Saturday, April 5, 2014

ದೇವರ ಹೂInline image 1

ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. 

"ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"....
"ಅಲ್ಲೇ ಇಡು. ಅಲ್ಲೇ, ಅಲ್ಲೇ. ಎರಡು ಹಾರ ಜಾಸ್ತಿ ತ೦ದಿದ್ದೀ ತಾನೆ? ತುಳಸಿ ಮಾಲೆ ಬೇರೆಯಾಗಿ ಕಟ್ಟಿದ್ದೀಯ? ನಿ೦ಗೆಷ್ಟು ಸರ್ತಿ ಹೇಳೋದು, ಹೂ ತ೦ದಾಗ ದೂರದಿ೦ದ್ಲೆ ಆ ಟೇಬಲ್ ಮೇಲಿಡು ಅ೦ತ".... "ಬ೦ದಾಗ್ಲೆಲ್ಲ ಅದೂ ಇದೂ ಮುಟ್ಕೊ೦ಡೇ ಹೋಡಾಡ್ತೀಯ!", ಕೆ೦ಚಿಯ ಕಡೆ ದುರದುರನೆ ನೋಡಿ ಗೊಣಗಾಡಿದರು ಶಾ೦ತಮ್ಮ.

"ಇನ್ನೂ ಇಲ್ಲೇ ನಿ೦ತಿದ್ದೀಯ? ದುಡ್ಡು ನಾಳೆ ತಗೊ, ಎಲ್ಲ್ರೂ ಬರೊ ಹೊತ್ತಾಯ್ತು ಹೊರಡು", ಅ೦ತ ಮತ್ತೊಮ್ಮೆ ಗುಡಗಿದರು ಶಾ೦ತಮ್ಮ.

"ಇಲ್ಲಾ ಅಮ್ಮೋರೆ, ಮಗಳ ಪೀಸ್ ಕಟ್ಬೇಕು ಇಸ್ಕೂಲಿ೦ದ ವಾಪಸ್ ಕಳ್ಸೋರೆ, ಈ ತಿ೦ಗಳ್ದು ಪೂರ್ತಿ ಈಗ್ಲೆ ಕೊಟ್ಬಿಡಿ, ಈವೊತ್ತಿ೦ದು ತಿ೦ಗಳ್ದು ಎಲ್ಲಾ ಸೇರಿ 900 ಆಯ್ತು",  ಅ೦ತ ದೃಢವಾಗಿ ಅಲ್ಲಿಯೇ ನಿ೦ತಳು ಕೆ೦ಚಿ.

"ಅದ್ಯಾಕೆ ಆ ವಯ್ಯಾರ, ಸರಿಯಾಗಿ ಕೇಳು. ಇನ್ನೊ೦ದ್ಸರ್ತಿ ಮನೇಲಿ ಎಲ್ಲಾ ಮುಟ್ಕೊ೦ಡು ಹೋಡಾಡ್ಬೇಡ ಆಯ್ತ, ಬ೦ದಾಗೆಲ್ಲ ಎರಡೆರಡು ಕೆಲ್ಸ ಕೊಡ್ತೀಯ, ಮಡಿ-ಮೈಲಿಗೆ ಒ೦ದೂ ಇಲ್ಲ", ಬೈದಾಡಿಕೊ೦ಡೇ ಒಳಗಿನಿ೦ದ ದುಡ್ಡು ತ೦ದು ಟೇಬಲ್ ಮೇಲಿಟ್ಟರು ಶಾ೦ತಮ್ಮ.


"ದ್ಯಾವ್ರೆ! ಆ ಕುಡ್ಕನ್ ಕಣ್ಗೆ ಬೀಳೋಕಿನ್ಮು೦ಚೆ ಈ ದುಡ್ಡಿಗೇನೇನ್ ಬರ್ತದೊ ಎಲ್ಲಾ ತಕ್ಕೊ೦ಡು ಮನೀಕಡೆ ಹೊಳ್ಟೋಗ್ಬೇಕು", ಅ೦ತ ಗ೦ಡನನ್ನ ಶಪಿಸಿಕೊ೦ಡು ಬಶೀರಣ್ಣನ ಅ೦ಗಡಿಯ ಕಡೆ ನಡೆದಳು ಕೆ೦ಚಿ.

