Wednesday, May 15, 2013

ಶೋಕವಿಲ್ಲಿ ಸಂಭ್ರಮಿಸಬೇಕಿದೆ


ಈ ದಿನ ಎಂದಿನಂತಲ್ಲ, ವಿಶೇಷ! ಈ ದಿನಕ್ಕಾಗಿ ಎಷ್ಟು ತಿಂಗಳುಗಳಿಂದ ತಯ್ಯಾರಿ! ಕಳೆದ ಒಂದು ವಾರದಿಂದ ನಿದ್ದೆ ಮಾಡಿದ್ದು ಅಷ್ಟಕ್ಕಷ್ಟೇ. ನನಗೆ ಮಾತ್ರವಲ್ಲ - ಈ ದಿನಕ್ಕಾಗಿ ಕಾದು ಸಿದ್ದತೆ ನಡೆಸಿದ ಎಲ್ಲರಿಗೂ ಹೀಗೆ ಇರಬಹುದ? ನಿನ್ನೆ ಸಂಜೆ ಎಲ್ಲರಿಗೂ ಒಮ್ಮೆ ಫೋನಾಯಿಸಿ - ಎಲ್ಲವೂ ಸರಿಯಾಗಿದೆಯೆಂದು ತಿಳಿದಿದ್ದೆ. ಆದರೆ, ಕಾಡುತಿದ್ದ ವಿಷಯವೇ ಬೇರೆ.

ಜೀವನದ ದಿಕ್ಕುಗಳೆಲ್ಲ ಬದಲಾಗಿ ಇಂದಿಗೆ ಸರಿಯಾಗಿ ಐದು ತಿಂಗಳು. ರಾಯರ ಗುಡಿಯ ಪುರೋಹಿತರನ್ನ ನೋಡಿ, ಕೊಡಬೇಕಾದದ್ದು ಕೊಟ್ಟು ಮನೆಗೆ ಬಂದೆ. ವಡೆ ಪಾಯಸ ಇತ್ಯಾದಿ ಎಲ್ಲವು ದೀಪ ಹಚ್ಚಿದ ಫೋಟೋ ಮುಂದೆ - ನಂತರ ಮಹಡಿಯ ಮೇಲೆ. ಯಾರನ್ನು ಕಾಯಿಸದ ಜೀವಾತ್ಮವದು - ಇಷ್ಟವಾದ ತಿನಿಸು ಕಚ್ಚಿಕೊಂಡು ಹಾರಿದೆ. ಹಾ ಹೌದಲ್ವೆ ತಮಗೂ ತಿಳಿದಿರುವನ್ತದೆ ಈ ದಿನದ ವಿಶೇಷ. ನನಗಿನ್ನು ಸಮಯವೆಲ್ಲಿದೆ, ತಯ್ಯಾರಾಗಬೇಕಿದೆ! ಮನೆಯವರೆಲ್ಲ ಮತ್ತೆ - ಮತ್ತೆ ಹೇಳ್ತಿದ್ದು ಅದನ್ನೇ, "ಅತ್ಕೊಂಡು ಮುಖ ಊದಿಸ್ಕೊಂಡು ಫೋಟೋ - ಕ್ಯಾಮೆರ ಕಣ್ಣಿಗೆ ಬೂದುಗುಂಬಳ ಆಗ್ಬೆಕೇನು?". ಅದು ಕೂಡ ಸರಿಯೇ.

ಶೋಕವಿಲ್ಲಿ ಸಂಭ್ರಮಿಸಬೇಕಿದೆ! ... ಹತ್ತು ಜನರಿಗೆ ಸಮಜಾಯಿಸಬಹುದು, ಇಲ್ಲಿ ನೂರು ಮಂದಿ. ಇವರ ಹಣ ಖಾತೆಗೆ ಜಮೆಯಾಗಿ ತಿಂಗಳುಗಳೇ ಕಳೆದಿವೆ, ಇನ್ನು ತಡ ಮಾಡುವ ಹಾಗಿಲ್ಲ. ಈಗಾಗಲೇ ನನ್ನಿಂದಾಗಿ ಬಹಳಷ್ಟು ತಡವಾಗಿದೆ, ಇದು ನನ್ನ ತಂಡದ ಪ್ರತಿಷ್ಠೆ - ನನ್ನ ಬಾದ್ಯತೆ ಕೂಡ, ಹಿಂದಿರುಗುವ ಮಾತಿಲ್ಲ.

