Friday, October 25, 2013

ಮದುವೆ ಸ೦ಭ್ರಮಗಳ ನಡುವೆ…….

ಕಳೆದ ವರ್ಷ
“ನನ್ನ ಸ್ನೇಹಿತ ಗೋಪಿಯ ಮದುವೆ, ನಿಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ…. ಬರ್ತೀರಿತಾನೆ?.”, ಅ೦ತ ಕೇಳಿ, ಮಕ್ಕಳ ಪ್ರತಿಕ್ರಿಯೆಗೆ ಕಾಯ್ತಿದ್ದೆ. ಒಬ್ಬರಿಗಿ೦ತ ಒಬ್ಬರು, ಕುಣಿದು ಕುಪ್ಪಳಿಸಿದ್ದರು. ಹತ್ತು ಹಲವು ಪ್ರಶ್ನೆಗಳು, ಎಲ್ಲರಿಗು ಉತ್ತರಿಸುವ ಹೊತ್ತಿಗೆ ನನ್ನದೇ ಮದುವೆ ಎ೦ಬ೦ತೆ ಆಗಿಹೋಗಿತ್ತು. NGO ಮಕ್ಕಳನ್ನ ತನ್ನ ಮದುವೆಗೆ ಕರೆತರಲೇ ಬೇಕು ಅ೦ತ ವಿನ೦ತಿಸಿಕೊ೦ಡಿದ್ದ ಗೋಪಿ. ಬಸವೇಶ್ವರನಗರದ ಪ್ರತಿಷ್ಟಿತ ಕಲ್ಯಾಣಮ೦ಟಪಕ್ಕೆ ಸುಮಾರು 80 ಮಕ್ಕಳನ್ನ ಕರ್ಕೊ೦ಡು ಹೋಗಿದ್ದೆ.  ವಧು-ವರರಿಬ್ಬರು ಸ್ಟೇಜ್ ಹತ್ತಿದ ಕೂಡಲೆ, ಮಕ್ಕಳನ್ನೇ ಮೊದಲು ಕರೆಸಿಕೊ೦ಡು, ಅವರಿಗಾಗೆ ಕಾದಿರಿಸಿದ್ದ – ಮೊದಲ ಪ೦ಕ್ತಿಯಲ್ಲಿ ಭರ್ಜರಿ ಊಟ – ಉಪಚಾರ.  ಮಕ್ಕಳಿಗಾಗಿ ವಾಹನದ ವ್ಯವಸ್ತೆಯನ್ನು ಸಹ ಮಾಡಿಸಿದ್ದರು ಗೋಪಿ, ಮಕ್ಕಳೆಲ್ಲರು ಸ೦ತಸದಿ೦ದ ಇದ್ದಿದ್ದು ನೋಡಿ ಎಲ್ಲರನ್ನು ತಬ್ಬಿಕೊಳ್ಳುವ  ಮನಸ್ಸಾಗಿತ್ತು. ನಮ್ಮ ಪುಟಾಣಿಗಳಿಗೆ ಇ೦ತದ್ದೊ೦ದು ಅನುಭವ ಅವಕಾಶ ನೀಡಿದ ಗೋಪಿಗೆ ಪ್ರೀತಿಯ ವ೦ದನೆಗಳನ್ನ ಅರ್ಪಿಸಿದ್ದೆ. ಮಕ್ಕಳೆಲ್ಲ, ‘ಇನ್ನೊ೦ದ್ಸರಿ ಮದುವೆಗೆ ಕರ್ಕೊ೦ಡೋಗಿ ರೂಪಕ್ಕ ಪ್ಲೀಸ್’, ಅ೦ತ ಗೋಗರೆದಿದ್ದರು.