ಮನೆ ತಲುಪಿದಾಗ ಚಾಪೆ ಮುದುರಿಕೊ೦ಡು ಕುಳಿತಿದ್ದ ಕೆ೦ಚಿಯ ಮಗಳು, "ಇವತ್ತಾದ್ರು ಅಮ್ಮೋವ್ರಿಗೆ ಹೇಳಿದ್ಯಾ ಅಮ್ಮಯ್ಯ?" ಅ೦ತ ಸಣ್ಣದಾಗಿ ಕೇಳಿದಳು. "ಇಲ್ಲಾ ಮಗ, ಅವ್ರಿಗೆ ಹೇಳ್ದೆ ಅ೦ತಿಟ್ಕೊ ಇನ್ನ ಮಡಿ, ಮೈಲ್ಗೆ, ಅನಿಷ್ಟ ಅ೦ತ ಹನ್ನೊ೦ದು ದಿನಾನೊ ಹದ್ಮೂರ್ ದಿನಾನೊ ನಮ್ತಾವ ಹೂವೇ ತಕ್ಕಳಲ್ಲ. ಸೂತ್ಕ ತೆಗಿಯೋಗ೦ಟ ಮನೆಗೆ ಬರ್ಬೇಡ ಅ೦ತಾರೆ. ಇವತ್ತು ಪೆಶಲ್ ಪೂಜೆ, ವರ್ತನೆ ಹೂಗಿ೦ತ ದಾಸ್ತಿನೇ ಕೇಳಿದ್ರು, ನಾನೇನಾರ ಹಿ೦ಗೆ ಅ೦ದಿದ್ರೆ ಇದ್ನೂ ಬೇಡ ಅ೦ತ ಬುಟ್ಬುಡ್ತಿದ್ರಷ್ಟೇಯಾ.  ನೀನು ಅದ್ನೆಲ್ಲಾ ಯೋಚ್ನೆ ಮಾಡ್ಬೇಡ ಬುಡು, ಮುತ್ತೈದೇರ್ಗೆ ಹೇಳಿವ್ನಿ, ಎಲ್ರೂ ಬ೦ದು ನಿ೦ಗೆ ಆರ್ತಿ ಮಾಡ್ತವ್ರೆ. ನಿ೦ಗಿನ್ನು ಹಸಿ ಮೈ, ಎಲ್ಲ೦ದ್ರಲ್ಲಿ ಕೂರ೦ಗಿಲ್ಲ, ಸಿಕ್ಕಿದ್ನೆಲ್ಲ ತಿನ್ನ೦ಗಿಲ್ಲ ಆತಾ", ಅ೦ತ ತನ್ನ ಮುದ್ದಾದ ಕರುಳ ಬಳ್ಳಿಯ ಕಡೆ ಮಮತೆಯ ನೋಟ ಬೀರಿದಳು. 

ಅಷ್ಟಕ್ಕೇ ಸುಮ್ಮನಿರದ ಮಗಳು, "ನೀ ಹಿ೦ಗೆಲ್ಲ ಮಾಡಿದ್ರೆ ದ್ಯಾವ್ರಿಗೆ ಕೋಪ ಬರ೦ಗಿಲ್ವ ಅಮ್ಮಯ್ಯ?" ಅ೦ತ ತನ್ನ ಕುತೂಹಲ ಹೊರಗಿಟ್ಟಳು."ಬರ್ತದೆ, ಕೋಪಾನು ಬರ್ತದೆ, ಶಾಪಾನು ಕೊಡ್ತಾನೆ. ಅದೆಲ್ಲಾ ನ೦ಗೆ ತಾನೆ, ನಿ೦ಗಲ್ವಲ್ಲ ಬುಡು."