ಕಳೆದೈದು ತಿಂಗಳುಗಳಿಂದ ಸೀರೆಗಳ ಕಡೆ ಕಣ್ಣಾಯಿಸಿಯೇ ಇರಲಿಲ್ಲ. ತಂಗಿ ಮತ್ತೆ ಮತ್ತೆ ಯಾವ ಸೀರೆ ಉಡ್ತೀಯ ಅಂತ ಕೇಳಿದಾಗಲು - ಯಾವುದೋ ಒಂದು ನಿರ್ಲಕ್ಷೆ. ಮತ್ತೆ ಈ ದಿನಕ್ಕೆ ತೆಗೆದದ್ದು ಮಾತ್ರ ಪೆಟ್ಟಿಗೆ ತೆರೆದಾಗ ಕಂಡ ಮೊದಲ ಸೀರೆ. ಅದರಲ್ಲೂ ನೂರಾರು ನೆನಪುಗಳು! ಸಧ್ಯಕ್ಕೆ, ಅಲಂಕಾರ ಅನಿವಾರ್ಯ! ಮೇಜಿನ ಮೇಲಿದ್ದ ಮಲ್ಲಿಗೆ ದಿಂಡು ಅತಿಯಾಗಿ ಕಾಡಿದೆ. ಹೂ ಇಲ್ಲದ ರೇಶಿಮೆ ಸೀರೆಗೆ ಸೊಬಗೆಲ್ಲಿ? ಮುದ್ದಾಗಿ ಕಾಣ್ತಿದಾಳೆ ಮಗಳು - ಅವಳ ತಲೆಗೆ ಹೂ ದಿಂಡು ಮೂಡಿಸಿದ್ದಾಯ್ತು. ಅತಿಯಾಗಿ ಅವಳನ್ನೇ ನೋಡುವಾಸೆ, ತಡೆದೆ - ಹನಿ ಜಾರಿ ಮುಖದ ಮೇಲಿನ ಅಲಂಕಾರ ಹಾಳಾದೀತು, ಆಗಬೇಕಾಗಿರುವ ಕೆಲಸಗಳು ಬಹಳಷ್ಟಿವೆ!

ರೂಮಿನಿಂದ ಹೊರ ಬಂದ ಒಂದೆರಡು ನಿಮಿಷದಲೇ ಅಮ್ಮನ ಕಣ್ಣಲ್ಲಿ ಬಾಷ್ಪ! "ಹಾಗ್ನೋದ್ಬೇಡಮ್ಮ ದೃಷ್ಟಿ ಆಗುತ್ತೆ" ಅಂತ ತಮಾಷೆ ಮಾಡಿಕೊಂಡೆ ಅಮ್ಮನ ಕಾಲು ಮುಟ್ಟಿ ನಮಸ್ಕರಿಸಿದ್ದಾಯ್ತು. ಚಪ್ಪಲಿ ಹಾಕಿಕೊಂಡು ಮನೆಯಿಂದ ಹೊರಟಾಗ ಕಾಡಲು ಶುರುವಾಗಿದ್ದು ಮತ್ತದೇ - ಮತ್ತದೇ ವಿಷಯ. ಇದ್ದಕ್ಕಿದ್ದ ಹಾಗೆ ಈ ಪಾಟಿ ತಯ್ಯಾರಾಗಿ ಹೋಗ್ತಿದ್ದ್ರೆ ಜನರೇನು ಅಂದುಕೊಂಡಾರು? ಆತಂಕ, ಭಯ - ಮೂರು ಅಂತಸ್ತಿನ ಒಂದೊಂದು ಮೆಟ್ಟಿಲು ಇಳಿದಾಗಲು ಒಂದೊಂದು ಭಾವ! ಅರೆರೆ, ಛೆ ...... ಕಾರಿನ ಕೀ ಮನೆಯಲ್ಲೇ ಬಿಟ್ಟು ಇಳಿದು ಬಂದ್ನೆ! ಪಾರ್ಕಿಂಗ್ನಿಂದ ಮನೆಯ ಕಡೆಗೆ ಮತ್ತದೇ ದಾರಿ ಹಿಡಿಯಬೇಕಿದೆ, ಅವರಿವರ ಕಣ್ಣುಗಳ ಹೆದರಿಸುವ ಭಯ. ಅಮ್ಮನನ್ನೋ, ತಂಗಿಯನ್ನೋ ಕೆಳಗಿಂದಲೇ ಜೋರಾಗಿ ಕೂಗಿ ಕೀ ತೆಗೆಸಿಕೊಳ್ಳಬಹುದು. ಮುಜುಗರದಿಂದ ಹೆಣವಾಗಿ ಹೋಗಿದ್ದೇನೆ, ಮತ್ತದೇ ಮೂರಂತಸ್ತು ಹತ್ತಿ ಕೀ ತೆಗೆದುಕೊಂಡು ಬಂದದ್ದಾಯ್ತು. ಪಾರ್ಕಿಂಗ್ ಸೆಕ್ಯುರಿಟಿ ಸಿದ್ದಪ್ಪ, ಅವರಿಗೇನನಿಸ್ತೊ, "ಈ ತರಹ ನಿಮ್ಮನ್ನ ನೋಡೇ ಇರ್ಲಿಲ್ಲಮ್ಮ" ಅಂದ್ರು, "ಹೌದ ತಾತ - ನಾನು ಸಹ", ಅಂತಂದುಕೊಂಡೆ ಕಾರ್ ಹತ್ತಿಸಿ ಮನೆಯ ಮುಂದೆ ತರುವಷ್ಟರಲ್ಲಿ, ಮೆಟ್ಟಿಲಿಳಿದು ಬರುತಿದ್ದದ್ದು ಮಗಳು. ಅವಳಿಗೂ ಮುಜುಗರವೇನೋ - ವರ್ಷ ಕಳೆಯುವ ತನಕ ಯಾರ ಮನೆಗೂ - ಯಾವ ಶುಭ ಕಾರ್ಯಕ್ಕೂ ಹೋಗುವಹಾಗಿಲ್ಲವಂತೆ?!