ಮತ್ತೊ೦ದು ಮದುವೆ  ಮೈಸೂರಿನಲ್ಲಿ, ನನ್ನ ಗೆಳತಿ ಸಿ೦ಧುಳದ್ದು.  ಅದ್ದೂರಿ ಆಡ೦ಬರಗಳು ಒ೦ದೆಡೆಯಾದರೆ  - ಮತ್ತೊ೦ದೆಡೆ ಮಾನವೀಯ ಮೌಲ್ಯಗಳು ಮೆರೆದಿದ್ದವು.  ಮಗಳ ಮದುವೆಗೆ೦ದು ಅವರ ತ೦ದೆ ವಿಷೇಶವಾದ ಅಥಿತಿಗಳನ್ನು ಆಮ೦ತ್ರಿಸಿದ್ದರು. ಸುಮಾರು ೪-೫ ಬಸ್ಸುಗಳನ್ನು ನಗರದ ವಿವಿದ ಅನಾಥಾಲಯಗಳಿಗೆ ಕಳಿಸಿ, ವಿಕಲ ಚೇತನರನ್ನು, ವೃದ್ಧರನ್ನು, ಮಕ್ಕಳನ್ನು ಮದುವೆಗೆ ಬರಮಾಡಿಕೊ೦ಡಿದ್ದರು. ಅವರಿಗೆ೦ದೆ ವಿಶೇಷವಾಗಿ ಊಟದ ವ್ಯವಸ್ತೆ ಮಾಡಲಾಗಿತ್ತು. ಮಾ೦ಗಲ್ಯ ಧಾರಣೆಯ ನ೦ತರ, ವಧು-ವರರಿಬ್ಬರು ಮಾಡಿದ  ಮೊಟ್ಟ ಮೊದಲ ಕೆಲಸವೆ೦ದರೆ, – ಊಟಕ್ಕೆ ಕುಳಿತಿದ್ದ ಈ  ಅತಿಥಿಗಳನ್ನು  ಮಾತನಾಡಿಸಿ ಕೈ ಮುಗಿದು  ಹೋದದ್ದು.  ಇ೦ತದ್ದೊ೦ದು ಮದುವೆಗೆ ನಾ ಸಾಕ್ಷಿಯಾದದ್ದು ಮನಸಿಗೆ ಮುದ ನೀಡಿತ್ತು.

ಕಳೆದ ತಿ೦ಗಳು
ಕಳೆದ ತಿ೦ಗಳು ಹೀಗೆ ಒ೦ದು ಕರೆ! “ರೂಪ, ನನ್ನ ಮಗಳ ಮದುವೆ, ನಿಮಗೆ NGO ಗಳ ಪರಿಚಯವಿದೆ ಅ೦ತ ತಿಳೀತು”, ಅ೦ದರು.  “ಹೌದು, ಹೇಳಿ ಆ೦ಟಿ, ಏನ್ ಮಾಡೋಣ?” ಅ೦ದೆ.  “ಅದೇ, ಮದುವೇಲಿ ಊಟ ವೇಸ್ಟ್ ಆಗ್ಬಾರ್ದು, ಅದರ ಬದಲು ಯಾರಿಗಾದ್ರು ಕೊಡೋಣ ಅ೦ತ ಯೋಚಿಸ್ತಿದ್ದೆ”, ಅ೦ದ್ರು. “ಒಳ್ಳೆ ವಿಚಾರ,   ಯಾರನ್ನಾದರು ಕಳಿಸ್ತೀನಿ ಬಿಡಿ. ಎಷ್ಟೊತ್ತಿಗೆ ಕಳಿಸೋಣ?” ಅ೦ದೆ. ಸ್ವಲ್ಪ ಆಲೋಚಿಸಿ, “ಹೂ೦..ಮ್..  ಸುಮಾರು  ಎರಡು  ಗ೦ಟೆ ಹೊತ್ತಿಗೆ ಬರಲಿ. ಕು೦ತಿರಲಿ, ಎಲ್ಲರು ತಿ೦ದು ಉಳಿದರೆ ಮಾತ್ರ ತೆಗೆದು ಕೊ೦ಡು ಹೋಗಲಿ”, ಅ೦ದರು…. ‘ಏನು, ಮತ್ತೊಮ್ಮೆ ಹೇಳಿ ಸರಿಯಾಗಿ ಕೇಳಿಸ್ತಿಲ್ಲ’ ಅ೦ದೆ. ಅದನ್ನೆ ಇನ್ನಷ್ಟು ಸ್ಪಷ್ಟವಾಗಿ ಮತ್ತೊಮ್ಮೆ ಹೇಳಿ phone ಇಟ್ಟರು.  ಡಿಸ್ಕನೆಕ್ಟ್ಆದ ಮೊಬೈಲ್ ನೋಡಿಕೊ೦ಡು ಸುಮ್ಮನೆ ಕು೦ತುಬಿಟ್ಟೆ!  ಒ೦ದೈದು ನಿಮಿಷ ಏನು ತೋಚಲೇ ಇಲ್ಲ. ಅಮ್ಮ ಅಡುಗೆ ಮನೆಯಿ೦ದ ಬ೦ದು, ‘ಏನಾಯ್ತೆ, ಯಾರ್ದು phone?’ ಅ೦ತ ಕೇಳುವ ಹೊತ್ತಿಗೆ,  ಎಪ್ಪುಗಟ್ಟಿದ್ದ ವಿಚಿತ್ರ ಸ೦ಕಟವೊ೦ದು …….........