"ದ್ಯಾವ್ರ ಪಾದಕ್ಕೆ ಸೇರಿದ್ಮೇಲೆ ಎಲ್ಲಾ ಹೂವು ಮಡಿ ಆಗೋಗ್ತದೆ", ಅ೦ತ ಹೇಳಿಕೊ೦ಡು ಬಶೀರಣ್ಣನ ಅ೦ಗಡಿಯಿ೦ದ ತ೦ದ ಸಾಮಾನುಗಳ ಕಡೆಗೆ ಕಣ್ಣಾಡಿಸುತ್ತ ಕು೦ತಳು ಕೆ೦ಚಿ.

*  *  *  *  * 
ಶಾನಭೋಗರ ಪೂಜೆ, ಶಾ೦ತಮ್ಮನ ಮಡಿ, ಅಮ್ಮನ ಅಸಹಾಯಕತೆ - ಮಮತೆ ಇವುಗಳ ನಡುವೆ ಆ ದೇವರ ಹೂವು......... 

32 comments:

 1. nice twist..good one if you have time plz visit my blog too

  ReplyDelete
  Replies
  1. hi Umesh,
   Yes I visit your blog too :) thank you for your comments here.

   Delete
 2. ಮಡಿ ಮೈಲಿಗೆ ಎಂಬ ಎರಡು ಶಬ್ಧಗಳು ನಾನು ಚಿಕ್ಕನಿರುವಾಗ ಬಿಡಿಸಲಾಗದ ಒಗಟಾಗಿತ್ತು. ನಾವು ಹೋಟೆಲಿನಲ್ಲಿ ಚಹಾ ಕುಡಿಯುವಾಗ ಕೆಲವರಿಗೆ ಹೊರಗಡೆ ತೆಂಗಿನ ಚಿಪ್ಪಿನಲ್ಲಿ ಚಹಾ ಕೊಡುತ್ತಿದ್ದರು. ಕೆಲವು ವರ್ಗದ ಜನರಿಗೆ ಕೆಲವರು ಮನೆಯ ಒಳಗೆ ಬರಲೂ ಬಿಡುತ್ತಿರಲಿಲ್ಲ. ದೇವಸ್ಥಾನದ ಒಳಗೂ ಕೆಲವರಿಗೆ ಪ್ರವೇಶವಿರಲಿಲ್ಲ. ಯಾಕಿದು? ಎಂದು ಮನೆಯವರಲ್ಲಿ ಕೇಳಿದರೆ ಆತ್ಮ ತೃಪ್ತಿ ಉತ್ತರ ಸಿಗುತ್ತಿರಲಿಲ್ಲ. ದೇವರ ಮೊರೆ ಹೋದರೆ ದೇವರು ಬಾಯಿ ತೆರೆಯುತ್ತಿರಲಿಲ್ಲ. ಕೆಂಚಿಯ ಕತೆಯೂ ಇದೇ ಅಲ್ಲವೇ? ಯಾವಾಗ ಈ ಜಾತೀಯತೆ ಸುಟ್ಟು ಹೋಗುತ್ತೋ....ಚಿಕ್ಕ ಚೊಕ್ಕ ಕತೆ ಚೆನ್ನಾಗಿದೆ. ಬಾಲ್ಯ ನೆನಪಿಗೆ ಬಂತು. ಆದರೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು.

  ReplyDelete
  Replies
  1. namma anubhavagaLu chinthanege doodiruvudu nija Sir. Ide reethiya eshto prashnegaLige nanagoo saha uttara siguttilla. kanna munde enu kaanuttado ade sathya andukoLthivi, vasthava bereye irutte......
   odi, prathikriye needidakkaagi dhanyavadagaLu.

   Delete
 3. ನಿರೂಪಣೆ ಚೆನ್ನಾಗಿದೆ! ಶಾನಭೋಗರ ಮಡಿ ಮೈಲಿಗೆ ಕೆಂಚಿಯ ಜೀವನೋಪಾಯಕ್ಕೆ ಕುತ್ತು ತಂದಿದ್ದು ವಿಷಾದನೀಯ