ಸಭಾಂಗಣ ಹತ್ತಿರವಾಗುತಿದ್ದಂತೆ ಮತ್ತದೇ ಭಯ, ಯಾರನ್ನ ಹೇಗೆ ಮಾತನಾಡಿಸಬೇಕೋ? ಯಾರ ಬಳಿ ಹೇಗಿರಬೇಕೋ? ಇದೆಂಥ ವಿಧಿಯಾಟ. ನನ್ನೊಡನೆ ನನ್ನ ಸಮರ! ಯಾರನ್ನ ಮೆಚ್ಚಿಸಬೇಕಿದೆ? ನನ್ನ ಅಶ್ರು, ನನ್ನ ಯಾತನೆ, ನನ್ನ ಶೋಕ - ಎಲ್ಲವೂ ನನ್ನವೇ. ಉತ್ತರಿಸಬೇಕಾಗಿರುವುದು ದೇವರಿಗೆ, ನನ್ನೊಳಗಿನ ಧರ್ಮಪ್ರಜ್ಞೆಗೆ, ನಾ ಸೋತು ಗೆಲ್ಲುವ ನನ್ನಾತ್ಮಸಾಕ್ಷಿಗೆ. ಸಭಾಂಗಣದೊಳಗೆ ಕಾಲಿಡುತಿದ್ದಂತೆ ನನ್ನ ಪ್ರೀತಿಯ ತಂಡ! ಹಾಗೆ ನಿಂತಿದ್ದ ಉಸಿರೊಂದು ಹಿಂದಿರುಗಿ ಬಂದಂತೆ! ಎಂದಿನ ಹಾಗೆ ಅದಂತೆ - ಇದಂತೆ ಎನ್ನುವಷ್ಟರಲ್ಲಿ ಬಂದದ್ದು ನನ್ನ ಮನೆಯವರು - ನನ್ನ ಮಿತ್ರರು - ಗುರು ಹಿರಿಯರು. ಹಿಂಗಿದ್ದ ದೈರ್ಯ, ಕುಸಿದಿದ್ದ ವಿಶ್ವಾಸಕ್ಕೆ ಇವರಲ್ಲವೇ ಚೈತನ್ಯ? ಕಣ್ಣಂಚಿನಲ್ಲಿ ಜಾರುತಿದ್ದ ಹನಿಯನ್ನೇ ಗಮನಸಿ ಬಾಯಿಗೆ ಉಪ್ಪಿಟ್ಟು ತುರುಕಿದ್ದು ತಂಗಿ.

ಬಂದವರೆಲ್ಲ ಭಗವಂತನೇ ಕಳಿಸಿದ ದೇವತೆಗಳಿರಬೇಕು? ಅಬ್ಬಬ್ಬ! ತಾನು ಇದ್ದೀನಿ ಅಂತ ಸಾಬೀತು ಪಡಿಸೋಕೆ ಇವರುಗಳ ಮುಗ್ಧ ನಗುವಿನಲ್ಲಿ, ಅಭಿಮಾನ ತುಂಬಿದ ಮಾತುಗಳಲ್ಲಿ ನಿರೂಪಿಸಲು ತಯ್ಯಾರಾಗಿದ್ದಾನೆ. ಶತಮಾನಂ ಭವತಿ ಎಂದು ಹರಸಿದ್ದಾನೆ!

ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದೆ. ಕಡೆಗೂ ತಡೆಯಲಾಗದೆ ಉಕ್ಕಿಬಂದ ಕಣ್ಣ ಹನಿಗಳೊಡನೆ ಸಿಕ್ಕಿಬಿದ್ದೆ ಇವರುಗಳ ಕೈಗೆ. "ರೂಪಕ್ಕ ನೀವು ಮಾತ್ರ ಅಳಬಾರದು" - ಇದು ಸಾಂತ್ವನ, ಇದು ಆಜ್ಞೆ! ಮಗಳನ್ನ ಜೋರಾಗಿ ತಬ್ಬಿಕೊಳ್ಳಬೇಕಿದೆ, ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಬೇಕಿದೆ, ಹೆಪ್ಪುಗಟ್ಟಿರುವ ಅಳಲು ಕರಗಬೇಕಿದೆ.
ಮರುದಿನವೇ ಕಾರ್ಯಕ್ರಮದ ಭಾವಚಿತ್ರಗಳು ಎಲ್ಲೆಡೆ ಹರಿದಾಡಿದೆ. ನಿನ್ನೆ ಮಗಳನ್ನ ಕಣ್ಣಿಟ್ಟು ನೋಡದೆ ನನ್ನಿಂದ ನನ್ನನ್ನೇ ಕಟ್ಟಿ ಹಾಕಿದ್ದು ನಿಜ. ಈ ದಿನ ಅವಳ ಫೋಟೋ ನೋಡಿ ಬಿಕ್ಕಳಿಸಿ ಬಂದ ಅಳುವು, "ಅವರ ಅಪ್ಪನ ಹಾಗೆ" ಅಂತ ಪ್ರತಿಕ್ರಿಯಿಸಿ ಹೊರ ನಡೆದಿದೆ!................

