, ಪುರಾಣ, ಧರ್ಮಗಳಿಗಿಂತ ಮಿಗಿಲಾದದ್ದು.........

    ತುಂಬಾ ಇಷ್ಟವಾಗುವ, "ಕಸು"ವಿನಿಂದ ಕೂಡಿದ ಸಾಲುಗಳು :)

    ತುಂಬಾ ಉತ್ತಮವಾದ ಬರಹ :)

    ನಿಮ್ಮ ದೇಶಾಭಿಮಾನ ಸಾರುವ ಈ ಬರಹಕ್ಕೆ ನನ್ನದೂ ಒಂದು "ಉಘೇ ... ಉಘೇ ..."

    ಜೈ ಹಿಂದ್ :D

    ReplyDelete
    Replies
    1. hi Ra-1....

      oDidakke, mecchidakke, pratikriye neeDidakke - Vande Mataram :)

      Delete
  9. ಕಸ ಮನೆಯೊಳಗಿದ್ದರೂ ಕಸವೇ ಹೊರಗೆ ಎತ್ತಿ ಹಾಕಿದರೂ ಕಸವೇ..!!


    ಸೋಂಬೇರಿಗಳೋ.. ಇಲ್ಲ ಅನಾಗರೀಕರು ಮಾತ್ರ ಕಸವನ್ನ ಗುಡಿಸದೇ ಗುಡ್ಡೆ ಹಾಕಿಟ್ಟು ಕೊಂಡು ಕೊಳೆಸಲು ಕೂರೋದು..


    ೧೫೦+ ಜನರನ್ನ ನಿರ್ಮಾನುಶವಾಗಿ ಕೊಂದ ಕಸಬನಿಗೆ ಇಷ್ಟು ವರ್ಷ ವಿಚಾರಣೆ ನೆಪದಲ್ಲಿ ಪುಷ್ಟಿಯಾಗಿ ಸಾಕಬೇಕಾದ ಅವಶ್ಯಕತೆ ಏನಿತ್ತೋ ಕಾಣೆ..??


    ಇದೇ ಕೆಲಸವನ್ನ ನಮ್ಮ ಭಾರತೀಯ ಸಾಮಾನ್ಯ ಪ್ರಜೆ.. ಯಾರದಾರು ಸಾಮಾನ್ಯ ವ್ಯಕ್ತಿಯನ್ನ ಕೊಂದದ್ದಾಗಿದ್ದರೆ ಅವನಿಗೂ ಕೋಟಿ ಕೋಟಿ ಹಣ ಸುರಿದು ಉಪಚಾರ ಮಾಡುವ ಪ್ರಯತ್ನ ಬರುತ್ತಿತ್ತೆ..??


    ಹಂತಕನಾದರೂ ಯಾವ ಮುಖ್ಯ ಅತಿಥಿಗೂ ಸಾಟಿ ಇಲ್ಲದ ಜೀವನ ವಾಗಿತ್ತು ಅವನದ್ದು.. ಜೈಲಿನಲ್ಲಿ ಅನ್ನುವ ಸಣ್ಣ ವೆತ್ಯಾಸವೊಂದು ಬಿಟ್ಟರೆ..


    ಆವ ಸತ್ತಾಗ ಜನ ಖುಷಿ ಪಟ್ಟದ್ದಕ್ಕಿಂತ.. ಸರಕಾರವನ್ನ ಲೇವಡಿ ಮಾಡಿದ್ದೆ ಜಾಸ್ತಿ..


    ಹೇಗೋ ಕೊನೆಗೂ ಕಸಬನೆಂಬ ಕಸ ಮನೆ ದಾಟಿ ಮನೆ ಶುಭ್ರವಾಗಿದ್ದು.. ಸ್ವಲ್ಪ ನಿರಾಳಗೊಳ್ಳಬಲ್ಲ ಸಂಗತಿಯಷ್ಟೇ..


    ಆವ ಹುಳುಗಳನ್ನೂ ಭಾರತೆ ಮಾತೆ ಬಿಡುವುದಿಲ್ಲ ನಿಜ.. ಆದರೆ ದುಷ್ಟ ದುರುಳ ರಿಗೂ ರಾಜ ಉಪಚಾರ ಸಿಗುತ್ತದೆಂಬ ವಿಚಾರ ಹೊರಗೆಲ್ಲೂ ಹಾಸ್ಯವಾಗಬಾರದಷ್ಟೇ..

    ಆದ್ರೆ ಬರಹ ತುಂಬಾ ಇಷ್ಟ ಆಯಿತು ರೂಪಕ್ಕ.. :) :)

    ReplyDelete
    Replies
    1. Hi Satish,
      Thank you for the comments.
      Nimma maatu akshara saha sathya........
      namma deshada kaanoonu heegide!!

      Delete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...