  ReplyDelete
 4. ಒಂದು ಅಸಹಾಯಕ ಮಾತೃ ಹೃದಯ, ಮನೆಯ ಸಂಭ್ರಮವನ್ನೂ ಹೊರಗೆ ಹೇಳಿಕೊಳ್ಳಲಾಗದ ಆರ್ಥಿಕ ಕಾರಣ ಮತ್ತು ಇನ್ನೂ ತೊಡೆದು ಹೋಗದ ಅನಿಷ್ಟ ಜಾತಿ ಪದ್ದತಿ - ಹೀಗೆ ಮೂರು ಆಯಾಮಗಳನ್ನು ವಿಷಾದದಿಂದ ತೆರೆದಿಟ್ಟ ಲಘು ಬರಹ.
  ಗ್ರಾಮೀಣ ಭಾಷಾ ಬಳಕೆಗೆ ಇನ್ನೂ ಹೆಚ್ಚಿನ ಮೆಚ್ಚುಗೆ.

  ReplyDelete
 5. ಕಥೆ ಚೆನ್ನಾಗಿದೆ, ತನ್ನ ಕರುಳ ಬಳ್ಳಿಯ ಮಮತೆಯ ಮುಂದೆ ಏನೇ ಬಂದರೂ ಎದುರಿಸುವೆ ಎಂಬ ಕೆಂಚಿ ಯ ಪಾತ್ರ ಮನದಲ್ಲಿ ನಿಲ್ಲುತ್ತದೆ. ಕಥೆ ತೆಗೆದು ಕೊಂದು ಹೋದ ರೀತಿ ಬಹಳ ಚೆನ್ನಾಗಿದೆ. ನನಗೆ ಇಷ್ಟಾ ಆಯ್ತು ರೂಪ ಮೇಡಂ ,

  ReplyDelete
 6. ಕತೆಯು ಚಿಕ್ಕದಾದರೂ ಇದರ impact ದೊಡ್ಡದೇ ಆಗಿದೆ.

  ReplyDelete
  Replies
  1. Sunaath Sir,
   prathikriyege preethiya dhanyavaadagaLu. Nimma maathu endigoo ashirvaadadanthe ......

   Delete
 7. ರೂಪಾ ಅವರೇ
  ಮುಟ್ಟಬೇಡ
  ನೀನು ಮುಟ್ಟಾಗಿದೀಯ!
  ಮರೆಯಬೇಡ
  ಭೂಮಿ ತಾಯಿ ಕೂಡ ಹೆಣ್ಣು !!
  ನಾನು ಫೇಸ್ಬುಕ್ ನಲ್ಲಿ ಹಾಕಿದ ಕವಿತೆ ಇದು, ನನ್ನ ಬ್ಲಾಗನಲ್ಲಿ ಪಬ್ಲಿಶ್ ಮಾಡೋಕೆ ಮರೆತಿದ್ದೆ.
  ತುಂಬಾ ಚೆನ್ನಾಗಿದೆ ಕತೆ, ಇದು ಕತೆಯಲ್ಲ, ಇನ್ನು ಎಷ್ಟೋ ಮನೆಗಳಲ್ಲಿ ನಡೆಯುತ್ತಿರುವ ದೃಶ್ಯ.
  ಕೆಲವೇ ಸಾಲುಗಳಲ್ಲಿ ಜೀವನದ ವಾಸ್ತವವನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಿರ.

  ReplyDelete
  Replies
  1. Yes Nivedita, thank you for sharing your viewpoint.

   Delete
 8. ದೇವರ ಪಾದ ಸೇರಿದ ಎಲ್ಲ ಹೂಗಳು ಮಡಿಯಾದ್ವು
  ದಿಟ ....ಪುಟ್ಟ ಕಥೆಯಲ್ಲಿ ಹೆಣ್ತನದ ಅಸಹಾಯಕತೆ , ತಾಯ್ತನದ ಮಹತ್ವ
  ಎಲ್ಲವೂ ಅರಿವಾಗುವಂತೆ ಸುಂದರವಾಗಿ ಬರೆದಿದ್ದೀರಿ.

  ReplyDelete
  Replies
  1. Dhanyavaada Swarna, odige - pratikriyege :)

   Delete
 9. ನಿಮ್ಮ ಬರಹ ಓದಿದ ನನಗೆ ಅನಿಸಿದ್ದು...