28 comments:

  1. Awesome nirupane Roopakka...... Nimma novinallu namagella nalivu needida nimage navella DHANYARU.... Nimma nagu yellarigu ondu spoorthi.... yellaru aa naguvanne bayasuvarooo.... haage namagaagi yellavannu manasalli adumittu namagaagi aa naguvondanna chellidaralla..... Hats off to you..... Nimage navellaru chiraruni..... :)

    ReplyDelete
    Replies
    1. naveenaaaaaaa :)..... maatella mounada more hogide! preeti heege irali.

      Delete
  2. ಮೌನದ ಕಾಡಲ್ಲಿ ನಡೆವಾಗ ನಮ್ಮ ಹೆಜ್ಜೆಯ ಸಪ್ಪಳ, ಹೃದಯ ಬಡಿತ, ಕಣ್ಣು ರೆಪ್ಪೆ ಮುಚ್ಚಿ ತೆರೆದಾಗ ಸಿಗುವ ಸಣ್ಣಗಿನ ತರಂಗ ಇವುಗಳ ನಡುವೆ ನೆನಪುಗಳ ಮೆರವಣಿಗೆ. ಹೃದಯಾಳದಲ್ಲಿ ಹೆಪ್ಪು ಗಟ್ಟಲು ನಿರಾಕರಿಸುತ್ತಿರುವ ನೆನಪುಗಳು ಮತ್ತೆ ಹರಿದಾಡುವಾಗ.. ದೂರಾಗಿದ್ದರೂ ಮನದಲ್ಲಿ ನೆಲೆಸಿರುವ ದೇವರನ್ನು ಕಣ್ಣ ಮುಂದೆ ತಂದಿಡುವ ಬರಹ ಓದಿದ ಮೇಲೆ.. ಕಣ್ಣುಗಳು ನೀರಿನ ಒರತೆಯನ್ನು ಹುಡುಕುತ್ತಿರುವಾಗಲೇ.. ಹೃದಯ ಮಿಡಿತ.. ನಾನಿದ್ದೇನೆ ಧೈರ್ಯವಾಗಿರು ಅಂತ ಚೀರುವ ಧ್ವನಿ ಚೆನ್ನಾಗಿಯೇ ಕೇಳಿಸುತ್ತಿದೆ. ನಿಮ್ಮ ಮನದ ಸ್ಥೈರ್ಯಕ್ಕೆ ನನ್ನ ಸಾಷ್ಟ್ರಾಂಗ ನಮಸ್ಕಾರಗಳು. ನಿನ್ನೆ ಅಶೋಕ್ ಶೆಟ್ಟಿ ಕಳಿಸಿದ ಎಸ್ ಎಮ್ ಎಸ್ ಸಂದೇಶ ನೆನಪಿಗೆ ಬಂತು "The ability to smile on the outside for the sake of others when you feel like dying inside is called the absolute strength"...

    I bow my head to you and your awesome inspiring soul power

    ReplyDelete
    Replies
    1. Srikanth......:)..... Enantha heLbeko gottaagtilla.... Preeti heege irali.

      Delete
  3. ರೂಪ ಮೇಡಂ , ಅಂದು ಆ ಸಂಧಿಗ್ನ ಪರಿಸ್ಥಿತಿಯಲ್ಲಿ ಕೂಡ ನೀವು ಆತ್ಮ ಸ್ಥೈರ್ಯ ದಿಂದ ,ಉತ್ಸಾಹದ ಸ್ಪೂರ್ತಿಯಾಗಿ ನೀವು ಕಾರ್ಯಕ್ರಮವನ್ನು ನಿಭಾಯಿಸಿದ್ದು ನಿಜಕ್ಕೂ ಮೆಚ್ಚುಗೆಯ ಕಾರ್ಯ..ನಿಮ್ಮ ಸ್ಥೈರ್ಯಕ್ಕೆ ನಿಜಕ್ಕೂ ಮನಪೂರ್ವಕ ನಮಸ್ಕಾರಗಳನ್ನು ಅರ್ಪಿಸಲೇಬೇಕು ..ಕೆಲವು ನೋವುಗಳನ್ನು ಅದುಮಿಟ್ಟುಕೊಳ್ಳುವುದು ಬಹಳ ಕಷ್ಟ ... ಈ ಲೇಖನ ಓದಿದ ಮೇಲೆ ನನ್ನ ಕಣ್ಣು ಒಂದು ಕ್ಷಣ ತೇವ ಆಯಿತು ...

    ReplyDelete
    Replies
    1. Girish,
      uttarisoke bartilla.
      preetiya dhanyavaada.......

      Delete
  4. ಮಡಗಟ್ಟಿದ ನೋವಿನ ಹೊರತಾಗಿಯೂ ಇತರರ ಸಂಭ್ರಮಕ್ಕಾಗಿಯೆ ಒಂದು ನಗುವನ್ನು ಎತ್ತಿಡುವವರೂ ಅಪರೂಪ.ನಿಮ್ಮ ಹೃದಯ ವೈಶಾಲ್ಯಕ್ಕೆ ಇದೂ ಒಂದು ಉದಾಹರಣೆ. ಜೀವಂತ ದಂತ ಕಥೆ ಎಂದರೆ ನೀವೇ ನಮಗೆ.