32 comments:

  1. ವಿಪರ್ಯಾಸವನ್ನು ಸರಿಯಾಗಿ ಚಿತ್ರಿಸಿದ್ದೀರಿ.

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದ ಸುನಾತ್, ನಿಮ್ಮ ಪುಸ್ತಕ ಬಿಡುಗಡೆಗೆ೦ದೆ ಕಾದು ಕುಳಿತ ನಿಮ್ಮ ಅಭಿಮಾನಿ.....

      Delete
  2. Hi roops ma'am..
    Though im not a kan blog fan.. but frm many days I hv been readin ur articles on ur blogs n its awsumly nice... :) ..hereon u hv a new fan hre!!!!

    ReplyDelete
    Replies
    1. Hey, Tx for the read and comment......
      Do I know you Mohammed?

      Delete
  3. ನಮ್ಮ ಸುತ್ತ ಮುತ್ತಲೂ ಎಲ್ಲಾ ತರಹದ ಜನರಿರುತ್ತಾರೆ ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿ. ಮೊದಲೆರಡು ಸಂಗತಿಗಳನ್ನು ಓದಿ ಬಹಳ ಖುಷಿ ಆಯ್ತು. ಕಳೆದ ತಿಂಗಳಿನ ಘಟನೆ ಓದಿ ಬೇಸರವಾಯ್ತು. ಆ ಮದುವೆ ಮನೆಯಲ್ಲಿ ಊಟ ಉಳಿಯದಿದ್ದರೆ ಮತ್ತೆ ಆ ಮಕ್ಕಳಿಗೆ ಊಟವೇ ಕೊಡೋಲ್ವಾ..?? ಅಬ್ಬಾ ಎನಿಸಿತು.

    ReplyDelete
    Replies
    1. Hi ಸುಗುಣ,
      ಪ್ರತಿಕ್ರಿಯೆಗೆ ಧನ್ಯವಾದ! ಊಟ ಕೊಡ್ತೀವಿ ಬನ್ನಿ ಅ೦ತ ಕರೆದು, ಉಳಿದ್ರೆ ಮಾತ್ರ ತಗೊ೦ಡೋಗಿ ಅ೦ತ ಹೇಳೋದನ್ನ ಕೇಳಿ, ಅರಗಿಸಿಕೊಳ್ಳೋಕೆ ತು೦ಬಾ ಕಷ್ಟವಾಯ್ತು.

      Delete
  4. five fingers tell five different stories

    ReplyDelete
    Replies
    1. ಒಪ್ಪಿದೆ ಉಮೇಶ್! ಪ್ರತಿಕ್ರಿಯೆಗೆ ಧನ್ಯವಾದ.

      Delete
  5. ಮೊದಲೆರಡು ಘಟನೆಗಳು ತುಂಬಾ ಖುಷಿಯಾಯ್ತು... ಕೊನೆಯ ಘಟನೆ ನೋಡಿ ಹಾಗೆ ಹೇಳಿದವರಿಗೆ @$%^&#@$#%$^#% ಎಂದು ಬಯ್ದು ಬಿಡುವಷ್ಟು ಸಿಟ್ಟು ಬಂತು :) :)

    ReplyDelete
    Replies
    1. hi ಪ್ರದೀಪ್,
      ನಿಮ್ಮಷ್ಟೆ ಸಿಟ್ಟು ನನಗೂ ಸಹ ಬ೦ತು.... ಇ೦ತವರಿಗೆ ಬುದ್ದಿ ಹೇಳೋದಾದ್ರು ಯಾರು, ಹೇಗೆ ಅ೦ತ ಯೋಚಿಸ್ತಿದ್ದೆ.....
      ಪ್ರತಿಕ್ರಿಯೆಗೆ ಧನ್ಯವಾದ.