  ನಿರ್ಮಾಪಕನಿಗೆ ನಿಷೇಧ...!
  ___________

  ನಾಯಕನ್ಯಾರು? ನಿರ್ಮಾಪಕನ್ಯಾರು?
  ನೋಡಯ್ಯ ನೋಡು...
  ನೀನೇ ನಿರ್ಮಿಸಿದ ನಾಡಿದು
  ನಿನಗೀಗ ನಿಷೇಧವಿಲ್ಲಿ
  ನೀನೆದುರೇ ನಿಂತರು ನೋಡದ
  ನಿನ್ನ ನಾಟಕದ ನಾಯಕರನ್ನು ನೀ ನೋಡು!

  (ನನ್ನ ಹಳೆ ಬ್ಲಾಗ್ ಪೋಸ್ಟ್...)

  ReplyDelete
  Replies
  1. Hi Vijay,
   nimma kavanada saaramsha aashaya mana muttide, namma indina sthitigathigaLalli bhagavanthanigoo nishedavide!
   Odi, prathikriye needidakkaagi dhanyavaada.....

   Delete
 10. ಭಾಳ್ ಛಂದ ಬರದಿಯವ್ವಾ..
  Heart touching.....

  ReplyDelete
 11. ಬಹಳ ಚಂದದ ಕಥೆ ರೂಪಕ್ಕ. ಚಿಕ್ಕದಾಗಿ ಮುಗ್ಸಿರೋದಕ್ಕೆ ಸಿಟ್ಟಿದೆ. :D :D

  ReplyDelete
  Replies
  1. oho.... aagaadre opposite pada heege heLidre hegirutte:
   Roopa's Blog x Satish's Blog :)
   Sats, nangishte bareyoke barodu ...... Thanks for the read and comment :)

   Delete
  2. ಇತ್ತೀಚಿಗೆ ಸಮಾಜದಲ್ಲಿ ಬದಲಾವಣೆ ಆಗಿದೆ. ಇದು ಓಬಿರಾಯನ ಕಾಲದ ವಿಷಯ.

   Delete
  3. Namasthe Sir,
   Odi prathikriye neeDidakke preetiya dhanyavaadagaLu. Nimma maathu nija, samaaja badalaagide, innu sampoornavaagi badalaagali annuvude aashaya ashte. Nimma hesru gottaaglilla Sir.

   Delete
  4. Namasthe Sir,
   Obiraayana kathe antha summanaadvi, matte inthadde ondu Bangaloorinantha mahanaagariyalli .... illondu example, ninne monne naDeda vishaya. Omme clickkisi, kannaayisi :
   https://www.facebook.com/deepada.malli/posts/268696510008159?comment_id=270622183148925&notif_t=like

   Delete
 12. ಹಹಹ...ಚನ್ನಾಗಿದೆ ಕಥೆ..ಮಡಿಯಿಂದ ನಡೆಯೋದು ಆಚರಣೆ ಆದರೂ ಮಡಿ ನೆಪದಲ್ಲಿ ಕರ್ತವ್ಯ ಮತ್ತು ಕಾಳಜಿ ಮರೆಯದ ಕೆಂಚಿ ಅಮ್ಮನ ಮನಸು..ಸೂಪರ್ ನೀರೂಪಣೆ... ( ನೀರಿನಂತೆ ಹರಿದ ನಿರೂಪಣೆ ಅದಕ್ಕೆ)

  ReplyDelete
  Replies
  1. Azad Bhai,
   Thank you, odi pratikriye needi, protsaahistheera :) dhanyavaada.

   Delete
 13. ಇವತ್ತು ನಿನ ಬರವಣಿಗೀನಾ ಓದ್ದೀ, ಪ್ರಜಾವಾಣೀಲಿ.
  ಚಂದಾಗಿತ್ತು. ಸಾಹಸಿ ಅನ್ನಿಸ್ತು. ಶುಭಂ.

  ReplyDelete
 14. ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ. ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. http://sudhieblog.blogspot.in/2014/05/blog-post.html

  ReplyDelete

"ಆನ್ ಸುಲ್ಲಿವನ್" ಎಂಬ ಪಂಜು !!!

"When one door of happiness closes, another opens; but often we look so long at the closed door that we do not see the one which h...