    ತುಂಬಲಾರದ ಖಾಲೀತನವನ್ನು ಮಗಳ ಇರುವಿಕೆ ಭರ್ತಿ ಮಾಡಲಿ. ಭಗವಂತನ ಕೃಪೆ ನಿಮ್ಮ ಮೇಲೆ ಎಂದೂ ಇರಲಿ.

    ರೂಪಾಜೀ, ಅಂದಿನ ಪ್ರತಿ ನಿಮಿಷದ ಹಿಂದೆಯೂ ನಿಮ್ಮ ದಿನಗಟ್ಟಲೇ ಪರಿಶ್ರಮ ಎದ್ದು ಕಾಣುತ್ತಿತ್ತು. ಕಾರ್ಯಕ್ರಮ ಮನೆಯ ವಾತಾವರಣಕ್ಕೆ ಪರಿವರ್ತಿತವಾಗಿತ್ ತು. ಇದೂ ಅಪರೂಪವೇ.

    ನನ್ನಂತ ಅಙ್ಞಾತ ಕವಿಯನ್ನು ಗುರುತಿಸಿ ಬೆಟ್ಟದಷ್ಟು ಗೌರವಿಸಿದ ನಿಮಗೆ ಅನಂತ ನಮನಗಳು.

    ReplyDelete
    Replies
    1. Badari yavare,
      nimmellara sneha preetige sharanu........

      Delete
  5. ರೂಪಕ್ಕ... ಏನು ಹೇಳಬೇಕೋ ತಿಳೀತಿಲ್ಲಾ.. ನಿರೂಪಣೆ ತುಂಬಾ ಚೆನ್ನಾಗಿದೆ... ಆದರೆ ಏಕೋ ಮನ ಕಲಕಿತು... ಒಂದು ಮಾತ್ರ ಹೇಳಬಲ್ಲೆ. ನೀವು Really Great Roopakka...

    ReplyDelete
    Replies
    1. pradeepa.....
      eno ello heLbekannistittu adakke barede. no gr8s and greets plz....

      Delete
  6. ಸಾಂತ್ವನ ಕೊಡುವುದು ಸುಲಭ... ಅದನ್ನು ಮನದಲ್ಲಿಟ್ಟು ದಹಿಸಲು ಬಿಡದೆ ಮೆಟ್ಟಿ ನಿಲ್ಲುವುದು ಬಲು ಕಷ್ಟಸಾಧ್ಯ...ಅದನ್ನು ನೀವು ಮಾಡಿದ್ದೀರಿ ರೂಪಾ.. ಜೀವನದ ಕೆಲವೇ ಕ್ಷಣಗಳನ್ನು ಮಾತ್ರ ಕಂಡವರಿಗಿಂತಾ, ಅಂತಹ ಅಪೂರ್ವ ಕ್ಷಣಗಳನ್ನು ಮತ್ತೆ ಯಾವುದೇ ರೂಪದಲ್ಲಿ ನೋಡಲಾಗದಂತಹವರಿಗಿಂತಾ ನಾವೇ ಮಿಗಿಲು ಎನ್ನುವ ಸಮಾಧಾನ ಮಾಡಿಕೊಳ್ಳುವುದೇ ಜೀವನದ ಒಪ್ಪಂದ. ಮಗಳ ಮುದ್ದು ಮುಖ, ಅಮ್ಮ, ಅಪ್ಪ, ತಂಗಿ, ತಮ್ಮ, ಆತ್ಮೀಯ ಸ್ನೇಹಿತರು, ಮೆಚ್ಚಿದ ಕಾಯಕ, ಮನಕ್ಕೆ ಮುದಕೊಡುವ ಸಾಹಿತ್ಯ ಸೇವೆ, ಸಮಾಜ ಸೇವೆಯಲ್ಲಿ ಸಾರ್ಥಕತೆ...ನಿಮ್ಮನ್ನು ನೀವೇ ಸಮಾಧಾನಿಸಿಕೊಳ್ಳಲು ದೇವರು, ನಿಮ್ಮ ದೇವರು ನಿಮಗೆ ನೀಡಿದ ಪರ್ಯಾಯ ಎಂದುಕೊಂಡು ಉತ್ಸಾಹದ ಚಿಲುಮೆಯಾಗಿ ಶತಮಾನಮ್ ಭವತಿ -ಸಾಕಾರಗೊಳಿಸಿದ್ದು ನಿಮ್ಮ ಸ್ಥೈರ್ಯ, ವಿಶ್ವಾಸ ಸಹನೆಗೆ ಪ್ರತೀಕ. ನಿಮ್ಮೆಲ್ಲ ಕುಟುಂಬ ವರ್ಗಕ್ಕೆ ಅದರಲ್ಲೂ ನಿಮಗೆ ಮತ್ತು ಮೇಘನಾ ಪುಟ್ಟಿಗೆ ಮನಸಾರೆ ಹಾರೈಕೆಗಳು.

    ReplyDelete
    Replies
    1. Azad sir,
      pakkadalle koothu saantvana heLidahaagide nimma maatu.... tx..