      Delete
  6. ಊಟ ಹಾಕುವ, ಅನಾಥರೆಂದು ಜರಿದು ದೂರ ತಳ್ಳುವ ವ್ಯಕ್ತಿಗಳನ್ನು ದಿಕ್ಕರಿಸಬೆಕಾಗಿದೆ. ತಿನ್ನುವ ಅನ್ನವನ್ನು ಹಂಚಿ ತಿನ್ನುವಲ್ಲಿನ ಖುಷಿ ಅರಿಯದ ಮೂರ್ಖರು ಕೆಲವರು. ಆಹಾರ ವೇಸ್ಟ್ ಆಗುತ್ತೆ , ಎಲ್ಲರ ಊಟ ಆದನಂತರ ಉಳಿದದ್ದನ್ನು ಕೊಡುತ್ತೇವೆ ಎಂಬ ದೌಲತ್ತಿನ ಮಾತು ಅವರ ಕೀಳು ಯೋಚನೆಯ ಅನಾವರಣ ಮಾದಿದೆ. ಅಂತಹವರಿಂದ ದೂರವಿದ್ದಷ್ಟು ಸಮಾಜಕ್ಕೆ ಒಳ್ಳೆಯದು . ಮನ ಕರಗುವ ಲೇಖನ ಇದು .

    ReplyDelete
    Replies
    1. ಬಾಲು ಸರ್,
      ಪ್ರತಿಕ್ರಿಯೆಗೆ ಧನ್ಯವಾದ....
      ಕಳೆದ ತಿ೦ಗಳು ನಮ್ಮ NGO ಮಕ್ಕಳು ಮೈಸೂರಿಗೆ ಪ್ರವಾಸಕ್ಕೆ೦ದು ಬ೦ದಾಗ, ನಿಮ್ಮಿ೦ದ ಸಿಕ್ಕ ಸಲಹೆ / ಮಾರ್ಗದರ್ಶನ / ಏರ್ಪಡಿಸಿದ್ದ ರುಚಿ-ರುಚಿ ಭೋಜನ ನಾವ್ಯಾರೂ ಮರೆವ೦ತಿಲ್ಲ ಸರ್. ನಿಮ್ಮ೦ತವರ ಮಧ್ಯೆ ಇ೦ತವರೂ ಇರ್ತಾರೆ....
      Uneven distribution of wealth in the country..... richer are growing richer by wealth and not necessarily by thoughts and deeds

      Delete
  7. ಮೊದಲೆರೆಡು ಘಟನೆಗಳು ನಿಜಕ್ಕೂ ಶಾಘ್ಲನೀಯವಾದದ್ದು ರೂಪಕ್ಕ..... ಎಲ್ಲರಲ್ಲೂ ಇಂತಹ ಮಾನವೀಯ ಮೌಲ್ಯಗಳನ್ನು ಕಾಣುವುದು ಅಪರೂಪ.....
    ಮೂರನೇಯ ಘಟನೆ ಓದಿ ಮನಕ್ಕೆ ಎನೋ ಒಂದು ತರಹ ಸಂಕಟವಾಯಿತು.. ಅನಾಥರ ಬಗ್ಗೆ ಅವರ ಭಾವನೆ ಕಂಡು ಮನಕ್ಕೆ ಬೇಸರವಾಯಿತು...

    ReplyDelete
    Replies
    1. ನಿಜ ಸಹನ,
      ನನಗೂ ಸಹ ಬಹಳ ಬೇಸರವಾಯ್ತು, ಮತ್ತೊಮ್ಮೆ ಮತ್ತೊಮ್ಮೆ ಈ ಆ೦ಟಿ ಸಿಗ್ತಿರ್ತಾರೆ - ನಾಟಕದ ನಗೆ ಬೀರೋಕೂ ಮನಸು ಇರುಸು-ಮುರುಸು ಅ೦ತಿದೆ.

      Delete
  8. ಕೆಲವರಿಗೆ ಇನ್ನೊಬರ ಸಹಾಯಕ್ಕೆ ನಿಲ್ಲುವುದು ಪ್ರತಿಷ್ಟೆಯ ವಿಷಯ ಇರಬಹುದು......... ಒಳ್ಳೆ ಆಲೋಚನೆ ಇದ್ದರೆ ಸಾಲದು, ಅದನ್ನು ಒಳ್ಳೆ ರೀತಿ ಆಚರಣೆಗೆ ತರುವ ಮನಸು ಇರಬೇಕು ಅನ್ನುವುದಕ್ಕೆ ನಿಮ್ಮ ಕಥೆ ತಕ್ಕ ಉದಾಹರಣೆ ಬಿಡಿ........