      Delete
  7. ಸಹೋದರಿ ರೂಪ ಅವರೇ , ನಿಮ್ಮ ನಿರೂಪಣೆ ಓದಿದೆ ಕಣ್ತುಂಬಿ ಬಂತು, ಆದರೆ ನೀವು ಬಹಳಷ್ಟು ಹೆಣ್ಣುಮಕ್ಕಳ ಸ್ಫೂರ್ತಿ ಯಾಗಿದ್ದೀರಿ, ಹೌದು ಜೀವನ ಪಯಣದಲ್ಲಿ ಅಡಚಣೆಗಳು ಬಹಳ, ನೋವು ಕಾಡುತ್ತದೆ ಹಲವು ಸಾರಿ, ಆದರೆ ಚಲಿಸುವ ಬದುಕು ಎಲ್ಲವನ್ನು ದಾಟಿಕೊಂಡು ಮುನ್ನುಗ್ಗಲೇ ಬೇಕು . ಕೆಲವು ಘಟನೆಗಳು ಮರೆಯಲು ಸಾಧ್ಯವಿಲ್ಲದಿದ್ದರೂ ಕೂಡ ಮರೆಯಲು ನಾವು ಪ್ರಯತ್ನಿಸಲೇ ಬೇಕು , ಆ ನೆನಪು ಯಾವಾಗಲೂ ಕಾಡದಂತೆ ಬಿಡುವಿಲ್ಲದ ಜೀವನ ಶೈಲಿ ರೂಪಿಸಿಕೊಂಡು ನಿರಂತರ ಚಟುವಟಿಕೆ ಹಮ್ಮಿಕೊಳ್ಳಬೇಕು , ಬಹುಷಃ ನೀವು ಈ ದಾರಿಯಲ್ಲೇ ಸಾಗುತ್ತಿದ್ದೀರಿ . ಸಂತಸವನ್ನು ಯಾರಾದರೂ ಹಂಚಿಕೊಳ್ಳಬಹುದೇ ಹೊರತಾಗಿ ದುಃಖವನ್ನು ಯಾರೂ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಾಂತ್ವನದ ಮಾತುಗಳು ನಮಗೆ ಸ್ಪೋರ್ತಿಯಾಗಬಲ್ಲದು , "ಸಾವಿಲ್ಲದ ಮನೆ " ಪ್ರಪಂಚದಲ್ಲಿ ಯಾವುದು ಇಲ್ಲ ಹಾಗೆ ನಗುವಿಲ್ಲದ ಜೀವನವೂ ಇಲ್ಲ ಇದು ನನ್ನ ಜೀವನ ಹೇಳಿಕೊಟ್ಟ ಪಾಠ . ನಿಮ್ಮ ಬಿಡುವಿಲ್ಲದ ಚಟುವಟಿಕೆ ನಮ್ಮೆಲ್ಲರಿಗೂ ಸ್ಫೂರ್ತಿ, ಬಹಳಷ್ಟು ಹೆಣ್ಣುಮಕ್ಕಳಿಗೆ ನೀವು ಸ್ಫೂರ್ತಿ, ಹಾಗಾಗಿ ನೀವು ನಮ್ಮೆಲ್ಲರ ಪ್ರೀತಿಯ ಸಹೋದರಿ ರೂಪಕ್ಕ . ನಿಮ್ಮ ಸುತ್ತ ಪ್ರೀತಿ ತುಂಬಿದ ಎಷ್ಟೊಂದು ಸಹೋದರ, ಸಹೋದರಿಯರು ಇದ್ದಾರೆ , ಕಟ್ಟು ಪಾಡು ಅದರಷ್ಟಕ್ಕೆ ಇರಲಿ ನಮ್ಮ ರೂಪಕ್ಕ ನಗುನಗುತ್ತಾ ಇರಲಿ , ಮುಂದಿನ ಕಾರ್ಯಕ್ರಮ ಏನು ಎಂಬ ಬಗ್ಗೆ ಕೂಡಲೇ ಚಟುವಟಿಕೆ ನದೆಸಿ. ನಾವೆಲ್ಲಾ ನಿಮ್ಮೊಟ್ಟಿಗೆ ಇದ್ದೆವೆ. ಹಾಗಾಗಿ ನಿಮ್ಮ ನಗು ಶಾಶ್ವತವಾಗಿ ಇರುತ್ತದೆ , ಇದು ನಮ್ಮೆಲ್ಲರ ಶುಭ ಹಾರೈಕೆ "ಚೀರ್ ಅಪ್ " ರೂಪಕ್ಕ,
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ... Balu Sir,
      neevu saha "Roopakka" antha kareyode!! nimma akkareya saantvana mana muttide.

      Delete
  8. ರೂಪಕ್ಕ...Hats off to You....!
    ನೀವೆ ನಮಗೆಲ್ಲರಿಗೂ ಸ್ಫೂರ್ತಿ...
    ಬಾನ ಮೇಘಗಳು ಭುವಿಗೆ ಸ್ಫೂರ್ತಿಯಾದಂತೆ..
    ನಿಮ್ಮ ನಗು ಇನ್ನೂ ಸಾವಿರಾರು ಮಂದಿಗೆ ಸ್ಫೂರ್ತಿ ನೀಡುತ್ತಿರಲಿ.

    3K ಯಾವಾಗಲೂ ನಿಮ್ಮೊಂದಿಗಿದೆ...

    ReplyDelete
  9. ಕಾಲ ಎಲ್ಲವನ್ನೂ ಮರೆಸುತ್ತದೆ..

    ಮರೆವು ..
    ಶಾಪವೂ ಹೌದು..
    ಒಂದು ವರವೂ ಹೌದು...

    ನಿಮ್ಮ ಬಾಳಲ್ಲಿ " ಮರೆವು " ಒಂದು ವರವಾಗಲಿ ಎಂದು ಹಾರೈಸುವೆ....

    ReplyDelete
  10. ಆತ್ಮೀಯ ಪ್ರೀತಿಯ ರೂಪಕ್ಕಾ

    ನಿಮ್ಮ ನೋವಿನಲ್ಲೂ ಇತರರ ನಗುವಿಗೆ ಕಾರಣವಾಗುವ ನಿಮ್ಮ ಒಳ್ಳೆತನಕ್ಕೆ ನನ್ನ ನಮನಗಳು..................

    ಬದುಕಿನ ಪ್ರತಿ ಹಂತದ ಏರಿಳಿತಗಳ ನೋವು ನಲಿವುಗಳನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಆ ದೇವರು ನಿಮಗೆ ನೀಡಿದ್ದಾನೆ.... ಮೇಲ್ನೋಟಕ್ಕೆ ಗಟ್ಟಿತನವಿದ್ದರೂ ನಿಮ್ಮ ಅಂತರಂಗದ ಭಾವುಕತೆಯ ನಾವು ಬಲ್ಲೆವು..... ಒಂದು ಮಾತಂತೂ ನಿಜ ಏನೇ ಕಷ್ಟ ಬಂದರೂ ನಿಮ್ಮ ಬೆನ್ನೆಲುಬಾಗಿ ತಂಡವಿದೆ ಧೈರ್ಯದಿಂದ ಸಾಗಿ.......


    ನಿಮಗಾಗಿ ನನ್ನ ಅಚ್ಚು ಮೆಚ್ಚಿನ ಈ ಸಾಲು

    ಅಕ್ಕಾ ಪಕ್ಕ ಹಕ್ಕಿಗಳೇ
    ನಿಮ್ಮ ಅಕ್ಕಾ ತ೦ಗಿ ಅಂದುಕೊಳ್ಳಿ
    ಸ್ವಾತಿಯ ಹಾಗಿದೆ ಕಣ್ಣೀರು
    ನಾಳೆ ಮುತ್ತಾಗಿ ಬರುತಾವೆ
    ನಿಮ್ಮಯ ಗ್ರಹಣ ಸರಿದೂ
    ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
    ನಾಳೆಯೇ ಸುಖವ ಕೊಡುತಾನೆ
    ದೇವರು ಜೊತೆಯಲ್ಲಿರುತ್ತಾನೆ.............

    ಪ್ರಕಾಶಣ್ಣ ಹೇಳಿದಂತೆ ನಿಮ್ಮ ಬಾಳಲ್ಲಿ " ಮರೆವು " ಒಂದು ವರವಾಗಲಿ......................

    ReplyDelete
  11. ರೂಪಾ ದೀ ಏನ್ ಹೇಳಬೇಕೋ ಗೊತ್ತಾಗ್ತಿಲ್ಲಾ....

    ನಿಮ್ಮ ಬರಹದಲ್ಲಿ ಹಲವಾರು ಕಡೆ ನನ್ನದೇ ಪ್ರತಿಬಿಂಬ ಕಾಣಿಸಿಯು ಕೂಡ ಕಾಣದ ಹಾಗೆ ಕಣ್ಣು ಮಂಜಾಯಿತು.

    .....................................

    ನಾ ಏನನ್ನೂ ಹೇಳದೇ ಇದ್ದರೂ ಕೂಡ, ಅಕ್ಕನಿಗೆ ಎಲ್ಲ ಅರ್ಥವಾಗಿರುತ್ತೆ :-)

    ReplyDelete
    Replies
    1. Ra-1...
      onde doniya payanigaru.....
      hegalige hegalina saantvana......

      Delete
  12. ರೂಪಕ್ಕ ನನ್ನನ್ನ ಮೂರನೇ ಸಾರಿ ಅಳಿಸಿದ್ರಿ..

    ಅಷ್ಟು ಸುಲಭಕ್ಕೆ ಅಳೋ ಮಗ ಅಲ್ಲ ನಾನು.. ನಾನು ಒಬ್ಬರಿಗಾಗಿ ಅಳ್ತೇನೆ ಅಂದ್ರೆ ಅವರು ನನಗೆ ಅಷ್ಟು ಮಹತ್ವಪೂರ್ಣ ವ್ಯಕ್ತಿ.. ನನ್ನ ಕಣ್ಣಲ್ಲಿ ಅನಾಮತ್ತು ಒಬ್ಬರು ಇಷ್ಟು ಸಲೀಸಾಗಿ ಕಣ್ಣೀರು ಹಾಕಿಸುತ್ತಾರೆಂದರೆ ನಿಜಕ್ಕೂ ನನ್ನ ನಾಡಿ ಮಿಡಿತಕ್ಕೆ ನೇರ ಸಂಬಂಧ ಹೊಂದಿದವರಿಂದ ಮಾತ್ರ ಸಾಧ್ಯ. ಬಹಳ ಹಿಂದೆ ನೀವೊಂದು ಮಾತು ಹೇಳಿದ್ರಿ ಮಂಗಳೂರಲ್ಲಿ.. ನನಗೆ ತಮ್ಮ ಇಲ್ಲ ಅನ್ನೋ ಕೊರತೆ ನೀಗಿಸಿದ ಮಾಹಾನುಭಾವರು ನೀವೆಲ್ಲ ಅಂತ. ಬರೀ ಬಾಯ್ಮಾತು ಆಗಿರಲಿಲ್ಲ ಅದು. ಅದಕ್ಕೆ ನಮ್ಮೆಲ್ಲರೊಳಗೆ ನೀವು ಯಾರಿಗಿಂತಲೂ ಸಲೀಸಾಗಿ ಒಂದು ಎತ್ತರದ ಸ್ಥಾನ ಹಿಡಿಯಲಾಗಿದ್ದು.