    ಪ್ರದೀಪ್....... ಅದೇನದು ಸಿಂಬಲ್ ಲ್ಯಾಂಗ್ವೇಜ್....... ಅರ್ಥ ಆಗ್ಲಿಲ್ಲ :P

    ReplyDelete
    Replies
    1. Naveen adu Self-Censored language for bad people:)

      Delete
    2. ಒಳ್ಳೆ ಆಲೋಚನೆ ಇದ್ದರೆ ಸಾಲದು, ಅದನ್ನು ಒಳ್ಳೆ ರೀತಿ ಆಚರಣೆಗೆ ತರುವ ಮನಸು ಇರಬೇಕು ಅನ್ನುವ ನಿಮ್ಮ ಮಾತು ಒಪ್ಪಿದೆ ನವೀನ್!
      ಯಾರಲ್ಲ್ಲುಉಪೇಕ್ಷಿತ ಭಾವ / ಕೊರಗು ಬರದಂತೆ ಸಹಕರಿಸಬೇಕು ಅನ್ನುವುದನ್ನೇ ಮರೆತೋಗ್ತಾರೆ ಜನರು.
      ಪ್ರತಿಕ್ರಿಯೆಗೆ ಧನ್ಯವಾದ.
      =================

      Delete
  9. ಮೊದಲ ಸಲ ಮನಸ್ಸಿಗೆ ಅರ್ಥವಾಗದ ಭಾವ ಸುಳಿದುಹೋದ ಅನುಭವ ಗೋಪೀಜೀ ಮತ್ತು ಮೈಸೂರು ಮದುವೆಗಳ ಅನುಭವದಿಂದ ಪ್ರಾಪ್ತವಾಯಿತು.

    ಜೊತೆಗೆ, ಮಿಕ್ಕಾನ್ನ ಬಡಿಸುವ ಮಹಾ ದಾನಿಯ ಕಥೆ ಮಹಾ ಸಿಟ್ಟು ತರಿಸಿತು.

    ಹಾಗೂ ಇರುತ್ತಾರೆ - ಹೀಗೂ ಇರುತ್ತಾರೆ! :) :(

    ReplyDelete
    Replies
    1. b.p. ಅವ್ರೆ,
      ಪ್ರತಿಕ್ರಿಯೆಗೆ ಧನ್ಯವಾದ.
      ನಿಮ್ಮ ಮಾತು ನಿಜ, ಎಲ್ಲ ರೀತಿಯ ಜನರಿರೋದು ನಾವು ನೋಡೇ ಇದ್ದೀವಿ. ಕೆಲವೊಮ್ಮೆ ಅರಗಿಸಿಕೊಳ್ಳುವುದು ಸ೦ಕಟ.

      Delete
  10. ದೀದೀ........................................................
    :( :(

    ReplyDelete
    Replies
    1. ಕ್ಯಾ ಬೋಲು ಭಾಯ್ .............. :( :(

      Delete
  11. Replies
    1. ಹೌದು ಮ೦ಜುಳ.....
      ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ.

      Delete
  12. ಉಳಿದ ಅನ್ನ ಬಡಿಸುವುದು ಒಂದು ಮಟ್ಟಿಗೆ ಸರಿ...
    ಆದರೆ ಕರೆದು ಉಳಿದರೆ ಮಾತ್ರ ಬಡಿಸುವುದೆಷ್ಟು ಸರಿ....

    ಕರೆಯದೇ ಇದ್ದರೇ ಚನ್ನ.....

    ReplyDelete
    Replies
    1. ಹೌದು ರಾಘವ್......
      ನಿಮ್ಮ ಮಾತು ಸರಿ....

      Delete
  13. "ಕು೦ತಿರಲಿ, ಎಲ್ಲರು ತಿ೦ದು ಉಳಿದರೆ ಮಾತ್ರ ತೆಗೆದು ಕೊ೦ಡು ಹೋಗಲಿ”,.....high-tech. bhaavagalu...... :(

    ReplyDelete
    Replies
    1. ಏನೋ ಸರ್, ಭಾವುಕರಾದ ನಮಗೆ ಇ೦ತ ಉತ್ತರಗಳು ತು೦ಬ ನೋವು೦ಟು ಮಾಡುತ್ತೆ.....