    ಈ ಕಾರ್ಯಕ್ರಮದ ಯಶಸ್ಸಿನ ಸಿಹಿಯ ನಗುವಿನ ಹಿಂದೆ ನಿಮ್ಮ ಅದೆಷ್ಟು ನೋವಿನ ಭಾರದ ಭಾವಗಳಿದ್ವು ಅನ್ನೋದರ ಕಿಂಚಿತ್ ಕಲ್ಪನೆ ನಮಗೆ ಇದ್ದಿತ್ತಾದರೂ ಈ ಬರಹ, ಅದರ ವ್ಯಾಪ್ತಿಯನ್ನ ಅಳೆಯಲಾರದಷ್ಟು ಅಗಲವಾಗಿ, ಮತ್ತಷ್ಟೂ ಆಳವಾಗಿ ನಮಗದನ್ನ ಪರಿಚಯಿಸಿದ್ದು ಸುಳ್ಳಲ್ಲ. ನಿಮ್ಮೊಂದಿಗೆ ನಾವಿರೋದು ನಮ್ಮ ಕರ್ತವ್ಯ ಅನ್ನುವುದಕ್ಕಿಂತ ಹೆಚ್ಚಾಗಿ ಭಾಗ್ಯ ಅಂದುಕೊಳ್ಳುವುದಕ್ಕಿಂಥ ವಿಧಿ ಇಲ್ಲ ಅನ್ನಿಸುತ್ತಿದೆ.

    ನಿಮ್ಮೊಂದಿಗೆ ನಾವು ಯಾವತ್ತಿಗೂ ಇರ್ತೀವಿ ಅನ್ನೋದು ಬರೀ ಮಾತಲ್ಲ ಭಾಷೆ.. :) :)

    ReplyDelete
    Replies
    1. Satisha,
      idu poorvada punya.... koneya saalu saavira maatugaLanna aaDi hogide....

      Delete
  13. This comment has been removed by the author.

    ReplyDelete
  14. ಇದನ್ನ ಈಗ ಓದ್ತಾ ಇದೀನಿ ಕ್ಷಮೆ ಇರಲಿ ರೂಪಕ್ಕ...
    ''ಮೇಜಿನ ಮೇಲಿದ್ದ ಮಲ್ಲಿಗೆ ದಿಂಡು ಅತಿಯಾಗಿ ಕಾಡಿದೆ.''..ಈ ಸಾಲಿನ ನಂತರ ಓದಲು ಆಗಲಿಲ್ಲ ರೂಪಕ್ಕ ..ಕಣ್ಣು ಮಂಜಾದವು .ನಿಮ್ಮ ನಗುವ ಹಿಂದೆ ಅನೇಕ ಸಾರಿ ನಿಮ್ಮನ್ನು ಹುಡುಕಿ ನಾನು ಸೋತಿದ್ದೇನೆ. ಆದರೆ ನೀವು ಸಿಕ್ಕೂ ಸಿಗದೆ ಹಾಗೆ ಇರುತ್ತೀರಿ.
    ಆದ್ಯಾವ ಜನ್ಮದ ಪೂರ್ವ ಪುಣ್ಯವೋ ನೀವು ಸ್ವಂತ ಅಕ್ಕನಿಗಿಂತಲೂ ಹೆಚ್ಚು ಅರ್ಥವಾಗಿದ್ದೀರಿ..ಆಪ್ತವಾಗಿದ್ದೀರಿ.
    ಕರ್ತವ್ಯ ಪ್ರಜ್ಞೆ ,ಸಾಮಾಜಿಕ ತುಡಿತ ,ನೋವಿನಲ್ಲೂ ನಗುವ ಚಿಕಿತ್ಸಕ ಗುಣ ಎಲ್ಲವೂ ನಮಗೆ ಆದರ್ಶ...

    ನಿಮ್ಮೊಂದಿಗೆ ನಾವಿದೀವಿ ರೂಪಕ್ಕ...

    ReplyDelete
    Replies
    1. ಅರುಣ,
      ನಿಮ್ಮೆಲ್ಲರ ಇರುವಿಕೆಯೆ ಜೀವನಕ್ಕೊ೦ದು ಚಿಲುಮೆ.... ಪುಣ್ಯ ನನ್ನದು....

      Delete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...