      Delete
  14. ಅರ್ಥವಾಗದ ಎಷ್ಟೋ ವಿಷಯಗಳಲ್ಲಿ ಇದು ಒಂದು. ಮನೆ ಕಟ್ಟುವ ಕೆಲಸಗಾರರಿಗೆ ಕಡೆಯಲ್ಲಿ ಊಟ, ಮದುವೆ ಮನೆಯಲ್ಲಿ, ಸಂಭ್ರಮದ ಸಡಗರದಲ್ಲಿ ದುಡಿಯುವ ಜೀವಿಗಳಿಗೆ ಕಡೆಯಲ್ಲಿ ಊಟ ಯಾಕೆ ಹೀಗೆ ಎನ್ನುವ ಸಂಕಟ ಕಾಡುತ್ತದೆ. ಹೌದು ಹಲವಾರು ಬಾರಿ ಅವರ ಸಹಾಯ ಹಸ್ತ ಕಡೆಯ ತನಕ ಬೇಕಾಗಿರುತ್ತದೆ ಹಾಗಾಗಿ ಎಲ್ಲ ಕೆಲಸ ಮುಗಿದಮೇಲೆ ಊಟ ಎನ್ನುವ ವಾದವು ಸರಿ ಇದ್ದರು.. ಅವರುಗಳು ಊಟ ಮಾಡುವಾಗ ಆ ಸಂಭ್ರಮದ ಒಡೆಯರು ಯಾರೂ ಅಲ್ಲಿಗೆ ಬರದಿರುವುದು ಸರಿ ಅನ್ನಿಸೊಲ್ಲ. ಎರಡು ಮದುವೆಗಳ ಸಂಭ್ರಮದ ಬಗ್ಗೆ ಓದಿದಾಗ ಮನಸ್ಸು ಉಬ್ಬಿಬಂತು... ಅಬ್ಬ ಮಾನವೀಯತೆ ಎನ್ನುವ ಪದ ಇನ್ನೂ ಉಳಿದಿದೆ ಎನ್ನುವ ಸಮಾಧಾನದ ಗಾಳಿ ಬುರುಡೆಗೆ ಸೂಜಿ ಚುಚ್ಚಿದ ಅನುಭವ ಕಡೆಯ ಪ್ರಸಂಗ..

    ReplyDelete
    Replies
    1. ನಿಜ ಶ್ರೀ.... ಧನ್ಯವಾದ ಓದಿಗೆ, ಪ್ರತಿಕ್ರಿಯೆಗೆ :)

      Delete
  15. modaleradu sangatigalu santasavaayitu,nantaraddu nijavaagiyu khedavenisitu.hanchi tinnuva mahatvavariyada varigaagi vishadavaguttade.uttama lekhanakkaagi dhanyavaadagalu.

    ReplyDelete
  16. ಆತ್ಮೀಯತೆಗೂ.. ಔಪಚಾರಿಕಕ್ಕೂ ಇಷ್ಟೇ ವ್ಯತ್ಯಾಸ.. ! ನಾಲ್ಕು ಮಕ್ಕಳು ತಿಂದು ಸಂತೋಷಪಡಲಿ ಎನ್ನುವ ಭಾವವೆ ಬೇರೆ... ಉಳಿದಿದ್ದನ್ನು ತಿಂದುಹೋಗಲಿ ಎನ್ನುವ ಭಾವವೇ ಬೇರೆ. ಈ ನಡವಳಿಕೆ ಇರುವೆಡೆ ಮಕ್ಕಳನ್ನು ಕರೆದುಕೊಂಡು ಹೋಗದಿರುವುದೇ ಒಳಿತು. ರಾತ್ರಿ ಇಟ್ಟರೆ ಬೆಳಿಗ್ಗೆ ಹಾಳಾಗುವ ಅನ್ನದ ಬಗ್ಗೆಯೇ ಹೀಗೆ ಮಾತನಾಡುವವರು ಇನ್ನು ಆಸ್ತಿ ವಿದ್ಯೆ ಸಂಪತ್ತಿನ ಬಗ್ಗೆ ಹೇಗೆ..? ಈ ಕಟು ನುಡಿಗಳು ಮಕ್ಕಳ ಕಿವಿಗೆ ಬಿದ್ದರೆ ... ? ವಿಷಯವನ್ನು ಕೇಳಿದ ನಮಗೇ ಬೇಸರ ಆಗುತ್ತಿರುವಾಗ ಇನ್ನು ಆ ಮಕ್ಕಳ ಒಡನಾಟದಲ್ಲಿರುವ ನಿಮ್ಮ ಸ್ಥಿತಿ..? ನಮ್ಮ ಪ್ರಾಣಪ್ರಿಯವಾದ ಅನ್ನ ಒಂದೆಡೆಯಾದರೆ.. ಅವಿವೇಕದ ಮಾತು ಒಂದೆಡೆ.. :( ಅಂತಃಕರಣ ಮರೆತ ಅಂತಸ್ತುಳ್ಳವರು... !!

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...